ಆ್ಯಪ್ನಗರ

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೆ ಸುಧಾಕರ್ ಹೋಗಬಾರದು: ರಾಮಲಿಂಗಾರೆಡ್ಡಿ

ಪ್ರಧಾನಿ ಮೋದಿ ಅವರು ಕಳೆದ ಬಾರಿ ಚುನಾವಣೆ ಪ್ರಚಾರದಲ್ಲಿ ಎಸ್ ಬಿಎಂ ಬಗ್ಗೆ ಮಾತನಾಡಿದ್ದರು. ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈಗ ಅವರೇ ಪ್ರಧಾನಿ ಮೋದಿ ಭಾಗವಹಿಸುವ ವೇದಿಕೆಯಲ್ಲಿರುತ್ತಾರೆ.

Vijaya Karnataka Web 20 Jun 2022, 10:43 am
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಏರಿಕೆ ಆಗುತ್ತಿದೆ ಎಂದು ಹೇಳುತ್ತಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಜೂನ್ 20 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆಗ್ರಹಿಸಿದರು.
Vijaya Karnataka Web ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ


ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಹೆಚ್ಚಳ ಆದರೆ ಅವರೇ ಕಾರಣ ಎಂದಿದ್ದ ಸುಧಾಕರ್ ಅವರಿಗೆ ಈ ರೀತಿ ತಿರುಗೇಟು ನೀಡಿದರು.

ಸೈನಿಕರ ಪಿಂಚಣಿ‌ ಹೊರೆ ತಪ್ಪಿಸಿಕೊಳ್ಳಲು ಕೇಂದ್ರ ಅಗ್ನಿಪಥ್ ಯೋಜನೆ ಜಾರಿಗೆ: ದಿನೇಶ್ ಗುಂಡೂರಾವ್ ಆರೋಪ

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟ ಅವರು, ಭಾನುವಾರ ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿತ್ತಿದ್ದಾರೆ. ಆದರೆ ಈ ಯೋಜನೆ ನಮ್ಮ ಸರಕಾರಕ್ಕೆ ಹೊರೆ ಆಗಲಿದೆ. ಭೂಸ್ವಾದೀನ ಪ್ರಕ್ರಿಯೆ ನಾವೇ ಮಾಡಬೇಕು. ಅದಕ್ಕೆ ಕೇಂದ್ರ ಅನುದಾನ ಕೊಡುವುದಿಲ್ಲ. ಕಳೆದ ಬಾರಿ ಸಬ್ ಅರ್ಬನ್ ಯೋಜನೆಗೆ ಒಂದು ಕೋಟಿ ಕೊಟ್ಟಿದ್ದರು. ಈ‌ ನಿಟ್ಟಿನಲ್ಲಿ ಈ ಯೋಜನೆ ಅನುದಾನದ ವಿಚಾರದಲ್ಲಿ ನಮ್ಮ ಸರಕಾರಕ್ಕೆ ದೊಡ್ಡ ಹೊರೆಯಾಗಲಿದೆ.ಈ ಯೋಜನೆ ಶಂಕುಸ್ಥಾಪನೆ ಕೇವಲ ಚುನಾವಣೆ ಸಲುವಾಗಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಕಳೆದ ಬಾರಿ ಚುನಾವಣೆ ಪ್ರಚಾರದಲ್ಲಿ ಎಸ್ ಬಿಎಂ ಬಗ್ಗೆ ಮಾತನಾಡಿದ್ದರು. ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈಗ ಅವರೇ ಪ್ರಧಾನಿ ಮೋದಿ ಭಾಗವಹಿಸುವ ವೇದಿಕೆಯಲ್ಲಿರುತ್ತಾರೆ. ಈ ಬಗ್ಗೆ ‌ಮೋದಿ ಅವರೇ ಹೇಳಬೇಕು ಎಂದರು.

ಅಗ್ನಿಪಥ್ ಯೋಜನೆಗೆ ಡಾ.ಎಲ್.ಹನುಮಂತಯ್ಯ ವಿರೋಧ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, "ಅಗ್ನಿಪಥ್"ಯೋಜನೆ ಘೋಷಣೆ ಮಾಡಿದ್ದಾರೆ.ಪಿಂಚಣಿ ಮತ್ತು ಗ್ರಾಚ್ಯುಟಿ ಇಲ್ಲದ ಯೋಜನೆ ಸ್ವಾತಂತ್ರ್ಯ ಭಾರತದಲ್ಲಿ ಮೊದಲ ಯೋಜನೆ ಇದಾಗಿದೆ. ಕಳೆದ 8 ವರ್ಷಗಳಲ್ಲಿ ಡಾಟಾವನ್ನು ಉದ್ದೇಶ ಪೂರ್ವಕವಾಗಿ ಮರೆ ಮಾಚಲಾಗುತ್ತಿದೆ ಎಂದು ಆರೋಪಿಸಿದರು.

ನಾಲ್ಕು ವರ್ಷಕ್ಕೆ ಮಾತ್ರ ಯುವಕರನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ಹೇಳುವ ಮೂಲಕ ಮತ್ತೆ ನಿರುದ್ಯೋಗಿಗಳಾಗಿ ಮಾಡುವ ಯೋಜನೆ ಇದಾಗಿದೆ. ನಾಲ್ಕು ವರ್ಷಗಳ ನಂತರ ಸೇವಾ ನಿಧಿ ಪ್ಯಾಕೇಜ್ ಅಡಿ ನೀಡಲಾಗುತ್ತದೆ. ಶೇ 25% ಯುವಕರಿಗೆ ಮಾತ್ರ ಉದ್ಯೋಗ ಖಾತರಿ ನೀಡಲಾಗುತ್ತದೆ ಎಂಬ ಸಂದೇಶ ನೀಡಿದೆ ಎಂದು ಆರೋಪಿಸಿದರು.

ಅಗ್ನಿಪಥ್: ರೈತರನ್ನು ಬಲಿಕೊಟ್ಟಾಯಿತು, ಈಗ ಸೈನಿಕರ ಸರದಿಯೇ? ಸಿದ್ಧರಾಮಯ್ಯ ಪ್ರಶ್ನೆ

ನಾಲ್ಕು ವರ್ಷ ಕೆಲಸ ಪೂರೈಸಿದ ಯುವಕರಿಗೆ ಸ್ಕಿಲ್ ಸರ್ಟಿಫಿಕೇಟ್ ಕೊಟ್ಟು ಅವರಿಗೆ ಬ್ಯಾಂಕ್ ಮೂಲಕ ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ