ಆ್ಯಪ್ನಗರ

ಮೇ 7ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ: ತನ್ವೀರ್‌ ಸೇಠ್‌

ಮುಂದಿನ ವರ್ಷದಿಂದ ಮಂಡಳಿಯಿಂದಲೇ ಪೂರಕ ಪರೀಕ್ಷೆ

Vijaya Karnataka Web 6 Apr 2018, 5:34 pm
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶುಕ್ರವಾರ ಮುಕ್ತಾಯಗೊಂಡಿವೆ. ಮೇ 7ರಂದು ಪರೀಕ್ಷೆ ಫಲಿತಾಂಶಗಳು ಪ್ರಕಟಗೊಳ್ಳಲಿವೆ. ಇದಕ್ಕೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದ್ದಾರೆ.
Vijaya Karnataka Web may 7th sslc exam results tanveer sait
ಮೇ 7ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ: ತನ್ವೀರ್‌ ಸೇಠ್‌


ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್‌ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದಿದೆ. ಪರೀಕ್ಷಾ ಸುಧಾರಣಾ ಕ್ರಮ ತೃಪ್ತಿ ತಂದಿದೆ. ಮಕ್ಕಳನ್ನು ಪರೀಕ್ಷೆ ಭಯದಿಂದ ಮುಕ್ತಗೊಳಿಸಲಾಗಿದೆ. 33 ವಿಷಯಗಳಲ್ಲಿ ಪರೀಕ್ಷೆ ನಡೆದಿದೆ. ಮುಂದಿನ ವರ್ಷದಿಂದ ಪರೀಕ್ಷಾ ಮಂಡಳಿಯೇ ಪೂರಕ ಪರೀಕ್ಷೆ ನಡೆಸಲಿದೆ ಎಂದು ಅವರು ತಿಳಿಸಿದರು.

Scheme evaluation ಕಳೆದ ವರ್ಷದಿಂದ ಆರಂಭವಾಗಿದೆ. Scheme of evaluation ಅಂತರ್ಜಾಲ ಕ್ಕೆ ಹಾಕಲಾಗುವುದು. ಅಂತರ್ಜಾಲದಲ್ಲಿ 8ನೇ ತಾರೀಖು ಕೀ ಉತ್ತರ ದೊರೆಯುತ್ತೆ. ಆಕ್ಷೇಪಣೆ ಸಲ್ಲಿಸಲು ಮೇ 8 ರಿಂದ 10ರವರೆಗೆ ಅವಕಾಶ ಇರುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಮೌಲ್ಯಮಾಪನ 16 ರಿಂದ 25ರವರೆಗೆ ಮೌಲ್ಯಮಾಪನ ನಡೆಯಲಿದೆ. ಬಹುತೇಕ ಮೇ ಮೊದಲ ವಾರದಲ್ಲಿಯೇ ಫಲಿತಾಂಶ ಪ್ರಕಟವಾಗಲಿದೆ ಎಂದರು

ಕಳೆದ ವರ್ಷ 16 ಮಂದಿ ಡಿಬಾರ್ ಆಗಿದ್ದರು. ಈ ಬಾರಿ ಗಣಿತ ಪರೀಕ್ಷೆಯಲ್ಲಿಯೇ 21 ಮಂದಿ ಡಿಬಾರ್ ಆಗಿದ್ದಾರೆ. ಕಳೆದ ಬಾರಿ ಶೇಕಡಾ73.47 ಫಲಿತಾಂಶ ಬಂದಿತ್ತು. ಈ ಬಾರಿ ಈ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತನ್ವೀರ್‌ ಸೇಠ್‌ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ