ಆ್ಯಪ್ನಗರ

ಮಹದಾಯಿ ಹೋರಾಟಗಾರರಿಗೆ ಸಿಗಲಿಲ್ಲ ರಾಜ್ಯಪಾಲರ ಭೇಟಿ ಅವಕಾಶ

ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದ ರೈತರು

Vijaya Karnataka Web 27 Dec 2017, 4:43 pm
ಬೆಂಗಳೂರು: ಮಹದಾಯಿ ನದಿ ವಿವಾದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ್ ಆಚರಣೆಯಾಗುತ್ತಿದ್ದರೆ, ಇತ್ತ ರಾಜಧಾನಿ ಬೆಂಗಳೂರಿನಲ್ಲಿ ರೈತ ಹೋರಾಟಗಾರರು ಮನವಿ ಸಲ್ಲಿಕೆಯಲ್ಲಿ ನಿರತರಾಗಿದ್ದಾರೆ.
Vijaya Karnataka Web mahadayi farmers continue protest in bengaluru
ಮಹದಾಯಿ ಹೋರಾಟಗಾರರಿಗೆ ಸಿಗಲಿಲ್ಲ ರಾಜ್ಯಪಾಲರ ಭೇಟಿ ಅವಕಾಶ


ಮಹದಾಯಿ ಹೋರಾಟಗಾರರು ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೋರಿದ್ದರು. ಆದರೆ ಅವರಿಗೆ ರಾಜ್ಯಪಾಲರ ಭೇಟಿ ಅವಕಾಶ ಸಿಗಲಿಲ್ಲ, ರಾಜ್ಯಪಾಲರ ಕಾರ್ಯದರ್ಶಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು ಎಂದು ಹೋರಾಟಗಾರರ ಸಂಘದ ವಿರೇಶ್‌ ಸಿಬರದಮಠ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿರೇಶ್‌, ರಾಜ್ಯಪಾಲರನ್ನು ಭೇಟಿ ಮಾಡಲು ಮಂಗಳವಾರ ನಿರ್ಧರಿಸಿದೆವು. ಆದರೆ ನಮಗೆ ಭೇಟಿ ಅವಕಾಶ ಸಿಗಲಿಲ್ಲ ಎಂದು ತಿಳಿಸಿದರು.

ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ರೈತ ಹೋರಾಟಗಾರರು ರಾಜ್ಯ ಚುನಾವಣಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಮನವಿ ಪತ್ರ ಸಲ್ಲಿಸಿದರು.

ಮಹದಾಯಿ ನದಿ ನೀರು ಹಂಚಿಕೆ ವಿವಾದ ಮುಗಿಯುವವರೆಗೂ ಚುನಾವಣೆ ನಡೆಸಬಾರದು ಎಂದು ರೈತರ ಹೋರಾಟಗಾರರು ಮನವಿ ಸಲ್ಲಿಸಿದರು.
ಈ ನಡುವೆ, ರೈತರನ್ನು ರಾಜಭವನದೊಳಗೆ ಬಿಡಬೇಕು, ರಾಜಭವನದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಘೋಷಣೆ ಕೂಗುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ