ಆ್ಯಪ್ನಗರ

ನಕಲಿ ದಾಖಲೆ ಸೃಷ್ಟಿ ಆರೋಪ: 6 ವೈದ್ಯರ ವಿರುದ್ಧದ ಆರೋಪ ಪಟ್ಟಿ ರದ್ದು

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಕಲಿ ದಾಖಲೆ ಸಲ್ಲಿಸಿ ಪ್ರೊಫೆಸರ್‌ ಹುದ್ದೆಗೆ ನೇಮಕಗೊಂಡಿದ್ದಾರೆಂಬ ಆರೋಪದ ಮೇರೆಗೆ 6 ವೈದ್ಯರ ...

Vijaya Karnataka 20 Feb 2019, 5:00 am
ಬೆಂಗಳೂರು: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಕಲಿ ದಾಖಲೆ ಸಲ್ಲಿಸಿ ಪ್ರೊಫೆಸರ್‌ ಹುದ್ದೆಗೆ ನೇಮಕಗೊಂಡಿದ್ದಾರೆಂಬ ಆರೋಪದ ಮೇರೆಗೆ 6 ವೈದ್ಯರ ವಿರುದ್ಧ ಮಂಡ್ಯ ಜಿಲ್ಲಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯನ್ನು ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.
Vijaya Karnataka Web tetascope


ಡಾ.ಆನಂದ್‌, ಡಾ.ಎಚ್‌.ಟಿ.ಚಿದಾನಂದ, ಡಾ.ಶಿವಕುಮಾರ್‌ ವೀರಯ್ಯ, ಡಾ.ರಾಜೀವ ಶೆಟ್ಟಿ, ಡಾ.ಕೆ. ಕೃಷ್ಣ ಮತ್ತು ಡಾ.ಎಚ್‌.ಸಿ.ಸವಿತಾ ಮತ್ತಿತರರು ಆರೋಪ ಪಟ್ಟಿ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಗಳನ್ನು ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಮಾನ್ಯ ಮಾಡಿದೆ.

''ನಕಲಿ ದಾಖಲೆಗಳ ಸೃಷ್ಟಿ ಸಂಬಂಧ ಸೂಕ್ತ ಸಾಕ್ಷ ್ಯ ಒದಗಿಸಿಲ್ಲ. ಈಗಾಗಲೇ ಈ ವಿಷಯದಲ್ಲಿ ಎಂಸಿಐ ನಿರ್ಧಾರ ಕೈಗೊಂಡಿದೆ. ಆರೋಪ ಹೊತ್ತವರಲ್ಲಿ ಕೆಲವು ವೈದ್ಯರು ಈಗಾಗಲೇ ನಿವೃತ್ತಿಯಾಗಿದ್ದಾರೆ. ಮ್ಯಾಜಿಸ್ಪ್ರೇಟ್‌ ಈ ಪ್ರಕರಣನ್ನು ಪೊಲೀಸ್‌ ತನಿಖೆಗೆ ಒಪ್ಪಿಸುವ ಮುನ್ನ ಕಾನೂನಿನ ಯಾವ ಆಧಾರದಲ್ಲಿ ತನಿಖೆಗೆ ನಿರ್ದೇಶಿಸಲಾಗುತ್ತಿದೆ ಎಂಬುದಕ್ಕೆ ಸಕಾರಣ ನೀಡಿಲ್ಲ ''ಎಂದು ಆದೇಶದಲ್ಲಿ ಹೇಳಿದೆ.

''ಈ ಆದೇಶವನ್ನು ರಾಜ್ಯದ ಎಲ್ಲಾ ಮ್ಯಾಜಿಸ್ಪ್ರೇಟ್‌ ಗಳಿಗೆ ರವಾನಿಸಬೇಕು ಮತ್ತು ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಮ್ಯಾಜಿಸ್ಪ್ರೇಟ್‌ಗಳಿಗೂ ಈ ಕುರಿತು ಅರಿವು ಮೂಡಿಸಬೇಕು,'' ಎಂದು ರಾಜ್ಯ ಪ್ರಾಸಿಕ್ಯೂಷನ್‌ ಗೆ ನಿರ್ದೇಶನ ನ್ಯಾಯಪೀಠ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ