ಆ್ಯಪ್ನಗರ

ಐಎಂಎ ವಂಚನೆ: ಮನ್ಸೂರ್‌ ಖಾನ್‌ಗೆ ಸೇರಿದ ಜಿಮ್‌ ಜಪ್ತಿ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿ ಮುಂದುವರಿಸಿರುವ ಎಸ್‌ಐಟಿ ತಂಡ ಶುಕ್ರವಾರ ಮನ್ಸೂರ್‌ ಖಾನ್‌ಗೆ ಸೇರಿದ್ದೆನ್ನಲಾದ ಜಿಮ್‌ ಮೇಲೆ ದಾಳಿ ಮಾಡಿ ಜಿಮ್‌ನಲ್ಲಿರುವ ಸಲಕರಣೆಗಳನ್ನು ವಶಪಡಿಸಿಕೊಂಡಿದೆ.

Vijaya Karnataka 29 Jun 2019, 5:00 am
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿ ಮುಂದುವರಿಸಿರುವ ಎಸ್‌ಐಟಿ ತಂಡ ಶುಕ್ರವಾರ ಮನ್ಸೂರ್‌ ಖಾನ್‌ಗೆ ಸೇರಿದ್ದೆನ್ನಲಾದ ಜಿಮ್‌ ಮೇಲೆ ದಾಳಿ ಮಾಡಿ ಜಿಮ್‌ನಲ್ಲಿರುವ ಸಲಕರಣೆಗಳನ್ನು ವಶಪಡಿಸಿಕೊಂಡಿದೆ.
Vijaya Karnataka Web mansoors jim siezed
ಐಎಂಎ ವಂಚನೆ: ಮನ್ಸೂರ್‌ ಖಾನ್‌ಗೆ ಸೇರಿದ ಜಿಮ್‌ ಜಪ್ತಿ


ಶಿವಾಜಿನಗರದ ಪೋಟರಿ ರಸ್ತೆಯಲ್ಲಿರುವ 'ಅಡಾಪ್ಟ್‌ ಫಿಟ್‌ನೆಸ್‌' ಮೇಲೆ ದಾಳಿ ನಡೆಸಿದ ಎಸ್‌ಐಟಿ ತಂಡ ಇದರಲ್ಲಿ ಅಳವಡಿಸಿರುವ ಸಲಕರಣೆಗಳನ್ನು ಪರಿಶೀಲನೆ ನಡೆಸಿ ಜಿಮ್‌ನಲ್ಲಿದ್ದ ಮ್ಯಾನೇಜರ್‌ನಿಂದ ಮಾಹಿತಿ ಪಡೆದರು. ಬಳಿಕ ಜಿಮ್‌ಗೆ ಬೀಗ ಜಡಿದಿದ್ದು ಇದರಲ್ಲಿದ್ದ ಸಲಕರಣೆಗಳನ್ನೆಲ್ಲಾ ವಶಕ್ಕೆ ಪಡೆದಿದ್ದಾರೆ. ಸುಮಾರು 2.80 ಕೋಟಿ ಮೊತ್ತದ ಜಿಮ್‌ ಸಲಕರಣೆಗಳು ಇದರಲ್ಲಿ ಇದ್ದವು ಎಂದು ಅಂದಾಜಿಸಲಾಗಿದೆ.

ಒಂದು ತಿಂಗಳ ಹಿಂದಷ್ಟೇ ಬಾಲಿವುಡ್‌ ನಟ ಸಂಜಯ್‌ದತ್‌ ಅವರನ್ನು ಕರೆಸಿ ಅದ್ದೂರಿಯಾಗಿ ಜಿಮ್‌ ಉದ್ಘಾಟನೆ ಮಾಡಿಸಿದ್ದ ಮನ್ಸೂರ್‌ ಇದೇ ಹೆಸರಿನ ಜಿಮ್‌ಗಳನ್ನು ನಗರದ ಇತರೆ ಏರಿಯಾಗಳಲ್ಲೂ ಆರಂಭಿಸುವುದಾಗಿ ಹೇಳಿಕೊಂಡಿದ್ದ. ಎಸ್‌ಐಟಿಯ ಮತ್ತೊಂದು ತಂಡ ಮನ್ಸೂರ್‌ ಖಾನ್‌ಗೆ ಸೇರಿದ ಇನ್ನೋವಾ ಕಾರನ್ನು ಆತನ ಸ್ನೇಹಿತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ. ಇದೇ ರೀತಿ ಮನ್ಸೂರ್‌ಗೆ ಸೇರಿದ ಇನ್ನಿತರೆ ಆಸ್ತಿಗಳ ಪತ್ತೆ ಕಾರ್ಯ ಬಿರುಸಿನಿಂದ ಸಾಗಿದೆ. ಈಗಾಗಲೇ ಐಎಂಎಗೆ ಸಂಬಂಧಿಸಿದ ಸ್ಥಿರ ಮತ್ತು ಚರಾಸ್ಥಿಗಳ ಸಮೇತ ಚಿನ್ನ, ವಜ್ರಾಭರಣಗಳನ್ನು ವಶಕ್ಕೆ ಪಡೆದು ಅದನ್ನೆಲ್ಲಾ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೋರಿ ಸರಕಾರಕ್ಕೆ ಪತ್ರ ಬರೆದು ವಿವರಗಳನ್ನೆಲ್ಲಾ ನೀಡಲಾಗಿದೆ. ಇಡಿ ಜತೆಗೆ ಎಸ್‌ಐಟಿ ಕೂಡ ಸಮಾನಾಂತರವಾಗಿ ಚರ ಮತ್ತು ಸ್ಥಿರಾಸ್ತಿಯನ್ನು ಜಪ್ತಿ ಮಾಡಿದೆ. ಈಗಾಗಲೇ 92 ಬ್ಯಾಂಕ್‌ ಖಾತೆಗಳನ್ನು ಸೀಜ್‌ ಮಾಡಲಾಗಿದೆ. ಈ ಖಾತೆಗಳಲ್ಲಿ ಇರುವ ಒಟ್ಟು ಮೊತ್ತ ಎಷ್ಟು ಎನ್ನುವ ಪರಿಶೀಲನೆ ಮುಂದುವರೆದಿದೆ ಎಂದೂ ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ