ಆ್ಯಪ್ನಗರ

ಕೆಡಿಪಿ ಸಭೆಗೆ ಎಲ್ಲಾ ಶಾಸಕರೂ ಗೈರು: ಉಸ್ತುವಾರಿ ಸಚಿವರಿಗೆ ಮುಖಭಂಗ

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ್‌ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮೊದಲ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಶಾಸಕರು ಗೈರಾಗುವ ಮೂಲಕ ಹೊಸ ಜಿಲ್ಲೆಯಲ್ಲಿ ದೋಸ್ತಿ ಸರಕಾರದಲ್ಲಿರುವ ಆಂತರಿಕ ಬೇಗುದಿ ಬಯಲಾಗಿದೆ.

Vijaya Karnataka 10 Aug 2018, 7:53 am
ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ್‌ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮೊದಲ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಶಾಸಕರು ಗೈರಾಗುವ ಮೂಲಕ ಹೊಸ ಜಿಲ್ಲೆಯಲ್ಲಿ ದೋಸ್ತಿ ಸರಕಾರದಲ್ಲಿರುವ ಆಂತರಿಕ ಬೇಗುದಿ ಬಯಲಾಗಿದೆ.
Vijaya Karnataka Web Shiva


ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಈ ಹಿಂದೆ ಅನೇಕ ಭಾರಿ ಬಹಿರಂಗವಾಗಿಯೇ ಹೇಳಿದ್ದರು. ಆದರೆ, ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಜಿಲ್ಲಾಡಳಿತದ ಜಯಂತಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದನ್ನು ಹೊರತುಪಡಿಸಿ, ಇನ್ನೆಲ್ಲ ಕಾರ‍್ಯಕ್ರಮಗಳಲ್ಲಿ ಇಬ್ಬರೂ ವೇದಿಕೆ ಹಂಚಿಕೊಂಡಿರಲಿಲ್ಲ. ಹೀಗಾಗಿ ಮಂಗಳವಾರ ಮಧ್ಯಾಹ್ನ ಏಕಾಏಕಿ ತಾಲೂಕು ಮಟ್ಟದ ಸಭೆ ನಡೆಸಿದ ಶಾಸಕ ಡಾ.ಕೆ.ಸುಧಾಕರ್‌ ಗುರುವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಗೈರಾಗುವ ಮುನ್ಸೂಚನೆ ನೀಡಿದ್ದರು.

ಇನ್ನು ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಬುಧವಾರ ನಡೆಯಬೇಕಿದ್ದ ಕೃಷಿ ಅಭಿಯಾನ ಕಾರ‍್ಯಕ್ರಮವನ್ನು ಕರುಣಾನಿಧಿ ಅವರ ನಿಧನದಿಂದಾಗಿ ಮುಂದೂಡಿದ್ದರು. ಬಳಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಗುರುವಾರವೂ ಕೃಷಿ ಅಭಿಯಾನವನ್ನು ಮುಂದೂಡಿದ್ದರು. ಆದರೆ, ಸಭೆಯಲ್ಲಿ ಮಾತ್ರ ಅವರ ದರ್ಶನವಾಗಲೇ ಇಲ್ಲ. ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ, ಚಿಂತಾಮಣಿ ಕ್ಷೇತ್ರದ ಶಾಸಕರು ಆದ ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಸಹ ಸಭೆಗೆ ಗೈರಾಗುವ ಮೂಲಕ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆಯೇ ಚರ್ಚೆಗಳು ನಡೆಯುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ