ಆ್ಯಪ್ನಗರ

'ಭಾಗ್ಯಲಕ್ಷ್ಮೀ' ಅನುಷ್ಠಾನಕ್ಕೆ ಮತ್ತೆ ಮುಂದಾದ ಎಲ್‌ಐಸಿ - ಪರಿಶೀಲಿಸಲು ಬಿಎಸ್‌ವೈ ಸೂಚನೆ

ಈ ಹಿಂದೆ ಭಾಗ್ಯಲಕ್ಷ್ಮೀ ಯೋಜನೆಗೆ ರಾಜ್ಯ ಸರಕಾರ ಪಾವತಿಸುವ ಪ್ರೀಮಿಯಂ ಮೊತ್ತಕ್ಕೆ 18 ವರ್ಷದ ವೇಳೆಗೆ 1 ಲಕ್ಷ ರೂ. ನೀಡಲು ಎಲ್‌ಐಸಿ ಸಂಸ್ಥೆ ಅಸಹಾಯಕತೆ ವ್ಯಕ್ತಪಡಿಸಿತ್ತು. ಹೀಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಇದರ ಜಾರಿಗೆ ಸರಕಾರ ಮುಂದಾಗಿತ್ತು.

Vijaya Karnataka 22 Dec 2020, 8:43 pm
ಬೆಂಗಳೂರು: 'ಭಾಗ್ಯಲಕ್ಷ್ಮೀ' ಯೋಜನೆ ಸಂಬಂಧದಲ್ಲಿ ಎಲ್‌ಐಸಿಯವರು ನೀಡುವ ಅತ್ಯುತ್ತಮ ಕೊಡುಗೆ ಬಗ್ಗೆ ಪರಿಶೀಲಿಸಿ ಮುಂದುವರಿಯುವಂತೆ ಹಣಕಾಸು ಇಲಾಖೆಗೆ ಸಿಎಂ ಬಿಎಸ್‌ ಯಡಿಯೂರಪ್ಪ ಸೂಚಿಸಿದ್ದಾರೆ.
Vijaya Karnataka Web BS Yediyurappa


ಎಲ್‌ಐಸಿ ವಲಯ ವ್ಯವಸ್ಥಾಪಕಿ ಮಿನಿ ಇಪೆ ನೇತೃತ್ವದ ಎಲ್‌ಐಸಿ ಅಧಿಕಾರಿಗಳ ನಿಯೋಗವು ಸಿಎಂ ಬಿಎಸ್‌ವೈ ಅವರನ್ನು ಮಂಗಳವಾರ ಭೇಟಿ ಮಾಡಿತು. ಪುನಃ ಎಲ್‌ಐಸಿ ಮೂಲಕ ಭಾಗ್ಯಲಕ್ಷ್ಮೀ ಬಾಂಡ್‌ ಯೋಜನೆ ಜಾರಿಗೆ ಅವಕಾಶ ನೀಡುವಂತೆ ಈ ವೇಳೆ ಮನವಿ ಮಾಡಿಕೊಳ್ಳಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಅವರು, "ಭಾಗ್ಯಲಕ್ಷ್ಮೀ ಯೋಜನೆಗೆ ಎಲ್‌ಐಸಿ ನೀಡುವ ಕೊಡುಗೆ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು,’’ ಎಂದು ಅಧಿಕಾರಿಗಳ ನಿಯೋಗಕ್ಕೆ ತಿಳಿಸಿದರು. ಜತೆಗೆ ಈ ಬಗ್ಗೆ ಪರಿಶೀಲಿಸುವಂತೆಯೂ ಹಣಕಾಸು ಇಲಾಖೆಗೆ ಸೂಚನೆ ನೀಡಿದರು.

ಭಾಗ್ಯಲಕ್ಷ್ಮೀ ಯೋಜನೆಗೆ ರಾಜ್ಯ ಸರಕಾರ ಪಾವತಿಸುವ ಪ್ರೀಮಿಯಂ ಮೊತ್ತಕ್ಕೆ 18 ವರ್ಷದ ವೇಳೆಗೆ 1 ಲಕ್ಷ ರೂ. ನೀಡಲು ಎಲ್‌ಐಸಿ ಅಸಹಾಯಕತೆ ವ್ಯಕ್ತಪಡಿಸಿತ್ತು. ಹಾಗಾಗಿ ಅಂಚೆ ಇಲಾಖೆ ಉಸ್ತುವಾರಿಯ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಭಾಗ್ಯಲಕ್ಷ್ಮೀ ಯೋಜನೆಯನ್ನೂ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಈ ಯೋಜನೆ ಅನುಷ್ಠಾನಕ್ಕೆ ಎಲ್‌ಐಸಿ ಮತ್ತೆ ಮುಂದೆ ಬಂದದ್ದರಿಂದ ಪರಿಶೀಲಿಸುವಂತೆ ಸಿಎಂ ನಿರ್ದೇಶಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ನಾಗಲಾಂಬಿಕಾ ದೇವಿ ಸಭೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ