ಆ್ಯಪ್ನಗರ

ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ನ ಅನನ್ಯಾ, ಚಿನ್ಮಯ್‌ ವರ್ಲ್ಡ್‌ ಮೆಮೋರಿ ಚಾಂಪಿಯನ್ಸ್‌

ಚೀನಾದ ಹಾಂಕಾಂಗ್‌ನಲ್ಲಿ ನಡೆದ '27ನೇ ವರ್ಲ್ಡ್‌ ಮೆಮೋರಿ ಚಾಂಪಿಯನ್‌ಶಿಪ್‌'ನಲ್ಲಿ ಚಿಕ್ಕಬಳ್ಳಾಪುರದ ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ನ ...

Vijaya Karnataka 28 Dec 2018, 5:00 am
ಬೆಂಗಳೂರು: ಚೀನಾದ ಹಾಂಕಾಂಗ್‌ನಲ್ಲಿ ನಡೆದ '27ನೇ ವರ್ಲ್ಡ್‌ ಮೆಮೋರಿ ಚಾಂಪಿಯನ್‌ಶಿಪ್‌'ನಲ್ಲಿ ಚಿಕ್ಕಬಳ್ಳಾಪುರದ ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ನ ವಿದ್ಯಾರ್ಥಿಗಳಾದ ಅನನ್ಯಾ ಹಾಗೂ ಚಿನ್ಮಯ್‌ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.
Vijaya Karnataka Web BNG-2712-2-2-ADI CHUNCHANGIRI


ಡಿ. 22ರಂದು ನಡೆದ ಸ್ಪರ್ಧೆಯಲ್ಲಿ 18 ದೇಶಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನಿಯರ್‌ ವಿಭಾಗದಲ್ಲಿ 8ನೇ ತರಗತಿಯ ಅನನ್ಯಾ 23ನೇ ರಾರ‍ಯಂಕ್‌ ಗಳಿಸಿದ್ದು, ದೇಶದಿಂದ ಭಾಗವಹಿಸಿದ್ದ ಸ್ಪರ್ಧಾಳುಗಳಲ್ಲಿ ಮೂರನೇ ಅತಿ ಹೆಚ್ಚು 3,783 ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಚಾಂಪಿಯನ್‌ ಎನ್ನಿಸಿಕೊಂಡಿದ್ದಾರೆ. ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ನಿಂದ ಇಬ್ಬರು ಹಾಗೂ ಕಾರ್ಮೆಲ್‌ನಿಂದ ಒಬ್ಬರು ಸೇರಿದಂತೆ ಕರ್ನಾಟಕದಿಂದ ಮೂವರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಅನನ್ಯಾ ಹಾಗೂ ಚಿನ್ಮಯ್‌ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಅಸಾಧಾರಣ ನೆನಪಿನ ಶಕ್ತಿ:

ಅನುಭವ ಹಂಚಿಕೊಂಡ ವಿದ್ಯಾರ್ಥಿನಿ ಅನನ್ಯಾ, ''ಸ್ಮರಣ ಶಕ್ತಿ ವೃದ್ಧಿಗಾಗಿ ಎರಡು ತಿಂಗಳ ವಿಶೇಷ ತರಬೇತಿ ಪಡೆಯಲಾಗಿತ್ತು. ಅದರ ನೆರವಿನಿಂದ 15 ನಿಮಿಷಗಳಲ್ಲಿ 150ಕ್ಕೂ ಹೆಚ್ಚು ಪÜದಗಳನ್ನು ಒಮ್ಮೆಲೆ ನೆನಪಿಸಿಕೊಂಡು ಹೇಳುತ್ತೇನೆ. ಸ್ಪರ್ಧೆಯಲ್ಲಿ ಪಾಲ್ಗೊಂಡದ್ದು ವಿಶೇಷ ಅನುಭವ ನೀಡಿದೆ'' ಎಂದರು

ವಿದ್ಯಾರ್ಥಿ ಚಿನ್ಮಯ್‌,''ಸಾಧನೆ ತೃಪ್ತಿ ತಂದಿದೆ. ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು ಹೊಸ ಅನುಭವ ನೀಡಿದೆ'' ಎಂದು ಹೇಳಿದರು.

'ಮೆಮೋರಿ ಗುರು' ಡಾ. ಫ್ರ್ಯಾನ್ಸಿಸ್‌ ಕ್ಸೇವಿಯರ್‌, ಪ್ರಾಂಶುಪಾಲ ವಿಂಗ್‌ ಕಮಾಂಡರ್‌ ರಂಜಿತ್‌ ಕುಮಾರ್‌ ಮಂಡಲ್‌, ವರ್ಲ್ಡ್‌ ಮೆಮೋರಿ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಜಯಸಿಂಹ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ