ಆ್ಯಪ್ನಗರ

ಇಡಿಯಿಂದ 350 ಕೋಟಿ ರೂ. ಜಪ್ತಿ

ನ್ಯಾಷನಲ್‌ ಸ್ಪಾಟ್‌ ಎಕ್ಸ್‌ಚೇಂಜ್‌ ಲಿಮಿಟೆಡ್‌ (ಎನ್‌ಎಸ್‌ಇಎಲ್‌) ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳ 16 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಈ ಸಂಬಂಧ 350 ಕೋಟಿ ರೂ. ಮೌಲ್ಯದ ಹೂಡಿಕೆ, ಸ್ಥಿರಾಸ್ತಿ, ಐಷಾರಾಮಿ ಕಾರುಗಳು ಹಾಗೂ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

Vijaya Karnataka 2 Jun 2018, 8:13 am
ಬೆಂಗಳೂರು: ನ್ಯಾಷನಲ್‌ ಸ್ಪಾಟ್‌ ಎಕ್ಸ್‌ಚೇಂಜ್‌ ಲಿಮಿಟೆಡ್‌ (ಎನ್‌ಎಸ್‌ಇಎಲ್‌) ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳ 16 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಈ ಸಂಬಂಧ 350 ಕೋಟಿ ರೂ. ಮೌಲ್ಯದ ಹೂಡಿಕೆ, ಸ್ಥಿರಾಸ್ತಿ, ಐಷಾರಾಮಿ ಕಾರುಗಳು ಹಾಗೂ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
Vijaya Karnataka Web ED


5,600 ಕೋಟಿ ರೂ. ಮೊತ್ತದ ಬೃಹತ್‌ ಹಗರಣ ಸಂಬಂಧ ಎನ್‌ಎಸ್‌ಇಎಲ್‌, ಎಫ್‌ಟಿಐಎಲ್‌ ಸೇರಿದಂತೆ 25 ಸುಸ್ತಿದಾರ ಕಂಪನಿಗಳು ಹಾಗೂ ಅವುಗಳ ನಿರ್ದೇಶಕರು ಮತ್ತು ಬ್ರೋಕರ್‌ಗಳ ವಿರುದ್ಧ ಮುಂಬೈ ಪೊಲೀಸರು 2013ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ಬೆಂಗಳೂರು, ಮುಂಬೈ, ಅಹ್ಮದಾಬಾದ್‌, ಚಂಡಿಗಢ, ದಿಲ್ಲಿ ಸೇರಿದಂತೆ 16 ಸ್ಥಳಗಳಲ್ಲಿರುವ ಎನ್‌.ಕೆ ಪ್ರೋಟಿನ್ಸ್‌ ಪ್ರೈ.ಲಿ ಸಂಸ್ಥಾಪಕ ನಿಮಿಷ್‌ ಪಟೇಲ್‌ ಮತ್ತು ನೀಲೇಶ್‌ ಪಟೇಲ್‌, ಯತೂರಿ ಅಸೋಸಿಯೇಟ್ಸ್‌ನ ರಾಹುಲ್‌ ಆನಂದ, ಅಸ್ಥಾ ಮಿನ್ಮೆಟ್‌ ಇಂಡಿಯಾ ಪ್ರೈ.ಲಿನ ಮೋಹಿತ್‌ ಸಿಂಗಲ್‌. ಲೋಟಸ್‌ ರಿಫೈನರೀಸ್‌ ಪ್ರೈ.ಲಿನ ಅರುಣ್‌ ಶರ್ಮಾ ಅವರಿಗೆ ಸೇರಿದ ಕಂಪನಿ, ಕಚೇರಿ, ಕಾರ್ಖಾನೆ ಮತ್ತು ಮನೆಗಳಲ್ಲಿ ಶೋಧ ನಡೆಸಲಾಗಿದೆ.

''ದಾಳಿ ವೇಳೆ 350 ಕೋಟಿ ರೂ. ಮೌಲ್ಯದ ಆಸ್ತಿ/ಹೂಡಿಕೆ ಜತೆಗೆ ಆಡಿ, ಮರ್ಸಿಡೀಸ್‌, ಜಾಗ್ವಾರ್‌, ಬಿಎಂಡಬ್ಲ್ಯು, ರೇಂಜ್‌ ರೋವರ್‌, ಫಾರ್ಚನ್ಯೂರ್‌ ಸೇರಿದಂತೆ ಐಷಾರಾಮಿ ಕಾರುಗಳು, 42 ಭಾರೀ ಸರಕು ಸಾಗಣೆ ವಾಹನಗಳು ಹಾಗೂ 17 ಲಕ್ಷ ರೂ. ನಗದು ಕೂಡಾ ಜಪ್ತಿ ಮಾಡಲಾಗಿದೆ. ಮಹತ್ವದ ದಾಖಲೆಗಳು ಹಾಗೂ ಇನ್ನಿತರ ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗುತ್ತಿದೆ,'' ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆಯಾದ 5,600 ಕೋಟಿ ರೂ. ಪೈಕಿ ಈ ಸುಸ್ತಿದಾರರು 2,798 ಕೋಟಿ ರೂ. ಪಾವತಿ ಮಾಡಬೇಕಾಗಿದೆ. ಈಗಾಗಲೇ ಇ.ಡಿ ಅಧಿಕಾರಿಗಳು 2,890 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಜಪ್ತಿ ಮಾಡಿಕೊಂಡಿದ್ದಾರೆ.

ಹಗರಣದ ಮೊತ್ತ: 5,600 ಕೋಟಿ ರೂ.

ಕಂಪನಿಗಳು: ಎನ್‌ಎಸ್‌ಇಎಲ್‌ಸೇರಿದಂತೆ 25 ಕಂಪನಿಗಳು

ಪ್ರಕರಣ ದಾಖಲು: ಮುಂಬಯಿ

ವರ್ಷ: 2013

ಶೋಧ: ದೇಶದ ಐದು ನಗರಗಳ 16 ಸ್ಥಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ