ಆ್ಯಪ್ನಗರ

ಸಿದ್ಧಗಂಗಾ ಶ್ರೀಗಳನ್ನು ಎಳೆದು ತರಬೇಡಿ: ಎಂ.ಬಿ.ಪಾಟೀಲ್‌ಗೆ ಹೊರಟ್ಟಿ ತಾಕೀತು

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ಧಗಂಗಾ ಶ್ರೀಗಳನ್ನು ಎಳೆದು ತರುವುದು ಬೇಡ ಎಂದು ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

Vijaya Karnataka 12 Sep 2017, 8:48 am

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ಧಗಂಗಾ ಶ್ರೀಗಳನ್ನು ಎಳೆದು ತರುವುದು ಬೇಡ ಎಂದು ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ಸಿದ್ಧಗಂಗಾ ಶ್ರೀಗಳು ಸಹಮತ ಸೂಚಿಸಿದ್ದಾರೆ ಎಂಬ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ''ಸಮಾಜಕ್ಕೆ ಒಳ್ಳೆಯದಾಗುವುದನ್ನು ಮಾಡಿ ಎಂದು ಶ್ರೀಗಳು ಸಲಹೆ ಮಾಡಿದ್ದಾರೆ ಎಂಬುದು ನಮಗಿರುವ ಮಾಹಿತಿ'' ಎಂದು ಹೇಳಿದರು.

''ಲಿಂಗಾಯತ ಧರ್ಮದ ವಿಚಾರದಲ್ಲಿ ಎಂ.ಬಿ.ಪಾಟೀಲ್‌ ಹಾಗೂ ಖಂಡ್ರೆ ಅವರು ಬೀದಿಯಲ್ಲಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಈ ವಿಚಾರದಲ್ಲಿ ಶ್ರೀಗಳನ್ನು ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ. ಅವರು ನಡೆದಾಡುವ ದೇವರು. ಅವರು ಏನೇ ಹೇಳಿದರೂ ಅದು ನಮಗೆ ಮಾರ್ಗದರ್ಶನ'' ಎಂದರು.

ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಸಿದ್ಧಗಂಗಾ ಶ್ರೀಗಳ ನಿಲುವಿನ ಬಗ್ಗೆ ಯಾವುದೇ ಹೇಳಿಕೆ ಕೊಡುವುದಿಲ್ಲ. ಮುಂದಿನ 2/3 ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ.

Vijaya Karnataka Web lingayat dharma siddaganga sri basavaraj horatti
ಸಿದ್ಧಗಂಗಾ ಶ್ರೀಗಳನ್ನು ಎಳೆದು ತರಬೇಡಿ: ಎಂ.ಬಿ.ಪಾಟೀಲ್‌ಗೆ ಹೊರಟ್ಟಿ ತಾಕೀತು

-ಬಿ.ಎಸ್‌.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ