ಆ್ಯಪ್ನಗರ

ರೈಲ್ವೆ ಎಂಜಿನ್‌ನಲ್ಲಿ 30 ಗಂಟೆ ಇದ್ದ ವ್ಯಕ್ತಿಯ ರುಂಡ

ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ರುಂಡ ರೈಲು ಎಂಜಿನ್‌ ಕೆಳಭಾಗದಲ್ಲಿ 30ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಪ್ರಕರಣ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ...

Vijaya Karnataka 28 Jan 2019, 11:05 am
ಬೀರೂರು: ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ರುಂಡ ರೈಲು ಎಂಜಿನ್‌ ಕೆಳಭಾಗದಲ್ಲಿ 30ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಪ್ರಕರಣ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ.
Vijaya Karnataka Web Rail


ಡಬ್ಲಿಂಗ್‌ ಕಾರ್ಯದಲ್ಲಿ ತೊಡಗಿದ್ದ ರಾಣೆಬೆನ್ನೂರು ತಾಲೂಕಿನ ಮಾಸೂರು ಗ್ರಾಮದ ಯುವಕ ಮೆಟಿರಿಯಲ್‌ ಗೂಡ್ಸ್‌ ಗಾಡಿಗೆ ಸಿಲುಕಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದ. ದಾವಣಗೆರೆ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳದಲ್ಲಿ ಮೃತನ ದೇಹ ಮಾತ್ರ ದೊರೆತಿತ್ತು. ರುಂಡ ದೊರಕಿರಲಿಲ್ಲ.

ಬೀರೂರು ಸ್ಟೇಷನ್‌ಗೆ ಶನಿವಾರ ರಾತ್ರಿ ಬಂದ ಎಂಜಿನ್‌ನನ್ನು ಪೈಲಟ್‌ಗಳು ಪರೀಕ್ಷಿಸುವಾಗ ಎಂಜಿನ್‌ನ ಸ್ಟ್ರಿಂಗ್‌ ಬಳಿ ರುಂಡ ಸಿಲುಕಿಕೊಂಡಿರುವುದನ್ನು ಗಮನಿಸಿದ್ದಾರೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಮೃತನ ಸಂಬಂಧಿಗೆ ರುಂಡ ಮುಟ್ಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ