ಆ್ಯಪ್ನಗರ

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿರೋ ರೆಕಾರ್ಡ್ ಇದೆ: ಸಚಿವ ಆರ್‌ ಅಶೋಕ್‌

ಒಕ್ಕಲಿಗರ ನಿಯಮಕ್ಕೆ ಬಜೆಟ್‌ನಲ್ಲಿ 500 ಕೋಟಿ ಮೀಸಲಿಟ್ಟಿದ್ದಾರೆ. ಸ್ವಾಮೀಜಿ ಜೊತೆ ಫೋನ್ ಮೂಲಕ ಸಿಎಂ ಜೊತೆ ಮಾತನಾಡಿಸಿದ್ದೇನೆ. ಅವರಿಗೆ ಅನುಕೂಲ ಮಾಡುವಂತೆ ಮನವಿ ಮಾಡಿದ್ದೆವು. ಅದನ್ನು ಸಿಎಂ ಪುರಸ್ಕರಿಸಿದ್ದಾರೆ. ​​ಬ್ರಾಹ್ಮಣ ನಿಗಮಕ್ಕೂ ಹಣ ಮೀಸಲಿಟ್ಟು ಮುಖ್ಯ ವಾಹಿನಿಗೆ ಬರಲು ಸಹಾಯ ಮಾಡಿದ್ದಾರೆ ಎಂದು ಆರ್‌ ಅಶೋಕ್ ತಿಳಿಸಿದರು.

Vijaya Karnataka Web 9 Mar 2021, 1:00 pm
ಬೆಂಗಳೂರು: ಕಳೆದ ಬಿಎಸಿ ಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರ ಚರ್ಚೆ ಮಾಡಿದ್ದೆವು. ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡೋದಾಗಿ ಸಿದ್ದರಾಮಯ್ಯ ಹೇಳಿದ್ದರು. ಪ್ಯಾನಲ್‌ನಲ್ಲಿ ಇಂತಿಷ್ಟು ಜನ ಮಾತಾಡ್ತಾರೆ ಅಂತ ಪಟ್ಟಿ ನೀಡಿದ್ದರು. ಈಗ ಯೂ ಟರ್ನ್ ಹೊಡೆದಿದ್ದಾರೆ. ಅವರು ಮಾತನಾಡಿರೋದು ರೆಕಾರ್ಡ್ ಇದೆ ಎಂದು ಸಚಿವ ಆರ್. ಅಶೋಕ್‌ ಹೇಳಿದ್ದಾರೆ.
Vijaya Karnataka Web R Ashok
ಆರ್‌ ಅಶೋಕ್‌, ಕಂದಾಯ ಸಚಿವ (ಸಂಗ್ರಹ ಚಿತ್ರ)


ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಯೂ ಟರ್ನ್‌ ತೆಗೆದುಕೊಂಡಿದ್ದಾರೆ. ಮುಜುಗರದಿಂದ ತಪ್ಪಿಸಿಕೊಳ್ಳಲು ಸಭೆಯಿಂದ ಈಗ ಕಾಂಗ್ರೆಸ್‌ ಹಿಂದೆ ಸರಿದಿದೆ. ಸಭಾಪತಿ ಅವರಿಗೆ ಮನವಿ ಕೊಟ್ಟು, ಮತ್ತೊಮ್ಮೆ ಚರ್ಚೆಗೆ ಮನವಿ ಮಾಡ್ತೀವಿ. ಡೆಮಾಕ್ರಸಿ ಇರೋದ್ರಿಂದ ನಾವು ಚರ್ಚೆಗೆ ಅವಕಾಶ ಕೊಡ್ತೀವಿ. ಮಾತಾಡಲೇಬಾರದು ಅಂದ್ರೆ ದೇಶದಲ್ಲಿ ಕಾಂಗ್ರೆಸ್ ಎಮರ್ಜೆನ್ಸಿ ತಂದ ರೀತಿ ಕಾಣ್ತಿದೆ.

ರಾಹುಲ್ ಈಗಾಗಲೆ ಎಮರ್ಜೆನ್ಸಿ ಬಗ್ಗೆ ಕ್ಷಮಾಪಣೆ ಕೇಳಿದ್ದಾರೆ. ಒಂದು ವಿಚಾರವಾಗಿ ಬಹಿಷ್ಕಾರ ಮಾಡೋದು ಸರಿಯಲ್ಲ. ಚರ್ಚೆಯಲ್ಲಿ ಭಾಗಿಯಾಗಿ ವಿರೋಧ ವ್ಯಕ್ತಪಡಿಸಲಿ ಎಂದು ಕಾಂಗ್ರೆಸ್‌ಗೆ ಅವರು ಸಲಹೆ ನೀಡಿದರು. ಇನ್ನು ಒಕ್ಕಲಿಗರ ನಿಯಮಕ್ಕೆ ಬಜೆಟ್‌ನಲ್ಲಿ 500 ಕೋಟಿ ಮೀಸಲಿಟ್ಟಿದ್ದಾರೆ. ಸ್ವಾಮೀಜಿ ಜೊತೆ ಫೋನ್ ಮೂಲಕ ಸಿಎಂ ಜೊತೆ ಮಾತನಾಡಿಸಿದ್ದೇನೆ. ಅವರಿಗೆ ಅನುಕೂಲ ಮಾಡುವಂತೆ ಮನವಿ ಮಾಡಿದ್ದೆವು. ಅದನ್ನು ಸಿಎಂ ಪುರಸ್ಕರಿಸಿದ್ದಾರೆ.

ಕಾಂಗ್ರೆಸ್‌ನಂತಹ ವರ್ತನೆ ಇದುವರೆಗೆ ಯಾರು ಮಾಡಿಲ್ಲ: ಜಗದೀಶ್‌ ಶೆಟ್ಟರ್‌ ಸಿಡಿಮಿಡಿ

ಬ್ರಾಹ್ಮಣ ನಿಗಮಕ್ಕೂ ಹಣ ಮೀಸಲಿಟ್ಟು ಮುಖ್ಯ ವಾಹಿನಿಗೆ ಬರಲು ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು. ರಮೇಶ್ ಜಾರಕಿಹೊಳಿ ಸಿ.ಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ನಾನೂ ಕೂಡ ತನಿಖೆ ನಡೆಸುವಂತೆ ಮನವಿ ಮಾಡುತ್ತೇವೆ. ಇದು ಸುಳ್ಳು ದಾಖಲೆ ರೀತಿಯಲ್ಲಿದೆ. ತನಿಖೆ ನಡೆಸಲು ಸಿಎಂಗೆ ಮನವಿ ಮಾಡ್ತೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ