ಆ್ಯಪ್ನಗರ

ಕೋಳಿ ಮಾಂಸದಿಂದ ಕೊರೊನಾ ವೈರಸ್ ವದಂತಿ..! ಸುಳ್ಳು ಸುದ್ದಿ ಎಂದರೂ ನಂಬದ ಜನ..!

ಚೀನಾ, ಇಟಲಿ, ದಕ್ಷಿಣ ಕೊರಿಯಾ, ಇರಾನ್‌, ಸಿಂಗಾಪುರ, ಜಪಾನ್‌ ದೇಶಗಳು ಕೊರೊನಾ ವೈರಸ್‌ ದಾಳಿಗೆ ಸಿಲುಕಿ ತತ್ತರಿಸಿವೆ. ಭಾರತದಲ್ಲೂ ಈ ವೈರಸ್ ಹರಡಬಹುದು ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಸುದ್ದಿಯೊಂದು ಕುಕ್ಕುಟೋದ್ಯಮಕ್ಕೆ ಕಂಟಕವಾಗಿ ಪರಿಣಮಿಸಿದೆ. ಕೋಳಿಗಳಿಗೆ ಕೊರೊನಾ ವೈರಸ್‌ ಹರಡಿದ್ದು, ಅದರ ಮಾಂಸ ಸೇವನೆ ಮಾರಕ ಎಂಬ ಪುಕಾರುಗಳು ಎದ್ದಿರುವ ಹಿನ್ನೆಲೆಯಲ್ಲಿ, ಕುಕ್ಕುಟೋದ್ಯಮ ಸಂಕಟಕ್ಕೆ ಸಿಲುಕಿದೆ. ಕೋಳಿ ಮಾಂಸದ ವ್ಯಾಪಾರಿಗಳ ವಲಯದಲ್ಲಿ ತಲ್ಲಣ ಉಂಟಾಗಿದೆ.

Vijaya Karnataka Web 23 Feb 2020, 5:37 pm
ಚೀನಾ, ಇಟಲಿ, ದಕ್ಷಿಣ ಕೊರಿಯಾ, ಇರಾನ್‌, ಸಿಂಗಾಪುರ, ಜಪಾನ್‌ ದೇಶಗಳು ಕೊರೊನಾ ವೈರಸ್‌ ದಾಳಿಗೆ ಸಿಲುಕಿ ತತ್ತರಿಸಿವೆ. ಭಾರತದಲ್ಲೂ ಈ ವೈರಸ್ ಹರಡಬಹುದು ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಸುದ್ದಿಯೊಂದು ಕುಕ್ಕುಟೋದ್ಯಮಕ್ಕೆ ಕಂಟಕವಾಗಿ ಪರಿಣಮಿಸಿದೆ. ಕೋಳಿಗಳಿಗೆ ಕೊರೊನಾ ವೈರಸ್‌ ಹರಡಿದ್ದು, ಅದರ ಮಾಂಸ ಸೇವನೆ ಮಾರಕ ಎಂಬ ಪುಕಾರುಗಳು ಎದ್ದಿರುವ ಹಿನ್ನೆಲೆಯಲ್ಲಿ, ಕುಕ್ಕುಟೋದ್ಯಮ ಸಂಕಟಕ್ಕೆ ಸಿಲುಕಿದೆ. ಕೋಳಿ ಮಾಂಸದ ವ್ಯಾಪಾರಿಗಳ ವಲಯದಲ್ಲಿ ತಲ್ಲಣ ಉಂಟಾಗಿದೆ.
Vijaya Karnataka Web meat eaters chicken out on coronavirus scare poultry sector hit
ಕೋಳಿ ಮಾಂಸದಿಂದ ಕೊರೊನಾ ವೈರಸ್ ವದಂತಿ..! ಸುಳ್ಳು ಸುದ್ದಿ ಎಂದರೂ ನಂಬದ ಜನ..!



​ಸಂಕಷ್ಟದಲ್ಲಿ ಕೋಳಿ ಮಾರಾಟಗಾರ..

ಕೋಳಿಗಳಿಗೆ ಕೊರೊನಾ ವೈರಸ್‌ ಹರಡಿಲ್ಲ, ಕೋಳಿ ಮಾಂಸಕ್ಕೂ, ಕೊರೊನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ, ರಾಜ್ಯ ಸರಕಾರಗಳು ಪರಿಶೀಲಿಸಿ ಸ್ಪಷ್ಟಪಡಿಸಿವೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಸುದ್ದಿಗಳಿಂದಾಗಿ ಕೋಳಿ ಮಾಂಸ ಮಾರಾಟಗಾರರು ಕೋಳಿಗಳನ್ನು ಇಟ್ಟುಕೊಳ್ಳಲೂ ಆಗದೆ, ಮಾರಾಟವನ್ನೂ ಮಾಡಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೋಳಿಗಳಿಗೆ ಕೊರೊನಾ ವೈರಸ್‌ ಹರಡಿದೆ ಎಂಬ ಮಾಹಿತಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಬ್ಬಿದ್ದು, ಶೇ.20ರಷ್ಟು ಕೋಳಿ ಸೇವನೆ ಪ್ರಮಾಣ ಕಡಿಮೆಯಾಗಿದೆ ಎಂದು ಕೋಳಿ ಮಾಂಸ ವ್ಯಾಪಾರಿಗಳು, ಸಾಕಣೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

​ವದಂತಿ ಬರೀ ಸುಳ್ಳು.. ಸುಳ್ಳು.. ಸುಳ್ಳು..

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ವದಂತಿ ಪರಿಶೀಲಿಸಲು ಕೋಳಿ ಸಾಕಣೆದಾರರ ಸಂಘ ಸತ್ಯ ಶೋಧನೆ ನಡೆಸಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಕಂಡುಕೊಂಡಿದೆ. ಆದರೆ ಜನರು ಮಾತ್ರ ಭಯದಿಂದಾಗಿ ಕೋಳಿ ಮಾಂಸ ಸೇವನೆ ಮಾಡುವುದು ಕಡಿಮೆಯಾಗುತ್ತಿದೆ ಎಂಬ ಮಾಹಿತಿ, ಕೋಳಿ ಸಾಕಣೆದಾರರ ವಲಯದಲ್ಲಿ ನಡುಕ ಹುಟ್ಟಿಸಿದೆ.

​ನಷ್ಟದ ಸುಳಿಯಲ್ಲಿ ಕೋಳಿ ವ್ಯಾಪಾರ

ಅಂದಾಜಿನ ಪ್ರಕಾರ ಒಂದು ಕೆ.ಜಿ. ಕೋಳಿ ಮಾಂಸದ ಉತ್ಪಾದನೆ ವೆಚ್ಚ 80 ರೂ.ಗಳಿಂದ 90 ರೂ. ತಗಲುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಉತ್ಪಾದಕರಿಗೆ ಸಿಗುವ ಮಾರಾಟದ ಬೆಲೆ ಬೆಂಗಳೂರಿನಲ್ಲಿ 30 ರೂ.ಗಳಿಂದ 35ರೂ., ಅಂದರೆ 50 ರಿಂದ 55 ರೂ. ನಷ್ಟವಾಗುತ್ತಿದೆ ಎಂಬ ಮಾಹಿತಿ ಇದೆ. ಕೋಳಿ ಮಾಂಸದ ವ್ಯಾಪಾರ ಮಾಡುವವರಿಗೆ ನಷ್ಟವಿಲ್ಲ, ಉತ್ಪಾದಕರಿಂದ ಖರೀದಿಸಿ ಕೋಳಿ ಮಾಂಸ ಮಾರುವಾಗ ಲಾಭದ ಮಾರ್ಜಿನ್‌ ಇರಿಸಿಯೇ ಮಾರುತ್ತಾರೆ. ರಾಜ್ಯದ ಬಹುತೇಕ ಕಡೆ ಕೋಳಿ ಮಾಂಸದ ಸಗಟು ಮಾರಾಟ ದರ 80- 100 ರೂ.ಗೆ ಮಾರುತ್ತಿದ್ದಾರೆ. ಇನ್ನೊಂದೆಡೆ ಕೊರೊನಾ ವೈರಸ್‌ ಹಾವುಗಳಿಂದಲೂ ಬಂದಿರುವ ಸಾಧ್ಯತೆ ಇದೆ ಎಂದು ಚೀನಾ ಸಂಶೋಧಕರು ಉಲ್ಲೇಖೀಸಿದ್ದಾರೆ. ಯಾವುದೇ ರೋಗಾಣುಗಳಿದ್ದರೂ ಮಾಂಸ ಅಥವಾ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿದಾಗ ಉಳಿಯುವುದಿಲ್ಲ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಸಾಕಾಣಿಕೆದಾರರು ಜಾಗೃತಿ ಮೂಡಿಸುತ್ತಿದ್ದಾರೆ.

ಕುಕ್ಕುಟೋದ್ಯಮಕ್ಕೆ ​ವರ್ಷವಿಡೀ ನಷ್ಟ..!

ಈ ವರ್ಷ ಒಂದೇ ಒಂದು ತಿಂಗಳೂ ಕೂಡಾ ಕೋಳಿ ಸಾಕಾಣಿಕೆದಾರರು ಲಾಭ ಕಂಡಿಲ್ಲ. ಮೊದಲ 6-7 ತಿಂಗಳಲ್ಲಿ ಪ್ರಕೃತಿ ವಿಕೋಪ ಮತ್ತಿತರ ಕಾರಣಗಳಿಂದ ಆಹಾರ ವಸ್ತು ಸರಿಯಾಗಿ ಸಿಗದೆ ನಷ್ಟವಾಗಿತ್ತು. ಅನಂತರದ 3 ತಿಂಗಳು ಲಾಭ-ನಷ್ಟ ಎರಡೂ ಇಲ್ಲದೆ ಉದ್ಯಮ ನಡೆದಿತ್ತು. ಇದೀಗ ಸುಳ್ಳು ಸುದ್ದಿಯಿಂದಾಗಿ ನಷ್ಟವೇ ಆಗುತ್ತಿದೆ. ಬ್ಯಾಂಕ್‌ ಸಾಲ ಪಡೆದು ಉದ್ಯಮ ಆರಂಭಿಸಿದವರು ಸಂಕಷ್ಟದಲ್ಲಿದ್ದಾರೆ. ಸರಕಾರ ಈ ಉದ್ಯಮಕ್ಕೆ ಸಬ್ಸಿಡಿ ಒದಗಿಸಿ ನೆರವಾಗಬೇಕು ಎಂದು ಕೋಳಿ ಸಾಕಾಣಿಕೆದಾರರು ಆಗ್ರಹಿಸಿದ್ದಾರೆ.

​ಇದ್ರೂ ನಷ್ಟ, ಕೊಟ್ಟರೂ ನಷ್ಟ

ಕೊರೊನಾ ವದಂತಿಯಿಂದ ಕೋಳಿ ವ್ಯಾಪಾರಿಗಳಿಗೆ ತುಂಬಾ ನಷ್ಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆಜಿ ಕೋಳಿ ಬೆಲೆ ರೀಟೇಲ್‌ನಲ್ಲಿ 30 ರಿಂದ 35 ರೂ. ಇದೆ. ತುಂಬಾ ಕಡಿಮೆ ಬೆಲೆ ಸಿಗ್ತಿದೆ ಎಂದು ಮಾರುಕಟ್ಟೆಗೆ ಹಾಕಿದರೆ ನಷ್ಟವಾಗುತ್ತದೆ. ಇಲ್ಲವೆಂದು ತಮ್ಮಲ್ಲೇ ಇಟ್ಕೊಂಡ್ರೆ, ಕೋಳಿ ನಿರ್ವಹಣೆಯಿಂದ ನಷ್ಟವಾಗುತ್ತೆ. ಆದ್ದರಿಂದ ಬಂದಷ್ಟು ಬರಲಿ ಎಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪ್ರತಿ ಕೆಜಿಗೆ 50ರಿಂದ 60 ರೂಗಳಷ್ಟು ನಷ್ಟವಾಗುತ್ತಿದೆ ಎಂದು ಕೋಳಿ ಸಾಕಾಣಿಕೆದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

​ಭಯ ಪಡುವ ಅಗತ್ಯವಿಲ್ಲ

ರಾಜ್ಯ ಸೇರಿ ನಾನಾ ಕಡೆ ಈ ಸುಳ್ಳು ವದಂತಿ ಹರಿದಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಯವುದೇ ರೀತಿಯಲ್ಲಿ ಭಯ ಪಡುವ ಅಗತ್ಯತೆ ಇಲ್ಲ. ಯಾವುದೇ ಆಹಾರದ ವಸ್ತುಗಳು ಬೇಯಿಸಿದ ಮೇಲೆ ಬಿಸಿಯ ತಾಪಕ್ಕೆ ಎಂತಹದೇ ವೈರಸ್‌ ಇದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಇದಕ್ಕೆ ಸಂಬಂದ ಪಟ್ಟಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಷ್ಟನೆ ನೀಡಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣದ ಸುಳ್ಳು ವದಂತಿ ಬಿಟ್ಟು, ಸರಕಾರದ ಹೇಳಿಕೆಯನ್ನು ಆಲಿಸಬೇಕಿದೆ ಎಂದು ಹೊಸಪೇಟೆಯ ತಾಲೂಕು ಪಶುಸಂಗೋಪನೆಯ ತಾಲೂಕು ವೈದ್ಯಧಿಕಾರಿ ಡ.ಬೆಣ್ಣೆ ಬಸವಾರಾಜ್‌ ವಿಜಯಕರ್ನಾಟಕಕ್ಕೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ