ಆ್ಯಪ್ನಗರ

ಬಿಎಸ್‌ವೈ ಸಿಎಂ ಪದವಿಯಿಂದ ಕೆಳಗಿಳಿಯಲಿ, ಮಾರ್ಗದರ್ಶಕರಾಗಲಿ ಇಲ್ಲ ರಾಜ್ಯಪಾಲರಾಗಲಿ: ಹರಿದಾಡುತ್ತಿದೆ ಅನಾಮಧೇಯ ಪತ್ರ

ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ನಿವಾಸದಲ್ಲಿ ಸೋಮವಾರ ತಡ ರಾತ್ರಿ ಕೆಲ ಶಾಸಕರು ಸಭೆ ಸೇರಿರುವುದು ಬಿಜೆಪಿಯಲ್ಲಿ ರಾಜಕೀಯ ಬಿರುಗಾಳಿ ಏಳಲಿದೆ ಎಂಬ ಮಟ್ಟಕ್ಕೆ ಚರ್ಚೆಯಾಗಿದೆ...

Vijaya Karnataka Web 18 Feb 2020, 10:29 pm
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಹುನ್ನಾರ ನಡೆದಿದೆಯೇ? ಹೀಗೊಂದು ಪ್ರಶ್ನೆ ರಾಜಕೀಯ ಪಡಸಾಲೆಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ರೀತಿಯ ಚರ್ಚೆಗೆ ಪುಷ್ಟಿ ನೀಡುವ ವಿದ್ಯಮಾನಗಳು ನಡೆದಿದೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಇದಕ್ಕೆ ಕಾರಣವೂ ಇದೆ. ಏಕೆಂದರೆ ಕಳೆದ ಎರಡು ದಿನಗಳಿಂದ ಅನಾಮಧೇಯ ಪತ್ರ ಹರಿದಾಡುತ್ತಿದ್ದು, ಇದರಲ್ಲಿ ಬಿಎಸ್‌ವೈ ವಿರುದ್ಧ ಬರೆದಿರುವುದು ಗೊಂದಲಕ್ಕೆ ಕಾರವಾಗಿದೆ.

ಸಿಎಂ ಬಿಎಸ್‌ವೈ ಕಾರ್ಯವೈಖರಿ ಬಗ್ಗೆ ಅನಾಮಧೇಯ ಪತ್ರವೊಂದು ಹರಿದಾಡುತ್ತಿದ್ದು ಮತ್ತೊಂದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ವಯೋಸಹಜ ಬಳಲಿಕೆಯ ಕಾರಣ ಬಿಎಸ್‌ವೈ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಬಗ್ಗೆ ಅಪಾರ ಗೌರವವಿದೆ. ಹೈಕಮಾಂಡ್‌ ಬೇಕಾದರೆ ಅವರಿಗೆ ರಾಜ್ಯಪಾಲರ ಹುದ್ದೆ ನೀಡಲಿ. ಇಲ್ಲದಿದ್ದರೆ ಬಿಎಸ್‌ವೈ ಅವರೇ ಮಾರ್ಗದರ್ಶಕರಾಗಿ ನಿಂತು ಹೊಸ ನಾಯಕರಿಗೆ ಅವಕಾಶ ನೀಡಲಿ ಎನ್ನುವುದು ಈ ಅನಾಮಧೇಯ ಪತ್ರದ ಒಕ್ಕಣೆ. ಇದನ್ನು ಬಿಜೆಪಿಯಲ್ಲೇ ಬಿಎಸ್‌ವೈ ಹಿತಶತ್ರುಗಳು ಸೃಷ್ಟಿಸಿ ಹರಿಯ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವರಾದ ಬಿ.ಸಿ.ಪಾಟೀಲ್‌, ಡಾ.ಕೆ.ಸುಧಾಕರ್‌, ''ಯಡಿಯೂರಪ್ಪನವರ ನಾಯಕತ್ವದಲ್ಲಿ ಎಲ್ಲರಿಗೂ ಅಚಲ ವಿಶ್ವಾಸವಿದೆ. ಅವರು ಸಮರ್ಥರಿದ್ದು, ಮುಂದಿನ 3 ವರ್ಷ ಉತ್ತಮ ಆಡಳಿತ ನೀಡುತ್ತಾರೆ'' ಎಂದಿದ್ದಾರೆ.

ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ನಿವಾಸದಲ್ಲಿ ಸೋಮವಾರ ತಡ ರಾತ್ರಿ ಕೆಲ ಶಾಸಕರು ಸಭೆ ಸೇರಿರುವುದು ಬಿಜೆಪಿಯಲ್ಲಿ ರಾಜಕೀಯ ಬಿರುಗಾಳಿ ಏಳಲಿದೆ ಎಂಬ ಮಟ್ಟಕ್ಕೆ ಚರ್ಚೆಯಾಗಿ ಗೊಂದಲವುಂಟಾಯಿತು.

ಮಂಗಳವಾರ ಬೆಳಗ್ಗೆ ಯಡಿಯೂರಪ್ಪ ನಿವಾಸಕ್ಕೆ ತೆರಳಿದ ಜಗದೀಶ್‌ ಶೆಟ್ಟರ್‌ ನಡೆದ ವಿದ್ಯಮಾನದ ಬಗ್ಗೆ ವಿವರ ನೀಡಿದರು. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲವೆಂದು ಸ್ಪಷ್ಟ ಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ