ಆ್ಯಪ್ನಗರ

ಮುತ್ತತ್ತಿ: ಈಜಲು ಹೋದ ವ್ಯಕ್ತಿ ಮೊಸಳೆ ಬಾಯಿಗೆ ತುತ್ತು!

ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ವಿಹರಿಸುತ್ತಿದ್ದವನು ಮೊಸಳೆ ಬಾಯಿಗೆ ಸಿಕ್ಕಿ ಕೊನೆಯುಸಿರೆಳೆದಿದ್ದಾನೆ.

TIMESOFINDIA.COM 28 May 2018, 5:00 pm
ಮಳವಳ್ಳಿ: ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವ್ಯಕ್ತಿ ಮೊಸಳೆ ಬಾಯಿಗೆ ತುತ್ತಾಗಿದ್ದಾನೆ.
Vijaya Karnataka Web crocodile


ಬೆಂಗಳೂರಿನ ಹೆಸರಘಟ್ಟದಲ್ಲಿ ವಾಸವಿದ್ದ ವೆಂಕಟೇಶ್‌(52) ಭಾನುವಾರ ಮೊಸಳೆ ಬಾಯಿಗೆ ಸಿಕ್ಕವರು. ಮುತ್ತತ್ತಿಯ ದೇವಸ್ಥಾನಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದ ವೆಂಕಟೇಶ್‌, ಕಾವೇರಿ ನದಿ ನೀರಿನಲ್ಲಿ ಈಜಾಡುತ್ತಿದ್ದರು. ಇದೇ ವೇಳೆ ಮೊಸಳೆ ವೆಂಕಟೇಶ್‌ನ ಮೇಲರಿಗಿದೆ.

ವೆಂಕಟೇಶ್‌ನನ್ನು ನದಿಯಲ್ಲಿ ಸ್ವಲ್ಪ ದೂರ ಎಳೆದೊಯ್ದಿದೆ. ಕೆಲ ಸ್ಥಳೀಯರು ನದಿಗೆ ಹಾರಿ ರಕ್ಷಣೆಗೆ ಮುಂದಾಗಿದ್ದಾರೆ. ಮೊಸಳೆ ಮೇಲೆ ದಾಳಿ ಮಾಡಿದ ಸ್ಥಳೀಯರು, ಕಲ್ಲು ಹಾಗೂ ಕೋಲುಗಳಿಂದ ವೆಂಕಟೇಶ್‌ರನ್ನು ಬಿಡಿಸಲಾಯಿತು. ಆದರೆ ಅದಾಗಲೇ ಅವರು ಎಡ ಕಾಲು ಕಳೆದುಕೊಂಡಿದ್ದರು. ಅಲ್ಲದೆ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಬೆಂಗಳೂರಿನಿಂದ ಸುಮಾರು 110ಕಿ.ಮೀ ದೂರದಲ್ಲಿರುವ ಮುತ್ತತ್ತಿ ಪ್ರವಾಸಿ ತಾಣಕ್ಕೆ ಅನೇಕ ಜನ ಈಜಾಡಲು ಬರುತ್ತಿದ್ದು, ಇದೇ ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮೊಸಳೆ ಬಾಯಿಯಿಂದ ಅವರನ್ನು ರಕ್ಷಿಸಲಾಯಿತಾದರೂ, ಗಂಭೀರ ಸ್ವರೂಪದ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುತ್ತತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ