ಆ್ಯಪ್ನಗರ

ಎಂಇಪಿ ಮುಖಂಡರ ಪ್ರತಿಭಟನೆ ವಾಪಸ್‌

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಗಳಿಂದ ಹಣ ಪಡೆದಿದ್ದಾರೆಂದು ಆರೋಪಿಸಿ ಕೆಲ ಸ್ಪರ್ಧಾಳುಗಳು ಎಂಇಪಿ ಅಧ್ಯಕ್ಷೆ ಡಾ.ನೌಹೀರಾ ಶೇಖ್‌ ವಿರುದ್ಧ ಪಕ್ಷದ ಕಚೇರಿಯಲ್ಲಿ 25 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ವಾಪಸ್‌ ಪಡೆದಿದ್ದಾರೆ.

Vijaya Karnataka Web 20 Jun 2018, 8:56 am
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಗಳಿಂದ ಹಣ ಪಡೆದಿದ್ದಾರೆಂದು ಆರೋಪಿಸಿ ಕೆಲ ಸ್ಪರ್ಧಾಳುಗಳು ಎಂಇಪಿ ಅಧ್ಯಕ್ಷೆ ಡಾ.ನೌಹೀರಾ ಶೇಖ್‌ ವಿರುದ್ಧ ಪಕ್ಷದ ಕಚೇರಿಯಲ್ಲಿ 25 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ವಾಪಸ್‌ ಪಡೆದಿದ್ದಾರೆ.
Vijaya Karnataka Web mep


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟರಾಯನಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಜಿಲಾನಿ ಫಾತಿಮಾ ಹಾಗೂ ಇತರರು,''ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಅಧ್ಯಕ್ಷೆ ಯಾವ ಅಭ್ಯರ್ಥಿಗಳಿಂದ ಹಣ ಕೇಳಿಲ್ಲ. ಚುನಾವಣೆ ವೆಚ್ಚಕ್ಕೂ ಪಕ್ಷದ ವತಿಯಿಂದ ಅಭ್ಯರ್ಥಿಗಳಿಗೆ ಹಣ ನೀಡಿಲ್ಲ. ಕೆಲವರ ಇಲ್ಲ-ಸಲ್ಲದ ಆರೋಪದಿಂದಾಗಿ ಅಧ್ಯಕ್ಷೆ ವಿರುದ್ಧ ಆರೋಪ ಮಾಡಿದ್ದಾರಷ್ಟೇ,'' ಎಂದು ಸ್ಪಷ್ಟಪಡಿಸಿದರು.

''ಪ್ರಸಕ್ತ ವಿದ್ಯಮಾನ ಹಾಗೂ ಪಕ್ಷದ ಬೆಳವಣಿಗೆ ಹಿತದೃಷ್ಟಿಯಿಂದ ಈ ತಿಂಗಳಾಂತ್ಯದಲ್ಲಿ ಅಧ್ಯಕ್ಷರು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ವಿಸ್ತೃತ್ತ ಚರ್ಚೆ ನಡೆಸಿ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಸುಳ್ಳು ಸುದ್ದಿ ಅಥವಾ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು,'' ಎಂದು ವಿನಂತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ