ಆ್ಯಪ್ನಗರ

ವಿಕ ಮಾಸ್ಕ್‌ ಇಂಡಿಯಾ ಆಂದೋಲನಕ್ಕೆ ಪಿಎಂ ಮೋದಿ ಪ್ರಶಂಸೆ

ವಿಜಯ ಕರ್ನಾಟಕ ಪತ್ರಿಕೆ ಸೇರಿದಂತೆ ಟೈಮ್ಸ್‌ ಆಫ್‌ ಇಂಡಿಯಾ ಗ್ರೂಪ್‌ ಆರಂಭಿಸಿರುವ 'ಮಾಸ್ಕ್‌ ಇಂಡಿಯಾ' ಆಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

Vijaya Karnataka Web 8 Apr 2020, 1:53 pm
ಬೆಂಗಳೂರು: 'ಮಾಸ್ಕ್‌ ಇಂಡಿಯಾ' ಆಂದೋಲನಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಟ್ವೀಟ್‌ನಲ್ಲಿ ''ಕೊರೊನಾ ವಿರುದ್ಧ ಹೋರಾಟದ ಈ ಸಂದರ್ಭದಲ್ಲಿ ಯಾವಾಗಲೂ ಹೆಚ್ಚಿನ ಮುತುವರ್ಜಿ ವಹಿಸುವುದು ಒಳ್ಳೆಯದು. ಇದರಿಂದ ನಿಮಗೂ ಒಳಿತು. ಜತೆಗೆ ನಿಮ್ಮ ಸುತ್ತಮುತ್ತ ಇರುವವರಿಗೂ ಒಳಿತು,'' ಎಂದಿದ್ದಾರೆ.
Vijaya Karnataka Web Narendra Modi


ಎಲ್ಲರೂ ಮಾಸ್ಕ್‌ ಧರಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಸ್ಕ್‌ ಇಂಡಿಯಾ ಆಂದೋಲನವನ್ನು ಟೈಮ್ಸ್‌ ಆಫ್‌ ಇಂಡಿಯಾ ಗ್ರೂಪ್‌ ಆರಂಭಿಸಿದ್ದು, ಇದೊಂದು ಹೊಸ ಬದಲಾವಣೆ ತರಬಲ್ಲ ಆಂದೋಲನವಾಗಿದೆ ಎಂದು ಪ್ರಧಾನಿ ಪ್ರಶಂಸಿಸಿದ್ದಾರೆ. ಎಲ್ಲರೂ ಮನೆಯಲ್ಲಿಯೇ ಮಾಸ್ಕ್‌ ಸಿದ್ಧಪಡಿಸಿಕೊಂಡು, ಬಳಸಬೇಕೆಂದು ಈ ಆಂದೋಲನದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಆಂದೋಲನದಲ್ಲಿ ಭಾಗವಹಿಸಿದವರು ತಾವೇ ಮನೆಯಲ್ಲಿ ಸಿದ್ಧಪಡಿಸಿದ ಮಾಸ್ಕ್‌ ಧರಿಸಿ, ಫೋಟೊ ಹಂಚಿಕೊಳ್ಳುವುದರ ಮೂಲಕ ಬೇರೆಯವರಿಗೂ ಪ್ರೇರಣೆ ನೀಡುತ್ತಿದ್ದಾರೆ.


ಈ ಆಂದೋಲನದಡಿ ಮನೆಯಲ್ಲೇ ಮಾಸ್ಕ್‌ ತಯಾರಿಸುವುದು ಹೇಗೆ, ಮಾಸ್ಕ್‌ ಧರಿಸಿ ಸುರಕ್ಷಿತರಾಗಿರುವುದು ಹೇಗೆ, ಯಾವ ಮಾಸ್ಕ್‌ ಯಾವರೀತಿಯಲ್ಲಿ ಸರಕ್ಷತೆ ನೀಡುತ್ತದೆ ಹೀಗೆ ಹಲವು ಆಯಾಮಗಳಲ್ಲಿ ಜನರಿಗೆ ಉಪಯುಕ್ತ ಮಾಹಿತಿಯನ್ನು ವಿಜಯ ಕರ್ನಾಟಕ ಒದಗಿಸುತ್ತಿದೆ.

ಯಾರು ಏನೇ ಹೇಳಿದರೂ ಹೊರಗೆ ಓಡಾಡುವಾಗ ಮಾಸ್ಕ್‌ ಮರೆಯಬೇಡಿ!

#MaskIndia ಮನೆಯಲ್ಲೇ ಮಾಸ್ಕ್‌ ತಯಾರಿಸಿ, ಮಾಸ್ಕ್‌ ಧರಿಸಿ, ಸುರಕ್ಷಿತವಾಗಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ