ಆ್ಯಪ್ನಗರ

ಡಾ.ಸುಧಾಕರ್‌ ಮೇಲೆ ಹಲ್ಲೆ ಕೇಸ್‌: ನಿಷ್ಪಕ್ಷಪಾತ ತನಿಖೆಗೆ ಸೂಚಿಸಿ ಅರ್ಜಿ ಇತ್ಯರ್ಥ

ಚಿಕ್ಕಬಳ್ಳಾಪುರ ಶಾಸಕ, ಹಾಲಿ ಅನರ್ಹಗೊಂಡಿರುವ ಡಾಕೆಸುಧಾಕರ್‌ ಮೇಲೆ ಜು...

Vijaya Karnataka 29 Aug 2019, 5:00 am
ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ, ಹಾಲಿ ಅನರ್ಹಗೊಂಡಿರುವ ಡಾ.ಕೆ.ಸುಧಾಕರ್‌ ಮೇಲೆ ಜು.10ರಂದು ವಿಧಾನಸೌಧದಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸರಕಾರ ಹೇಳಿರುವ ಹಿನ್ನೆಲೆಯಲ್ಲಿ ಆ ಕುರಿತ ಪಿಐಎಲ್‌ ಅನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ.
Vijaya Karnataka Web mla sudhakar asalt cases
ಡಾ.ಸುಧಾಕರ್‌ ಮೇಲೆ ಹಲ್ಲೆ ಕೇಸ್‌: ನಿಷ್ಪಕ್ಷಪಾತ ತನಿಖೆಗೆ ಸೂಚಿಸಿ ಅರ್ಜಿ ಇತ್ಯರ್ಥ


ವಕೀಲ ಎನ್‌.ಪಿ.ಅಮೃತೇಶ್‌ ಸಲ್ಲಿಸಿದ್ದ ಅರ್ಜಿ ಸಿಜೆ ಎ.ಎಸ್‌. ಓಕ್‌ ಮತ್ತು ನ್ಯಾ.ಪಿ.ಎಂ. ನವಾಜ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.

ಸರಕಾರಿ ವಕೀಲರಾದ ಎಸ್‌.ಎಸ್‌. ಮಹೇಂದ್ರ, 'ಧಿ'ಆ.10ರಂದೇ ವಿಧಾನಸೌಧ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 154ರಡಿ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ'ಧಿ' ಎಂದು ಎಫ್‌ಐಆರ್‌ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅದನ್ನು ದಾಖಲಿಸಿಕೊಂಡ ಪೀಠ, 'ಧಿ'ಅರ್ಜಿದಾರರು ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಬೇಕೆಂದು ಕೋರಿದ್ದರು. ಆದರೆ, ಈಗಾಗಲೇ ಎಫ್‌ಐಆರ್‌ ದಾಧಿಖಧಿಲಾಧಿಗಿಧಿರುಧಿವುಧಿದಧಿರಿಂದ ಅರ್ಜಿ ಊರ್ಜಿತವಾಗುವುದಿಲ್ಲ. ಅಲ್ಲದೆ, ತನಿಖಾಧಿಕಾರಿ ನಿಗದಿತ ಕಾಲಮಿತಿಯಲ್ಲಿ ನಿಷ್ಪ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ತನಿಖೆ ನಡೆಸಬೇಕು,'' ಎಂದು ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.

ಏಕಸದಸ್ಯಪೀಠ ಅರ್ಜಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವರ್ಗಾಯಿಸಿತ್ತು. ''ಇದು ಗಂಭೀರ ವಿಚಾರ. ಜನರನ್ನು ರಕ್ಷಿಸಬೇಕಾದ ಶಾಸಕರ ಮೇಲೆ ಹಲ್ಲೆ ನಡೆದಿದೆ. ಸುಧಾಕರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪೀಕರ್‌ ಕಚೇರಿಗೆ ತೆರಳುತ್ತಿದ್ದ ವೇಳೆ ಕೆಲ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಆ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸುತ್ತಿಲ್ಲ. ಆ ಬಗ್ಗೆ ಸೂಕ್ತ ಆದೇಶ ನೀಡಬೇಕು,''ಧಿ ಎಂದು ಅರ್ಜಿದಾರರು ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ