ಆ್ಯಪ್ನಗರ

ಸಚಿವ ಸ್ಥಾನ: ಅತೃಪ್ತರ ಮನವೊಲಿಸುವೆ ಎಂದ ಡಿಸಿಎಂ

ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿಲ್ಲ. ಹಾಗಾಗಿ ಒಂದೊಂದು ಜಿಲ್ಲೆಗಳಿಗೂ ಸಚಿವ ಸ್ಥಾನ ಕೊಡಲು ಆಗಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ನಡೆಸಲಾಗುವುದು.

Vijaya Karnataka Web 7 Jun 2018, 2:21 pm
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಚರ್ಚೆ ವೇಳೆಯೇ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿಲ್ಲ. ಹಾಗಾಗಿ ಒಂದೊಂದು ಜಿಲ್ಲೆಗಳಿಗೂ ಸಚಿವ ಸ್ಥಾನ ಕೊಡಲು ಆಗಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ನಡೆಸಲಾಗುವುದು. ಎಂ.ಬಿ.ಪಾಟೀಲ್ ನನ್ನ ಆತ್ಮೀಯರು ,ಅವರ ಜತೆಯೂ ನಾನು ಚರ್ಚೆ ನಡೆಸಿ ಮನವೊಲಿಸುತ್ತೇನೆ ಎಂದು ಡಿಸಿಎಂ ಪರಮೇಶ್ವರ್‌ ಹೇಳಿದರು.
Vijaya Karnataka Web param


ಸಣ್ಣ-ಪುಟ್ಟ ತಪ್ಪುಗಳಿದ್ದರೆ ಬದಿಗೊತ್ತಿ ಸಹಕರಿಸಿ ಎಂದು ಅತೃಪ್ತರಲ್ಲಿ ಪರಮೇಶ್ವರ್ ಮನವಿ ಮಾಡಿದರು. ಹೈಕಮಾಂಡ್ ಹೇಳಿದ ಪ್ರಕಾರ ಆದಷ್ಟು ಬೇಗನೆ ಸಂಪುಟ ಪುನರಚನೆ ಆಗಲಿದೆ. ಯಾರು ಮಂತ್ರಿಯಾಗಿ ಉತ್ತಮ ಕೆಲಸ ಮಾಡುವುದಿಲ್ಲವೋ ಅವರನ್ನು ಸಂಪುಟದಿಂದ ಕೈಬಿಡಲಾಗುವುದು. ಎಐಸಿಸಿ ಮಂತ್ರಿಗಳ ಮೌಲ್ಯಮಾಪನ ಮಾಡಲಿದೆ. ಸೂಕ್ತರಿಗೆ ಅವಕಾಶ ಕಲ್ಪಿಸುವುದಾಗಿ ಹೈಕಮಾಂಡ್ ಹೇಳಿದೆ ಎಂದರು.
ಜಯಮಾಲಾ ವಿಧಾನ ಪರಿಷತ್‌ ಸಭಾ ನಾಯಕಿ

ಪರಿಷತ್ ಸದಸ್ಯೆ ಜಯಮಾಲಾ ಅವರು ಸಚಿವರಾಗಿದ್ದಾರೆ. ಪರಿಷತ್ ಸಭಾ ನಾಯಕರಾಗಲು ಜೆಡಿಎಸ್ ನಲ್ಲೂ ಯಾರೂ ಮುಖಂಡರಿಲ್ಲ.ಹಾಗಾಗಿ ಸ್ವಾಭಾವಿಕವಾಗಿ ಜಯಮಾಲಾ ಅವರೇ ಪರಿಷತ್ ಸಭಾ ನಾಯಕರಾಗುತ್ತಾರೆ. ಪರಿಷತ್‌ನಲ್ಲಿ ಈಗಾಗಲೇ ಒಬ್ಬರನ್ನು ಮಂತ್ರಿ ಮಾಡಿದ್ದೇವೆ ಎಂದರು.

ಕುರುಬ ಸಮುದಾಯಕ್ಕೆ ಸ್ಥಾನ ನೀಡಿದ್ದೇವೆ. ಶಂಕರ ಮಂತ್ರಿಯಾಗಿದ್ದಾರೆ. ಖಾತೆ ಹಂಚಿಕೆ ಫೈನಲ್ ಆಗಿದೆ. ಈಗಾಗಲೇ ಸಿಎಂಗೆ ಕಳುಹಿಸಿದ್ದೇವೆ. ಈ ಬಗ್ಗೆ ಸಿಎಂ ಹೇಳುತ್ತಾರೆ. ಮಂಡ್ಯ, ಹಾಸನ, ಕೊಡಗು ಸೇರಿ ಇತರೆ ಕಡೆ ನಮ್ಮ ಶಾಸಕರಿಲ್ಲ. ಅತೃಪ್ತರ ಜತೆ ಮಾತನಾಡಲು ನನಗೇನು ದೊಡ್ಡಸ್ಥಿಕೆ ಇಲ್ಲ. ಸ್ವಾಭಾವಿಕವಾಗಿ ಸಚಿವಸ್ಥಾನ ಸಿಗದಿದ್ದಕ್ಕೆ ಬೇಜಾರಾಗಿರುತ್ತದೆ. ಆ ಬಗ್ಗೆ ನಾವು ಚರ್ಚೆ ಮಾಡುವೆ. ಇಂತಹ ಸಂದರ್ಭ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎನ್ನುವ ಮಾಹಿತಿ ನನಗೂ ಬಂದಿದೆ ಎಂದು ಪರಮೇಶ್ವರ್‌ ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ಮುಂದಿನ ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕೆಂದು ನಿರ್ಧರಿಸಲಿದೆ. ಅಲ್ಲಿಯವರೆಗೂ ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತೇನೆ. ಯಾರೇ ಅಧ್ಯಕ್ಷರಾದರೂ ಅವರನ್ನು ಮುಕ್ತವಾಗಿ ಸ್ವಾಗತಿಸುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ