ಆ್ಯಪ್ನಗರ

Prabhu Chauhan: ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಲಿ: ಸಿದ್ದರಾಮಯ್ಯಗೆ ಪ್ರಭು ಚವ್ಹಾಣ್ ಸವಾಲು

Prabhu Chauhan Challenges Siddaramaiah - ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಸವಾಲು ಹಾಕಿದ್ದಾರೆ. ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದು ಪ್ರಭು ಚವ್ಹಾಣ್‌ ಸವಾಲು ಹಾಕಿದ್ದು, ನೀನು ಯಾರಪ್ಪಾ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುತ್ತೇನೆ ಅನ್ನೋಕೆ ? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

Edited byಅವಿನಾಶ ವಗರನಾಳ | Reported byಇರ್ಷಾದ್ ಉಪ್ಪಿನಂಗಡಿ | Vijaya Karnataka Web 3 Dec 2022, 4:16 pm

ಹೈಲೈಟ್ಸ್‌:


  • ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೆ ಸಚಿವ ಪ್ರಭು ಚವ್ಹಾಣ್‌ ಸವಾಲು
  • ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಲಿ, ಒಳಗಡೆ ಹಾಕಿಸ್ತೀನಿ ಎಂದ ಪ್ರಭು ಚವ್ಹಾಣ್‌
  • ನೀನು ಯಾರಪ್ಪಾ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುತ್ತೇನೆ ಅನ್ನೋಕೆ ? ಎಂದು ಸಿದ್ದರಾಮಯ್ಯಗೆ ಪ್ರಶ್ನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Prabhu Chavan on Siddaramaiah
ಬೆಂಗಳೂರು: ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸವಾಲು ಹಾಕಿದರು.
ವಿಕಾಸಸೌಧದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆ ತೆಗೆದು ಹಾಕುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ನೀನು ಯಾರಪ್ಪಾ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುತ್ತೇನೆ ಅನ್ನೋಕೆ ? ನನ್ನ ಮುಂದೆ ಹಂದಿ ತಿಂತೀನಿ, ಹಸು ಮಾಂಸ ತಿನ್ನುತ್ತೇನೆ ಅಂತೀರಲ್ಲಾ,‌ ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದರು.

ಕಾಂಗ್ರೆಸ್ ನಾಯಕರು ನನ್ನ ಇಲಾಖೆ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಆರೋಪಕ್ಕೆ ನಾನು ಖಂಡಿಸುತ್ತೇನೆ. ಪಶುಸಂಗೋಪನೆ ಇಲಾಖೆ ಬಗ್ಗೆ ಇಲ್ಲಸಲ್ಲದ ಆರೋಪ ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ. ಈ ಗೋ ಹತ್ಯೆ ನಿಷೇಧ ಕಾಯ್ದೆ 1964 ರಲ್ಲಿ ಮಾಡಲಾಗಿದೆ. ಎಸ್ ನಿಜಲಿಂಗಪ್ಪನವರು ಇದ್ದಾಗ ಗೋ ಹತ್ಯೆ ನಿಷೇಧ ಕಾನೂನು ಇತ್ತು. 1964ರಲ್ಲಿ ಯಾರ ಸರ್ಕಾರ ಇತ್ತು? ಎಂದು ಪ್ರಶ್ನಿಸಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ನಾಮಕಾವಾಸ್ತೆಗಾಗಿ ಹಿಂದೆ ಈ ಕಾಯ್ದೆ ಮಾಡಿದ್ರು. ಗೋ ಹತ್ಯೆ ಮಾಡಿದವರಿಗೆ 1964 ರಲ್ಲಿ 1000 ರೂ. ದಂಡ, ಆರು ತಿಂಗಳು ಜೈಲು ಶಿಕ್ಷೆ ಇತ್ತು. ಈಗ ಈ ಕಾಯ್ದೆಗೆ ನಾವು ಜೀವ ತುಂಬಿ. ಕಾಯ್ದೆ ಬಿಗಿಯಾಗಿ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ ಮಾಡಿದ್ದೇವೆ. ಈಗ ಸದ್ಯ ಗೋ ಹತ್ಯೆ ಮಾಡಿದ್ರೆ 3 ರಿಂದ 7 ವರ್ಷ ಜೈಲು ಶಿಕ್ಷೆ, 50 ರಿಂದ 1 ಲಕ್ಷ ರೂ. ದಂಡ ಹಾಕ್ತಿದ್ದೇವೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯಕ್ಕೆ 5,280 ಕೋಟಿ ಆರ್ಥಿಕ ಹೊರೆ: ಪ್ರಿಯಾಂಕ್ ಖರ್ಗೆ
ಪಶುಸಂಗೋಪನೆ ಇಲಾಖೆಯಲ್ಲಿ ನಾನು ಒಬ್ಬ ಸೇವಕನಾಗಿ ಕೆಲಸ ಮಾಡ್ತಿದ್ದೇನೆ. ಪಶುಸಂಗೋಪನೆ ಇಲಾಖೆಯಲ್ಲಿ ಪ್ರಪ್ರಥಮ ಬಾರಿಗೆ ಆಂಬುಲೆನ್ಸ್ ಸೇವೆ ಪ್ರಾರಂಭ‌ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

DK Shivakumar : ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರ ಭರವಸೆ ಕೇವಲ ಕಾಗದದ ಮೇಲೆ ಉಳಿದಿದೆ: ಡಿಕೆಶಿ
ಪ್ರಿಯಾಂಕ್‌ ಖರ್ಗೆ ಕಿಡಿ!
ರಾಜ್ಯದಲ್ಲಿ ಜಾರಿಗೊಳಿಸಿದ ಗೋಹತ್ಯೆ ನಿಷೇಧ ಕಾಯ್ದೆಯಿಂದ 5,280 ಕೋಟಿ ರೂ. ಆರ್ಥಿಕ ಹೊರೆಯಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದರು. ಈ ಕಾಯ್ದೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಏಟು ಬಿದ್ದಿದೆ ಎಂದು ಆರೋಪಿಸಿದ್ದರು. ಕಾಯ್ದೆ ಜಾರಿಯ ಸಮಸ್ಯೆ ಬಗ್ಗೆ ಹಣಕಾಸು ಇಲಾಖೆ ಕೂಡಾ ಎಚ್ಚರಿಕೆ ಕೊಟ್ಟಿತ್ತು‌. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ ಎಂದು ಎಚ್ಚರಿಕೆ ನೀಡಿತ್ತು‌. ಆದರೆ ಕೇಶವ ಕೃಪಾದಿಂದ ಬೆನ್ನು ತಟ್ಟಿಸಿಕೊಳ್ಳಲು ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದಿದ್ದರು.

ಆದರೆ, ರೈತರಿಗೆ ಈ ಕಾಯ್ದೆ ಮಾರಕವಾಗಿದೆ. ವಿಶ್ವದ 13% ಲೆದರ್ ಉತ್ಪಾದನೆ ಭಾರತದ್ದು. ಚರ್ಮದ ಉದ್ಯಮದಲ್ಲಿ 5.5 ಬಿಲಿಯನ್ ಡಾಲರ್ ಆದಾಯ ಇತ್ತು. ಫೂಟ್ ವೇರ್ ಹಾಗೂ ಲೆದರ್ ಗಾರ್ಮೆಂಟ್‌ನಲ್ಲಿ ವಿಶ್ವದಲ್ಲಿ ನಂಬರ್ 2 ಇದೆ. ವಿಶ್ವದ ಶೇ.9ರಷ್ಟು ಉತ್ಪಾದನೆ ಭಾರತದಲ್ಲಿ ಆಗುತ್ತದೆ ಎಂದು ಮಾಹಿತಿ ನೀಡಿದ್ದರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ