ಆ್ಯಪ್ನಗರ

ಆರು ಬಾರಿ ಶಾಸಕ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಸ್‌. ಅಂಗಾರಗೆ ಕೊನೆಗೂ ಸಚಿವ ಸ್ಥಾನ

ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್‌. ಅಂಗಾರ ಅವರಿಗೆ ಸಚಿವ ಸ್ಥಾನದ ಭಾಗ್ಯ ದೊರಕಿದೆ. ಸತತ ಆರು ಬಾರಿ ಶಾಸಕರಾಗಿರುವ ಅವರಿಗೆ ಸಚಿವ ಸ್ಥಾನ ನೀಡಿರುವುದು ಕಾರ್ಯಕರ್ತರಲ್ಲೂ ಸಂತಸ ಮೂಡಿಸಿದೆ. ಅವರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

Vijaya Karnataka Web 13 Jan 2021, 4:22 pm
ಬೆಂಗಳೂರು: ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿನ್ನೆಲೆಯನ್ನು ಹೊಂದಿರುವ ದಲಿತ ಸಮುದಾಯದ ಎಸ್‌. ಅಂಗಾರ ಅವರು ಬಿಎಸ್‌ ಯಡಿಯೂರಪ್ಪ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸತತ ಆರು ಬಾರಿ ಶಾಸಕರಾಗಿರುವ ಹೆಗ್ಗಳಿಕೆ ಇವರದ್ದು. ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ನಡೆಸದ ಎಸ್‌. ಅಂಗಾರ ಅವರಿಗೆ ಹೈಕಮಾಂಡ್ ಸೂಚನೆಯಂತೆ ಮಂತ್ರಿ ಸ್ಥಾನ ನೀಡಲಾಗಿದೆ. ಅಂಗಾರ ಅವರ ರಾಜಕೀಯ ಹಿನ್ನೆಲೆ ಹಾಗೂ ಇತರ ವಿವರ ಇಲ್ಲಿದೆ.
Vijaya Karnataka Web s angara


ಹೆಸರು: ಎಸ್‌. ಅಂಗಾರ

ವಯಸ್ಸು: 61

ಕ್ಷೇತ್ರ: ಸುಳ್ಳ

ಜಾತಿ:ದಲಿತ

ಜಿಲ್ಲೆ: ದಕ್ಷಿಣ ಕನ್ನಡ

ರಾಜಕೀಯ ಹಿನ್ನೆಲೆ

ಎಸ್‌ ಅಂಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು. 1989 ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ನಡೆಸಿದರು. ಆದರೆ ಈ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ ಅವರು 1994 ರಲ್ಲಿ ಮತ್ತೆ ಸುಳ್ಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದರು. ಅಲ್ಲಿಂತ ಸೋಲಿಲ್ಲದ ಸರದಾರ ಎಂಬಂತ್ತೆ ಸತತವಾಗಿ ಆರು ಬಾರಿ ಅಂಗಾರ ಸುಳ್ಳ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಗೊಂಡು ಬಂದಿದ್ದಾರೆ.

ಎಸ್‌. ಅಂಗಾರ ಆರ್‌ಎಸ್‌ಎಸ್‌ ಕಾರ್ಯಕರ್ತ

ಎಸ್‌. ಅಂಗಾರ ರಾಷ್ಟ್ರೀಯ ಸ್ವಯಂ ಸ್ವೇವಾ ಸಂಘದ ಹಿನ್ನೆಲೆಯಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ದಲಿತ ಸಮುದಾಯದಿಂದ ಬಂದಿರುವ ಎಸ್‌ ಅಂಗಾರ ಸುಳ್ಳ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸಂಘದ ಸೂಚನೆಯಂತೆ ಕಣಕ್ಕಿಳಿದವರು. ಬಿಜೆಪಿ ಹಾಗೂ ಸಂಘಪರಿವಾರದ ಪ್ರಬಲ ಹಿಡಿತ ಹೊಂದಿರುವ ಸುಳ್ಳದಲ್ಲಿ ಎಸ್‌ ಅಂಗಾರ ಅವರನ್ನು ಜನರು ಸತತವಾಗಿ ಗೆಲ್ಲಿಸಿದ್ದಾರೆ. ಸೌಮ್ಯ ಸ್ವಭಾವದ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಗೂ ಎಸ್‌ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಿದೆ.

ಸೌಮ್ಯ ಸ್ವಭಾವದ ವ್ಯಕ್ತಿತ್ವ

ಎಸ್‌ ಅಂಗಾರ ಅವರದ್ದು ಸೌಮ್ಯ ಸ್ವಭಾವದ ವ್ಯಕ್ತಿತ್ವ. ಈ ಕಾರಣಕ್ಕಾಗಿಯೇ ಅವರು ಪ್ರಸಿದ್ದಿಯನ್ನು ಪಡೆದವರು. ಸಚಿವ ಸ್ಥಾನ ಇರಬಹುದು ಅಥವಾ ಇನ್ನಿತರ ವಿಚಾರ ಇರಬಹುದು ಪಕ್ಷದ ಚೌಕಟ್ಟನ್ನು ಮೀರಿ ನಡೆದವರಲ್ಲ ಎಂಬ ಅಭಿಪ್ರಾಯ ಇವರ ಬಗ್ಗೆ ಪಕ್ಷದ ಮುಖಂಡರಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ