ಆ್ಯಪ್ನಗರ

ಮಂಡ್ಯದ ಕುಡುಕ ಮಹಾಶಯನ ದಂಡ ಡ್ರಾಮಾಯಣ!: ಫೈನ್ ನೋಡಿ ನಶೆ ಇಳೀತು

ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸೋ ಕಾನೂನು ಬಂದಿದ್ದೇ ತಡ, ಚಿತ್ರವಿಚಿತ್ರ ಸನ್ನಿವೇಶಗಳು ದೇಶಾದ್ಯಂತ ಸೃಷ್ಟಿಯಾಗ್ತಿವೆ. ಸಕ್ಕರೆ ನಾಡು ಮಂಡ್ಯದ ಕುಡುಕ ಮಹಾಶಯನೊಬ್ಬನಿಗೆ ಕೋರ್ಟ್ ಹಾಕಿದ ಫೈನ್ ಮೊತ್ತ ಕಂಡು ಸಡನ್ ಆಗಿ ನಶೆ ಇಳಿದುಹೋಗಿದೆ!

Vijaya Karnataka Web 7 Oct 2019, 2:49 pm
ಮಂಡ್ಯ: ಸಕ್ಕರೆ ನಾಡಿನ ಕುಡುಕ ಮಹಾಶಯನೊಬ್ಬನಿಗೆ ಸಂಚಾರಿ ಪೊಲೀಸರು ಹಾಗೂ ನ್ಯಾಯಾಲಯ ಜಂಟಿಯಾಗಿ ನಶೆ ಇಳಿಸಿದೆ! ಆತನಿಗೆ ವಿಧಿಸಿರುವ ದಂಡದ ಮೊತ್ತ ನೋಡಿದ್ರೆ, ಕುಡಿದ ಮೇಲೆ ಗಾಡಿ ಹತ್ತಲೇ ಬಾರದು ಎಂದು ತೀರ್ಮಾನ ಮಾಡಬೇಕಾಗುತ್ತೆ.
Vijaya Karnataka Web drink and drive caricature


ದುಬಾರಿ ಟ್ರಾಫಿಕ್ ದಂಡಕ್ಕೆ ಬೀಳಲಿದೆ ಬ್ರೇಕ್!: ಸಿಎಂ ಕೊಟ್ರು ಗುಡ್ ನ್ಯೂಸ್

‘ಕುಡುಕನ ದಂಡ ಡ್ರಾಮಾಯಣ’ ನಡೆದಿದ್ದು ಹೇಗೆ?

ಮಂಡ್ಯ ಜಿಲ್ಲೆ ಮದ್ದೂರಿನ ಕೆ. ಶೇಖರ್, ಸೆಪ್ಟಂಬರ್ 12 ಗುರುವಾರ ರಾತ್ರಿ ಕಂಠಮಟ್ಟ ಕುಡಿದು ಬೈಕ್ ಹತ್ತಿದ್ದ. ಈ ವೇಳೆ ಕುಡುಕ ಮಹಾಶಯ ಪೊಲೀಸರ ಕೈಗೆ ಸಿಕ್ಕಿಬಿದ್ದ. ಕುಡಿದು ವಾಹನ ಚಾಲನೆ ಪ್ರಕರಣವಾದ ಕಾರಣ, ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿದ ಪೊಲೀಸರು ಶೇಖರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಚಾರ್ಜ್‌ಶೀಟ್ ಸಲ್ಲಿಸಿದರು.

‘ಟ್ರಾಫಿಕ್ ಸಿಂಗಂ’ ಕರುಣೆಯಿಲ್ಲದ ಕಾನೂನು!: ನಿದ್ರೆಯಲ್ಲೂ ನಡುಗುತ್ತಿದ್ದಾರೆ ವಾಹನ ಚಾಲಕರು!

ಪ್ರಕರಣದ ವಿಚಾರಣೆ ನಡೆಸಿದ ಮದ್ದೂರು ನ್ಯಾಯಾಲಯ, ಆರೋಪಿ ಕೆ. ಶೇಖರ್‌ಗೆ 18 ಸಾವಿರ ರೂ. ದಂಡ ವಿಧಿಸಿದೆ. ತನಗೆ ವಿಧಿಸಿದ 18 ಸಾವಿರ ರೂ. ದಂಡದ ಮೊತ್ತ ಕಂಡು ಶೇಖರ್ ಫುಲ್ ಶೇಖ್ ಆಗಿಬಿಟ್ಟಿದ್ದಾನೆ. ಇದೀಗ ಶೇಖರ್‌ಗೆ ವಿಧಿಸಿರುವ ದಂಡ, ಮಂಡ್ಯದಲ್ಲೇ ಅತಿ ಹೆಚ್ಚಿನ ಮೊತ್ತದ ದಂಡವಾಗಿದೆ. 18 ಸಾವಿರ ರೂ. ದಂಡ ಕಟ್ಟಿದ ಮೊದಲ ಬೈಕ್ ಚಾಲಕ ಎಂಬ ‘ಹೆಗ್ಗಳಿಕೆ’ ಶೇಖರ್‌ಗೆ ಸಂದಿದೆ!


ಕುಡಿದು ವಾಹನ ಚಾಲನೆ ಮಾಡಿದರೆ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಜೊತೆಯಲ್ಲೇ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ಸೇರಿ ನ್ಯಾಯಾಧೀಶರು ತಮ್ಮ ವಿವೇಚನಾಧಿಕಾರ ಬಳಸಿ ಒಟ್ಟಾರೆ 18 ಸಾವಿರ ರೂ. ದಂಡ ವಿಧಿಸಿದ್ದಾರೆ. ಪರಿಷ್ಕೃತ ಸಂಚಾರಿ ನಿಯಮ ಉಲ್ಲಂಘನೆ ಕಾಯ್ದೆಯಡಿ ಹಾಕಿರುವ ದಂಡದ ಮೊತ್ತ ಕೇಳಿ ಆರೋಪಿ ಶೇಖರ್ ಅಷ್ಟೇ ಅಲ್ಲ, ಸಾರ್ವಜನಿಕರೂ ಬೆಚ್ಚಿಬಿದ್ದಿದ್ದಾರೆ.

ಟ್ರಾಫಿಕ್ ಪೊಲೀಸರ ಅಬ್ಬರಕ್ಕೆ ಎದೆ ಹಿಡಿದುಕೊಂಡು ಜೀವ ಬಿಟ್ಟ ಟೆಕ್ಕಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ