ಆ್ಯಪ್ನಗರ

ದೇಶದಲ್ಲಿ ಶೇ.10ರಷ್ಟು ಹಾಲು ಕಲಬೆರಕೆ

ರಾಷ್ಟ್ರೀಯ ಹಾಲು ಗುಣಮಟ್ಟ ಸಮೀಕ್ಷೆ ಮಾಡಲಾಗಿದ್ದು, 6,432 ಸ್ಯಾಂಪಲ್‌ ಪರೀಕ್ಷಿಸಿ ವರದಿ ತಯಾರಿಸಲಾಗಿದೆ. ಇದರಲ್ಲಿ ಶೇ.90 ಹಾಲು ಸುರಕ್ಷಿತವಾಗಿದ್ದು, ನಾನಾ ಪರೀಕ್ಷೆಗಳನ್ನು ನಡೆಸಿ ಹಾಲಿನ ಗುಣಮಟ್ಟ ಪರೀಕ್ಷಿಸಲಾಗಿದೆ.

Vijaya Karnataka 14 Nov 2018, 7:37 am
ಹೊಸದಿಲ್ಲಿ : ಭಾರತದಲ್ಲಿ ಕುಡಿಯುವ ಬಹುಪಾಲು ಹಾಲು ಸುರಕ್ಷಿತವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ(ಎಫ್‌ಎಸ್‌ಎಸ್‌ಎಐ) ಮಧ್ಯಾಂತರ ವರದಿಯಲ್ಲಿ ಹೇಳಲಾಗಿದೆ. ಆದರೂ ಶೇ.10ರಷ್ಟು ಹಾಲು ಕಲಬೆರಕೆ ಎಂಬ ಅಂಶ ಆತಂಕಕಾರಿಯಾಗಿದೆ.
Vijaya Karnataka Web Milk


ರಾಷ್ಟ್ರೀಯ ಹಾಲು ಗುಣಮಟ್ಟ ಸಮೀಕ್ಷೆ ಮಾಡಲಾಗಿದ್ದು, 6,432 ಸ್ಯಾಂಪಲ್‌ ಪರೀಕ್ಷಿಸಿ ವರದಿ ತಯಾರಿಸಲಾಗಿದೆ. ಇದರಲ್ಲಿ ಶೇ.90 ಹಾಲು ಸುರಕ್ಷಿತವಾಗಿದ್ದು, ನಾನಾ ಪರೀಕ್ಷೆಗಳನ್ನು ನಡೆಸಿ ಹಾಲಿನ ಗುಣಮಟ್ಟ ಪರೀಕ್ಷಿಸಲಾಗಿದೆ. ಹಾಲಿನ 6,432 ಸ್ಯಾಂಪಲ್‌ಗಳ ಪೈಕಿ ಶೇ.10ರಷ್ಟು, ಅಂದರೆ 638 ಸ್ಯಾಂಪಲ್‌ಗಳಲ್ಲಿ ಅಪಾಯಕಾರಿ ಕಲ್ಮಶಗಳಿರುವುದು ಕಂಡು ಬಂದಿದೆ. ರಾಸುಗಳನ್ನು ಸರಿಯಾಗಿ ಮೇಯಿಸದೇ ಇರುವುದು ಮತ್ತು ಗುಣಮಟ್ಟದ ಆಹಾರವನ್ನು ರಾಸುಗಳಿಗೆ ನೀಡದೇ ಇರುವುದರಿಂದ ಈ ಹಾಲಿನಲ್ಲಿ ಅಪಾಯಕಾರಿ ಅಂಶಗಳು ಸೇರಿಕೊಂಡಿವೆ ಎಂದು ಎಫ್‌ಎಸ್‌ಎಸ್‌ಎಐ ಸಿಇಒ ಪವನ್‌ ಅಗರವಾಲ್‌ ಹೇಳಿದ್ದಾರೆ.

''ಭಾರತದಲ್ಲಿನ ಬೃಹತ್‌ ಪ್ರಮಾಣದ ಹಾಲು ನಿಜಕ್ಕೂ ಕಲಬೆರಕೆ ಅಥವಾ ಕಲ್ಮಶಗಳಿಂದ ಮುಕ್ತವಾಗಿದೆ. ನಾನಾ ಭಾಗಗಳಲ್ಲಿ ಸಂಗ್ರಹಿಸಲಾದ ಸಾವಿರಾರು ಸ್ಯಾಂಪಲ್‌ಗಳಲ್ಲಿ ಶೇ.12ರಷ್ಟು ಸ್ಯಾಂಪಲ್‌ಗಳು ಕಲಬೆರಕೆಯಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ,'' ಎಂದು ಅಗರವಾಲ್‌ ತಿಳಿಸಿದ್ದಾರೆ.

ಸ್ಯಾಂಪಲ್‌ಗಳಲ್ಲಿ ಖಾದ್ಯ ತೈಲ, ಸಾಬೂನು, ಗ್ಲೂಕೋಸ್‌, ಯೂರಿಯಾ ಮತ್ತು ಅಮೋನಿಯಂ ಸಲ್ಫೇಟ್‌ ಸೇರಿದಂತೆ 13 ಕಲ್ಮಶಗಳಿರುವುದು ಪತ್ತೆಯಾಗಿದೆ. ಹಾಲಿನಲ್ಲಿರಬಹುದಾದ ಕೀಟನಾಶಕ, ಲಿವರ್‌ ಹಾನಿಗೊಳಿಸಬಹುದಾದ ಅಫ್ಲಟಾಕ್ಸಿನ್‌ ಎಂ1 ಅಂಶಗಳ ಬಗೆಗೆ ಪರೀಕ್ಷೆ ನಡೆಸಲಾಯಿತು. ಆದರೆ, ಕಲಬೆರಕೆ ಹಾಲಿನ ಸ್ಯಾಂಪಲ್‌ಗಳಲ್ಲಿ ಈ ಅಂಶಗಳು ಕಂಡು ಬಂದಿಲ್ಲ ಎಂದು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ