ಆ್ಯಪ್ನಗರ

ಜಿಎಸ್‌ಟಿಗೆ ವಿರೋಧ: ರಾಜ್ಯದೆಲ್ಲೆಡೆ ಮೆಡಿಕಲ್‌ ಶಾಪ್ ಬಂದ್

ರಾಜ್ಯದೆಲ್ಲೆಡೆ ಸೋಮವಾರ ಇಡೀ ದಿನ ಔಷಧ ಮಳಿಗೆಗಳು ಬಂದ್‌ ಆಗಿರಲಿವೆ. ಮೇ 29ರ ರಾತ್ರಿ 12ರಿಂದ ಮೇ 30ರ ರಾತ್ರಿ 12ರವರೆಗೆ ಮೆಡಿಕಲ್‌ ಶಾಪ್‌ಗಳು ಬಂದ್‌ ಆಗಿರುತ್ತವೆ.

ವಿಕ ಸುದ್ದಿಲೋಕ 30 May 2017, 11:15 am

ಬೆಂಗಳೂರು: ರಾಜ್ಯದೆಲ್ಲೆಡೆ ಸೋಮವಾರ ಇಡೀ ದಿನ ಔಷಧ ಮಳಿಗೆಗಳು ಬಂದ್‌ ಆಗಿರಲಿವೆ. ಮೇ 29ರ ರಾತ್ರಿ 12ರಿಂದ ಮೇ 30ರ ರಾತ್ರಿ 12ರವರೆಗೆ ಮೆಡಿಕಲ್‌ ಶಾಪ್‌ಗಳು ಬಂದ್‌ ಆಗಿರುತ್ತವೆ.

Vijaya Karnataka Web medical shops observes bundh today
ಜಿಎಸ್‌ಟಿಗೆ ವಿರೋಧ: ರಾಜ್ಯದೆಲ್ಲೆಡೆ ಮೆಡಿಕಲ್‌ ಶಾಪ್ ಬಂದ್


ಕೇಂದ್ರ ಸರಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್‌ ಅನ್ನು ಸ್ಕ್ಯಾ‌ನ್‌ ಮಾಡಿ ಆಯಾ ಮೆಡಿಕಲ್‌ ಸ್ಟೋರ್‌ನವರು ಸೆಂಟ್ರಲ್‌ ಇ-ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಬೇಕೆಂಬ ವ್ಯವಸ್ಥೆ ಜಾರಿಗೆ ಮುಂದಾಗಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮತ್ತು ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ವಿರೋಧಿಸಿ ಮೆಡಿಕಲ್‌ ಶಾಪ್‌ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಬೆಂಗಳೂರಿನಲ್ಲಿ ಹೋಟೆಲ್‌ ಬಂದ್‌: ಈ ನಡುವೆ, ಬೆಂಗಳೂರಿನಲ್ಲಿ ತಿನಿಸುಗಳ ಮೇಲಿನ ಸೇವಾ ತೆರಿಗೆ ಹೆಚ್ಚಳ ಪ್ರತಿಭಟಿಸಿ ಹೋಟೆಲ್‌, ರೆಸ್ಟೋರೆಂಟ್‌ಗಳನ್ನು ಮೇ 30ರಂದು ಮುಚ್ಚಲು ಹೋಟೆಲ್‌ ಮಾಲೀಕರ ಸಂಘ ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ