ಆ್ಯಪ್ನಗರ

ಯಾರ ಪ್ರತಿಮೆ ಎಂದು ವಿಚಾರಿಸಿದ್ದು ಸರ್‌ಎಂವಿಯದ್ದಲ್ಲ: ಸಚಿವ ಶಂಕರ್‌ ಗೊಂದಲದ ಸಮರ್ಥನೆ

ಬೇರೊಂದು ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೊರಡು ವೇಳೆ ಅದು ಯಾರ ಪ್ರತಿಮೆ ಎಂದು ಅಧಿಕಾರಿಗಳನ್ನು ವಿಚಾರಿಸಿದ್ದೇನೆಯೇ ಹೊರತು ಸರ್‌ಎಂವಿ ಬಗ್ಗೆ ಕೇಳಿಲ್ಲ,''ಎಂದು ಅರಣ್ಯ ಸಚಿವ ಆರ್‌.ಶಂಕರ್‌ ಹೇಳಿದ್ದಾರೆ.

Vijaya Karnataka 2 Oct 2018, 8:27 am
ಬೆಂಗಳೂರು: ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬೇರೊಂದು ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೊರಡು ವೇಳೆ ಅದು ಯಾರ ಪ್ರತಿಮೆ ಎಂದು ಅಧಿಕಾರಿಗಳನ್ನು ವಿಚಾರಿಸಿದ್ದೇನೆಯೇ ಹೊರತು ಸರ್‌ಎಂವಿ ಬಗ್ಗೆ ಕೇಳಿಲ್ಲ,''ಎಂದು ಅರಣ್ಯ ಸಚಿವ ಆರ್‌.ಶಂಕರ್‌ ಹೇಳಿದ್ದಾರೆ.
Vijaya Karnataka Web 66012709


''ನಾನು ಅಧಿಕಾರಿಗಳ ಬಳಿ ಕೇಳಿದ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳು ತಪ್ಪು ಗ್ರಹಿಸಿಕೊಂಡಿದ್ದಾರೆ. ವಿಶ್ವೇಶ್ವರಯ್ಯ ಬಗ್ಗೆ ಸಚಿವರಿಗೆ ಮಾಹಿತಿ ಇಲ್ಲ ಎಂಬ ತಪ್ಪು ವರದಿ ಮಾಡಿದ್ದಾರೆæ'' ಎಂದು ಸಮರ್ಥನೆ ಮಾಡಿಕೊಂಡರು.

ಎಂಜಿನಿಯರ್‌ಗಳ ದಿನಾಚರಣೆ ಅಂಗವಾಗಿ ಕಳೆದ ಶುಕ್ರವಾರ ಸರ್‌.ಎಂ.ವಿಶ್ವೇಶ್ವರಯ್ಯ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ಸರ್‌.ಎಂ.ವಿ.ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ 'ಇದು ಯಾರ ಪ್ರತಿಮೆ' ಎಂದು ಸಚಿವರು ಕೇಳಿದ್ದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಆದರೆ, ಮತ್ತೊಂದು ಪ್ರತಿಮೆ ಯಾವುದು ಮತ್ತು ಎಲ್ಲಿ ಎಂಬ ಬಗ್ಗೆ ಸಚಿವರು ವಿವರಣೆ ಮತ್ತು ಸಮರ್ಪಕ ಮಾಹಿತಿ ನೀಡಲಿಲ್ಲ.

''ವಿಶ್ವೇಶ್ವರಯ್ಯ ಬಗ್ಗೆ ಮಾಹಿತಿ ಇದೆ. ಮೈಸೂರು ಮಹಾರಾಜರು ಪ್ರಾಮುಖ್ಯತೆ ನೀಡಿದ್ದರಿಂದಲೇ ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿ ಸಾದನೆ ಮಾಡಿದ್ದಾರೆ. ಚುನಾವಣಾ ಪ್ರಚಾರ ಸಭೆಗಳಲ್ಲೂ ವಿಶ್ವೇಶ್ವರಯ್ಯ ವ್ಯಕ್ತಿತ್ವವನ್ನು ಪ್ರಸ್ತಾಪ ಮಾಡುತ್ತಿದ್ದೆ. ಸೆ.15ರಂದು ಜನಿಸಿದ್ದ ಕಾರಣಕ್ಕೆ ಪುತ್ರನಿಗೆ ಎಂಜಿನಿಯರಿಂಗ್‌ ಓದಿಸಿದ್ದೇನೆ'' ಎಂದು ಸಮಜಾಯಿಷಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ