ಆ್ಯಪ್ನಗರ

ಪೇ ಸಿಎಂ ಅಭಿಯಾನ, ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ: ಸಚಿವ ಬಿ.ಸಿ. ನಾಗೇಶ್ ಕಿಡಿ

ಕಾಂಗ್ರೆಸ್ ಹತಾಷರಾಗಿ ಈ‌ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಭೂಮಿಯಿಂದ ಹಿಡಿದು ಆಕಾಶವರೆಗೆ ದೊಡ್ಡ ಹಗರಣದ ಇತಿಹಾಸ ಇದೆ. ಇವಾಗ ಹಗರಣ ಮಾಡಲು ಜನರಿಗೆ ಅವಕಾಶ ಕೊಟ್ಟಿಲ್ಲ. ಹಗರಣದಿಂದ ಖಜಾನೆ ತುಂಬಿಲ್ಲ ಎಂದ ಕಾರಣಕ್ಕಾಗಿ ಈ‌ ರೀತಿಯ ಕೀಳು ಮಟ್ಟದ ಅಭಿಯಾನ ನಡೆಸುತ್ತಿದೆ ಎಂದು ಆರೋಪಿಸಿದರು. ಇದು ಕಾಂಗ್ರೆಸ್ ಹಾಗೂ ದೇಶದ ರಾಜಕೀಯ ದೃಷ್ಟಿಯಿಂದ ಒಳ್ಳೆಯದಲ್ಲ. ಕಾಂಗ್ರೆಸ್ ನವರು ಏನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ನಾವು ಮಾಡಿದ ತಪ್ಪುಗಳು ಜನರಲ್ಲಿ ಮರೆತು ಹೋಗುತ್ತೆ ಎಂಬ ಭಾವನೆ ಬರುತ್ತಿದೆ ಎಂದು ಕಿಡಿಕಾರಿದರು.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 21 Sep 2022, 11:55 am

ಹೈಲೈಟ್ಸ್‌:

  • ಪೇ ಸಿಎಂ ಅಭಿಯಾದ ಮೂಲಕ ಕಾಂಗ್ರೆಸ್ ನಿಂದ ಕೀಳು ರಾಜಕೀಯ
  • ಕಾಂಗ್ರೆಸ್ ಹತಾಷರಾಗಿ ಈ‌ ರೀತಿ ಮಾಡುತ್ತಿದ್ದಾರೆ
  • ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆಕ್ರೋಶ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web B C Nagesh
ಸಂಗ್ರಹ ಚಿತ್ರ
ಬೆಂಗಳೂರು: ನಗರದಲ್ಲಿ ಪೇ ಸಿಎಂ ಅಭಿಯಾನ ನಡೆಸುವ ಮೂಲಕ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹತಾಷರಾಗಿ ಈ‌ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಭೂಮಿಯಿಂದ ಹಿಡಿದು ಆಕಾಶವರೆಗೆ ದೊಡ್ಡ ಹಗರಣದ ಇತಿಹಾಸ ಇದೆ. ಇವಾಗ ಹಗರಣ ಮಾಡಲು ಜನರಿಗೆ ಅವಕಾಶ ಕೊಟ್ಟಿಲ್ಲ. ಹಗರಣದಿಂದ ಖಜಾನೆ ತುಂಬಿಲ್ಲ ಎಂದ ಕಾರಣಕ್ಕಾಗಿ ಈ‌ ರೀತಿಯ ಕೀಳು ಮಟ್ಟದ ಅಭಿಯಾನ ನಡೆಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ಶಾಲೆಗಳ ಆಸ್ತಿ ಕಬಳಿಕೆಗೆ ರಿಯಲ್ ಎಸ್ಟೇಟ್, ಭೂ ಮಾಫಿಯಾಗಳು ಕಣ್ಣು ಹಾಕಿದ್ದವು : ಬಿ.ಸಿ. ನಾಗೇಶ್‌
ಇದು ಕಾಂಗ್ರೆಸ್ ಹಾಗೂ ದೇಶದ ರಾಜಕೀಯ ದೃಷ್ಟಿಯಿಂದ ಒಳ್ಳೆಯದಲ್ಲ. ಕಾಂಗ್ರೆಸ್ ನವರು ಏನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಎಲ್ಲರನ್ನೂ ಬಟ್ಟೆ ಬಿಚ್ಚಿಸಿ ನಿಲ್ಲಿಸಿದಾಗ ನಾವು ಮಾಡಿದ ತಪ್ಪುಗಳು ಜನರಲ್ಲಿ ಮರೆತು ಹೋಗುತ್ತೆ ಎಂಬ ಭಾವನೆ ಬರುತ್ತಿದೆ ಎಂದು ಕಿಡಿಕಾರಿದರು.

ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ‌ ಸಿಎಂ ಭಾವಚಿತ್ರ ಹಾಕಿ ಪೇ ಸಿಎಂ ಎಂದು ಕಾಂಗ್ರೆಸ್ ನವರು ಅಭಿಯಾನ ಮಾಡ್ತಾ ಇದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಮಾಡ್ತಾ ಇದ್ದಾರೆ, ಮೊದಲು ಅವರಿಗೆ ಪೇ ಮಾಡಲಿ ಎಂದರು.

ಸಿದ್ದರಾಮಯ್ಯಗೆ ಕಾರು, ವಾಚ್ ಬೇಕು ಅವರಿಗೆ ಪೇ ಮಾಡಲಿ. ರಮೇಶ್ ಕುಮಾರ್ನೂರು ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಘನತೆ ಇಟ್ಟುಕೊಂಡು ಸಿಎಂ ವಿರುದ್ಧ ಟೀಕೆ ಮಾಡಬೇಕು. ಭ್ರಷ್ಟಾಚಾರ ಕಾಂಗ್ರೆಸ್ ನಿಂದ ಹುಟ್ಟಿದೆ, ಕಾಂಗ್ರೆಸ್ ಇರುವವರಿಗೆ ಭ್ರಷ್ಟಾಚಾರ ನಿಲ್ಲಲ್ಲ ಎಂದು ಕಿಡಿಕಾರಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ