ಆ್ಯಪ್ನಗರ

ವೋಟರ್‌ ಐಡಿ ಪತ್ತೆ ಪ್ರಕರಣ; ಮುನಿರತ್ನ ವಿರುದ್ಧ ಸಿಬಿಐ ತನಿಖೆ ಕೋರಿ ರಾಕೇಶ್‌ ಸಲ್ಲಿಸಿದ್ದ ಅರ್ಜಿ ವಾಪಸ್‌

ಕಳೆದ ವಿಧಾನಸಭೆ ಚುನಾವಣಾ ವೇಳೆ ರಾಜರಾಜೇಶ್ವರಿ ನಗರದ ಫ್ಲಾಟ್‌ವೊಂದರಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೂರುದಾರ ರಾಕೇಶ್‌ ಹಿಂಪಡೆದಿದ್ದಾರೆ.

Vijaya Karnataka 15 Aug 2019, 7:12 pm
ಬೆಂಗಳೂರು : ಕಳೆದ ವಿಧಾನಸಭೆ ಚುನಾವಣಾ ವೇಳೆ ರಾಜರಾಜೇಶ್ವರಿ ನಗರದ ಫ್ಲಾಟ್‌ವೊಂದರಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೂರುದಾರ ರಾಕೇಶ್‌ ಹಿಂಪಡೆದಿದ್ದಾರೆ.
Vijaya Karnataka Web ಮುನಿರತ್ನ
ಮುನಿರತ್ನ


ಆಶ್ಚರ್ಯಕರ ಬೆಳವಣಿಗೆಯಲ್ಲಿ ರಾಕೇಶ್‌ ಬುಧವಾರ ಮೆಮೋ ಸಲ್ಲಿಸಿ ಅರ್ಜಿ ಹಿಂಪಡೆದರು.

ನ್ಯಾ. ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತು. ಆಗ ಅರ್ಜಿದಾರರ ಪರ ವಕೀಲ, ತಮ್ಮ ಕಕ್ಷಿದಾರರು ಅರ್ಜಿ ಹಿಂಪಡೆಯಲಿದ್ದಾರೆ ಎಂದು ಮೆಮೊ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಾಪಸ್‌ ಪಡೆಯಲು ಸಮ್ಮತಿ ಸೂಚಿಸಿತು.

ಇತ್ತೀಚೆಗೆ ಕಾಂಗ್ರೆಸ್‌ ಬಿಟ್ಟು, ಬಿಜೆಪಿ ಜೊತೆ ಗುರುಧಿತಿಸಿಕೊಂಡಿರುವ ಅನರ್ಹ ಶಾಸಕ ಮುನಿರತ್ನ, ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಅವರು ಮೂಲ ದೂರುದಾರ ರಾಕೇಶ್‌ ಮನವೊಲಿಸಿ ಅರ್ಜಿ ವಾಪಸ್‌ ಪಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರ ಅರ್ಜಿ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ಅವರ ಮುಂದೆ ವಿಚಾರಣೆ ನಡೆದಿತ್ತು. ವಿಚಾರಣೆ ಇನ್ನೇನು ಮುಕ್ತಾಯ ಹಂತದಲ್ಲಿತ್ತು. ಈ ಹಂತದಲ್ಲಿ ಅರ್ಜಿ ವಾಪಸ್‌ ಪಡೆದಿರುವುದು ಕುತೂಹಲ ಮೂಡಿಸಿದೆ.

2018ರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಸುಮಾರು 10 ಸಾವಿರ ನಕಲಿ ಮತದಾರರ ಐಡಿಗಳು ಪತ್ತೆಯಾಗಿದ್ದವು. ಆಗ ಬಿಜೆಪಿ ಕಾರ‍್ಯಕರ್ತ ರಾಕೇಶ್‌ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಚುನಾವಣಾ ಆಯೋಗ ಕೂಡ ದೂರು ದಾಖಲಿಸಿ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ ಮುನಿರತ್ನ ಸೇರಿದಂತೆ 34 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ