ಆ್ಯಪ್ನಗರ

ಕೆಪಿಸಿಸಿಗೆ ಇದುವರೆಗೆ 23 ಅಧ್ಯಕ್ಷರ ನೇಮಕ: ಪೂರ್ಣ ಪಟ್ಟಿ ಇಲ್ಲಿದೆ!

​1970ರಲ್ಲಿ ದೇವರಾಜ ಅರಸ್ ಅವರು ಕೆಪಿಸಿಸಿ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಇದೀಗ ಡಿ. ಕೆ. ಶಿವಕುಮಾರ್‌ ಅವರು ಕೆಪಿಸಿಸಿಯ 23ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಲ್ಲ ಕೆಪಿಸಿಸಿ ಅಧ್ಯಕ್ಷರ ಪಟ್ಟಿ ಇಲ್ಲಿದೆ.

Vijaya Karnataka Web 11 Mar 2020, 4:14 pm
ಬೆಂಗಳೂರು: ಒಂದು ತಿಂಗಳ ತಡವಾಗಿಯಾದರೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ)ಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ.
Vijaya Karnataka Web DKS new


1970ರಲ್ಲಿ ದೇವರಾಜ ಅರಸ್ ಅವರು ಕೆಪಿಸಿಸಿ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಇದೀಗ ಡಿ. ಕೆ. ಶಿವಕುಮಾರ್‌ ಅವರು ಕೆಪಿಸಿಸಿಯ 23ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಡಾ. ಜಿ. ಪರಮೇಶ್ವರ ಅವರ ನಂತರ ದಿನೇಶ್ ಗುಂಡೂರಾವ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾದ ನಂತರ ದಿನೇಶ್ ಗುಂಡುರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂದರ್ಭದಲ್ಲಿಯೇ ಡಿಕೆ ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜಾರಿನಿರ್ದೇಶನಾಲಯದ ಪ್ರಕರಣ ಇದ್ದ ಕಾರಣ ದಿನೇಶ್‌ ಗುಂಡುರಾವ್‌ ಅವರನ್ನೇ ತಾತ್ಕಾಲಿಕವಾಗಿ ಮುಂದುವರಿಸಲಾಗಿತ್ತು.

ಕನಕಪುರ ಟು ಕೆಪಿಸಿಸಿ, ಇದು ಡಿಕೆಶಿ ರಾಜಕೀಯ ಹಿಸ್ಟರಿ

ಕೆಪಿಸಿಸಿ ಅಧ್ಯಕ್ಷರ ಪಟ್ಟಿ
  • 1.ದೇವರಾಜ ಅರಸ್‌: 1970-1972
  • 2. ಕೆ.ಎಚ್‌. ರಂಗನಾಥ್: 1972-74
  • 3. ಕೆ.ಎಚ್‌. ಪಾಟೀಲ್‌: 1974-79
  • 4. ಎಸ್‌. ಬಂಗಾರಪ್ಪ: 1979-1980
  • 5. ಕೆ.ಎಚ್‌. ರಾಥೋಡ್‌: 1980-1983
  • 6. ಕೆ.ಎಚ್. ಪಾಟೀಲ್: 1983-1985
  • 7. ಕೆ.ಎಚ್‌. ರಂಗನಾಥ್: 1985-1986
  • 8. ಆಸ್ಕರ್‌ ಫರ್ನಾಂಡಿಸ್‌: 1986-87
  • 9. ಜನಾರ್ಧನ ಪೂಜಾರಿ: 1987-1988
  • 10. ವೀರೇಂದ್ರ ಪಾಟೀಲ್‌: 1988-1989
  • 11. ಆಸ್ಕರ್‌ ಫರ್ನಾಂಡೀಸ್‌: 1989-1992
  • 12. ವಿ. ಕೃಷ್ಣ ರಾವ್: 1992-1995
  • 13. ಡಿ.ಕೆ. ನಾಯ್ಕರ್‌: 1995-1996
  • 14. ಧರ್ಮಸಿಂಗ್‌: 1996-1999
  • 15. ಎಸ್‌.ಎಂ.ಕೃಷ್ಣ: 1999-2000
  • 16. ವಿ.ಎಸ್. ಕೌಜಲಗಿ: 2000-2001
  • 17. ಅಲ್ಲಂ ವೀರಭದ್ರಪ್ಪ: 2001-2003
  • 18. ಜನಾರ್ಧನ ಪೂಜಾರಿ: 2003-2005
  • 19. ಮಲ್ಲಿಕಾರ್ಜುನ ಖರ್ಗೆ: 2005-2008
  • 20. ಆರ್.ವಿ. ದೇಶಪಾಂಡೆ: 2008-2010
  • 21.ಡಾ.ಜಿ.ಪರಮೇಶ್ವರ: 2010-2018
  • 22. ದಿನೇಶ್ ಗುಂಡುರಾವ್‌: 2018-19
  • 23. ಡಿ.ಕೆ. ಶಿವಕುಮಾರ್‌: 2020- ಇಲ್ಲಿಯವರೆಗೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ