ಆ್ಯಪ್ನಗರ

ಜನಮತ ಕೇಂದ್ರಕ್ಕೆ ಕೊಟ್ಟಿದ್ದು, ರಾಜ್ಯಕ್ಕಲ್ಲ: ಸಿದ್ದರಾಮಯ್ಯ

''ಲೋಕಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಮತ ನೀಡಿರುವುದು ಕೇಂದ್ರದಲ್ಲಿ ಅಧಿಕಾರ ನಡೆಸಲಿ ಎಂದೇ ಹೊರತು, ರಾಜ್ಯ ಸರಕಾರವನ್ನು ಬೀಳಿಸಿ ಯಡಿಯೂರಪ್ಪ ...

Vijaya Karnataka 28 May 2019, 7:46 am
ಬೆಂಗಳೂರು: ''ಲೋಕಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಮತ ನೀಡಿರುವುದು ಕೇಂದ್ರದಲ್ಲಿ ಅಧಿಕಾರ ನಡೆಸಲಿ ಎಂದೇ ಹೊರತು, ರಾಜ್ಯ ಸರಕಾರವನ್ನು ಬೀಳಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದಲ್ಲ. ಲೋಕಸಭಾ ಚುನಾವಣೆಯಲ್ಲಿ ನಮಗೆ ವಿರುದ್ಧವಾದ ಫಲಿತಾಂಶ ಬಂದಿದೆ ಎಂದ ಮಾತ್ರಕ್ಕೆ ವಿಧಾನಸಭೆ ವಿಸರ್ಜನೆ ಮಾಡಲಿ ಎಂದು ಹೇಳುವುದು ನಾನ್‌ಸೆನ್ಸ್‌ ,''ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
Vijaya Karnataka Web siddu


ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೆ ನೀಡಿರುವ ಅವರು, ''ಜೂನ್‌ 1ರೊಳಗೆ ಸರಕಾರ ರಚನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಂದು ವೇಳೆ ಈ ಬಾರಿಯೂ ಅವರಿಂದ ಸರಕಾರ ರಚನೆ ಸಾಧ್ಯವಾಗದೇ ಇದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದೇ ಸೂಕ್ತ. ರಮೇಶ್‌ ಜಾರಕಿಹೊಳಿ ಸೇರಿದಂತೆ ಯಾವೊಬ್ಬ ಕಾಂಗ್ರೆಸ್‌ ಶಾಸಕನೂ ಪಕ್ಷ ತೊರೆಯುವುದಿಲ್ಲ. ಕಳೆದೊಂದು ವರ್ಷದಿಂದ ಸರಕಾರ ಬೀಳುತ್ತದೆ ಎಂದು ಯಡಿಯೂರಪ್ಪ ಹೇಳುತ್ತಲೇ ಇದ್ದಾರೆ,''ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ