ಆ್ಯಪ್ನಗರ

ಹಿರಿಯರ ಭಾವನೆ ಗೌರವಿಸಬೇಕು: ರಾಮಲಿಂಗಾರೆಡ್ಡಿ ಪರ ಎಂಬಿ ಪಾಟೀಲ್‌ ಬ್ಯಾಟಿಂಗ್‌

ಮೈತ್ರಿಯಿಂದಾಗಿ ಕಾಂಗ್ರೆಸ್‌ ಪಕ್ಷ ದ ಸಾಮಾನ್ಯ ಕಾರ್ಯಕರ್ತನಿಗೂ ನೋವಾಗಬಾರದು. ಮೈತ್ರಿ ಸರಕಾರ ಇನ್ನೂ ಚುರುಕಾಗಿ ಕೆಲಸ ಮಾಡಬೇಕಿದೆ. ಇನ್ನೂ ಹೊಂದಾಣಿಕೆಯಾಗಬೇಕಿದೆ.

Vijaya Karnataka Web 4 Jun 2019, 9:48 pm
ವಿಜಯಪುರ: ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಿರಿಯ ನಾಯಕರಿದ್ದು, ಅವರು ಏನೇ ಹೇಳಿದ್ದರೂ ಜವಾಬ್ದಾರಿಯುತವಾಗಿಯೇ ಮಾತನಾಡಿರುತ್ತಾರೆ. ಅವರ ಭಾವನೆಗಳನ್ನು ಗೌರವಿಸಬೇಕೆಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
Vijaya Karnataka Web ಎಂಬಿ ಪಾಟೀಲ್‌
ಎಂಬಿ ಪಾಟೀಲ್‌


ಮಂಗಳವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿ ಅವರ ಸಲಹೆ, ಸೂಚನೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದರು.

ಸ್ವತಂತ್ರ ಅಧಿಕಾರಕ್ಕೆ ಬರಲಿ

ಜೆಡಿಎಸ್‌ ಜೊತೆ ಹೊಂದಾಣಿಕೆ ಕಾರಣದಿಂದಾಗಿಯೇ ಕಾಂಗ್ರೆಸ್‌ ಸೋತಿದೆ ಎನ್ನುವುದು ರಾಮಲಿಂಗಾರೆಡ್ಡಿ ಅವರ ವೈಯುಕ್ತಿಕ ಅಭಿಪ್ರಾಯ. ಅವರವರ ಅಭಿಪ್ರಾಯಗಳು ಬೇರೆಯಾಗಿರುತ್ತವೆ. ಮೈತ್ರಿಯಿಂದಾಗಿ ಸೋಲಾಗಿದೆ ಅನ್ನುವುದನ್ನು ಒಪ್ಪುವುದಿಲ್ಲ ಎಂದೂ ಎಂ.ಬಿ.ಪಾಟೀಲ ತಿಳಿಸಿದರು.

ಮೈತ್ರಿಯಿಂದಾಗಿ ಕಾಂಗ್ರೆಸ್‌ ಪಕ್ಷ ದ ಸಾಮಾನ್ಯ ಕಾರ್ಯಕರ್ತನಿಗೂ ನೋವಾಗಬಾರದು. ಮೈತ್ರಿ ಸರಕಾರ ಇನ್ನೂ ಚುರುಕಾಗಿ ಕೆಲಸ ಮಾಡಬೇಕಿದೆ. ಇನ್ನೂ ಹೊಂದಾಣಿಕೆಯಾಗಬೇಕಿದೆ. ಪರಸ್ಪರ ನಾಯಕರು, ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗಿಲ್ಲ ಎಂದ ಎಂ.ಬಿ.ಪಾಟೀಲ, ಈ ಅವಧಿ ಮುಗಿದ ಮೇಲೆ ಕಾಂಗ್ರೆಸ್‌ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ