ಆ್ಯಪ್ನಗರ

2022ರೊಳಗೆ ರಾಜ್ಯದ ಮಾನಸಿಕ ರೋಗಿಗಳ ಸಂಖ್ಯೆ ಶೂನ್ಯಕ್ಕೆ ಇಳಿಸಿ

ನಿಮ್ಹಾನ್ಸ್‌ ಘಟಿಕೋತ್ಸವದಲ್ಲಿಕೇಂದ್ರ ಸಚಿವ ಡಾ...

Vijaya Karnataka 17 Sep 2019, 5:00 am
ಬೆಂಗಳೂರು: ರಾಜ್ಯದಲ್ಲಿ2022ರೊಳಗೆ ಮಾನಸಿಕ ರೋಗಿಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಜತೆಗೆ ಎಲ್ಲಾಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಕೇಂದ್ರ ಸಚಿವ ಡಾ.ಹರ್ಷವರ್ಧನ್‌ ಅವರು ಕರ್ನಾಟಕಕ್ಕೆ ಗುರಿ ನೀಡಿದ್ದಾರೆ.
Vijaya Karnataka Web NIMHANSE CONVOCATION082615


ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್‌)ಯ 24ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿ ''ಕೇಂದ್ರ ಸರಕಾರ 2014ರಲ್ಲಿರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿಯನ್ನು ಪ್ರಕಟಿಸಿತು. 2017ರಿಂದ ಕಾಯಿದೆ ರೂಪ ನೀಡಿ ಜಾರಿಗೆ ತಂದ ಬಳಿಕ 560 ಜಿಲ್ಲೆಗಳಲ್ಲಿಅನುಷ್ಠಾನಿಸಲಾಗಿದೆ. ಕರ್ನಾಟಕದಲ್ಲಿಎಲ್ಲಾ30 ಜಿಲ್ಲೆಗಳಲ್ಲೂಯೋಜನೆ ತಲುಪಿದ್ದು ಇತರ ರಾಜ್ಯಗಳಿಗೆ ಮಾದರಿಯಾಗಿದೆ.2025ರೊಳಗೆ ಕ್ಷಯ ರೋಗ ಮುಕ್ತ ಭಾರತವನ್ನಾಗಿಸುವ ಗುರಿ ಹೊಂದಲಾಗಿದೆ,'' ಎಂದರು.

''ನಿಮ್ಹಾನ್ಸ್‌ ಸಂಸ್ಥೆಯು ಡಿಗ್ರಿ ನೀಡಲಷ್ಟೇ ಸೀಮಿತವಾಗದೆ ಇಡೀ ರಾಷ್ಟ್ರಕ್ಕೆ ಶೈಕ್ಷಣಿಕ ಕಾಶಿ ಆಗುವ ಜವಾಬ್ದಾರಿಯನ್ನು ಹೊರಬೇಕು. ಮಾನಸಿಕ ರೋಗ ಕ್ಷೇತ್ರಕ್ಕೆ ಬೇಕಿರುವ ಬೋಧಕ ವರ್ಗವನ್ನು ತರಬೇತುಗೊಳಿಸುವ ನೇತೃತ್ವ ವಹಿಸಲಿ,'' ಎಂದು ಸಲಹೆ ನೀಡಿದರು.

ನಾತ್‌ರ್‍ ಕ್ಯಾಂಪಸ್‌ಗೆ ಭೂಮಿ ನೀಡಿ

''ಬೆಂಗಳೂರು ನಗರದಾಚೆ ನಿಮ್ಹಾನ್ಸ್‌ ಸಂಸ್ಥೆಯ ನಾತ್‌ರ್‍ ಕ್ಯಾಂಪಸ್‌ ನಿರ್ಮಾಣವಾಗಲಿದೆ. ಇದಕ್ಕಾಗಿ 40 ಎಕರೆ ಜಮೀನು ಪೈಕಿ 31 ಎಕರೆಯನ್ನು ರಾಜ್ಯ ಸರಕಾರ ಮಂಜೂರು ಮಾಡಿದೆ. ಹೆಚ್ಚುವರಿಯಾಗಿ 50 ಎಕರೆ ಭೂಮಿಯನ್ನು ವಾರದಲ್ಲಿಮಂಜೂರಿ ನೀಡಿದ್ದಲ್ಲಿಕೇಂದ್ರ ಸರಕಾರವು ಕ್ಯಾಂಪಸ್‌ ನಿರ್ಮಾಣಕ್ಕೆ ವೆಚ್ಚವಾಗುವ ಹಣಕಾಸು ನೆರವು ನೀಡಲು ಸಿದ್ಧ,'' ಎಂದು ಸಚಿವರು ವಾಗ್ದಾನ ನೀಡಿದರು.

ಸಿಎಂ ಬಿ.ಎಸ್‌.ಯಡಿಯೂರಪ್ಪ ''ರಾಜ್ಯದಲ್ಲಿಮಾನಸಿಕ ರೋಗಿಗಳಿಗೆ ಸರಕಾರ ಅಗತ್ಯ ಚಿಕಿತ್ಸೆ ಒದಗಿಸಲು ಹೊಸ ತಾಂತ್ರಿಕೆಯನ್ನು ಅಳವಡಿಸಿಕೊಂಡಿದೆ. ನಿಮ್ಹಾನ್ಸ್‌ ಕೈಗೊಳ್ಳುವ ಎಲ್ಲಕಾರ್ಯಕ್ರಮಗಳಿಗೆ ಸರಕಾರ ಬೆಂಬಲ ನೀಡಲಿದೆ. ಆರೋಗ್ಯ ಸೇವೆಗಳ ಹೆಚ್ಚಳಕ್ಕಾಗಿ ಬಾಲಕೋಟ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ ಹಾಗೂ ಯಾದಗಿರಿಯಲ್ಲಿವೈದ್ಯ ಕಾಲೇಜುಗಳನ್ನು ಆರಂಭಿಸಲು ಸರಕಾರ ಬದ್ಧ,'' ಎಂದರು.

ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರ್‌, ಸಂಸದ ಪಿ.ಸಿ.ಮೋಹನ್‌, ರಾಜ್ಯಸಭೆ ಸದಸ್ಯ ರಾಜೀವ್‌ಗೌಡ ಮತ್ತಿತರರಿದ್ದರು.

ಯೋಗ ಚಿಕಿತ್ಸೆಗೆ ಡಬ್ಲ್ಯುಎಚ್‌ಒ ಮುದ್ರೆ

''ಭಾರತದಲ್ಲಿಹುಟ್ಟು ಪಡೆದಿರುವ ಯೋಗ ಇಂದು ಮಾನಸಿಕ ರೋಗಗಳನ್ನು ವಾಸಿ ಮಾಡಬಹುದು ಎಂಬುದು ಸಂಶೋಧನೆಯಿಂದ ದೃಢೃಪಟ್ಟಿದೆ. ಈ ನಿಟ್ಟಿನಲ್ಲಿಕೇಂದ್ರವು ಈಗಾಗಲೇ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ವಿಶ್ವಸಂಸ್ಥೆಯಿಂದ ವಿಶ್ವ ಯೋಗ ದಿನವನ್ನಾಗಿಸುವಲ್ಲಿಯಶಸ್ವಿಯಾಗಿದೆ. 2000ರಲ್ಲೇ ಜಪಾನ್‌ ಕೊಬೆಯಲ್ಲಿನಡೆದ ವಿಶ್ವ ಸಂಸ್ಥೆಯ ಆರೋಗ್ಯ ಸೇವೆಗಳ ನೀತಿ ನಿರೂಪಣೆಯ ಶೃಂಗಸಭೆಯಲ್ಲಿಯೋಗವು ಭವಿಷ್ಯದ ರೋಗ ನಿವಾರಕ ಸೇವೆ ಆಗಲಿದೆ ಎಂಬುದನ್ನು ದಾಖಲಿಸಿತ್ತು. ಅದೀಗ ನಿಜವಾಗಿದೆ,'' ಎಂದು ಡಾ.ಹರ್ಷವರ್ಧನ್‌ ತಿಳಿಸಿದರು.

176 ಮಂದಿಗೆ ಪದವಿ ಪ್ರದಾನ

ಘಟಿಕೋತ್ಸವದಲ್ಲಿನರವಿಜ್ಞಾನ ಆರೋಗ್ಯ ಸಂಬಂಧಿತ ನಾನಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 176 ವಿದ್ಯಾರ್ಥಿ ವೃಂದಕ್ಕೆ ಪದವಿಯನ್ನು ನೀಡಲಾಯಿತು. ಈ ಪೈಕಿ 22 ಮಂದಿ ಗೈರಾಗಿದ್ದರು. ಜತೆಗೆ 14 ದತ್ತಿ ಪ್ರಶಸ್ತಿಯನ್ನು ಸಾಧಕ ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ