ಆ್ಯಪ್ನಗರ

ಅಂಧರಿಗೆ ನೋಟು ಗುರುತಿಸುವ ಸಹಾಯಕ ಆ್ಯಪ್‌ 'ಮಣಿ'ಯಲ್ಲಿ ಕನ್ನಡವಿಲ್ಲ ಏಕೆ?

ರಿಸರ್ವ್‌ ಬ್ಯಾಂಕ್‌ 2016 ನವೆಂಬರ್‌ ನಂತರ ಬಿಡುಗಡೆ ಮಾಡಿದ 10, 20, 50, 100, 500, ಮತ್ತು 2,000 ರೂ.ಗಳ ನೋಟುಗಳನ್ನು ಗುರುತಿಸಲು ಸಹಾಯವಾಗಬಲ್ಲ ಅಪ್ಲಿಕೇಶನ್‌ ಮಣಿಯಲ್ಲಿ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳು ಲಭ್ಯವಿರದಿರುವಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

Vijaya Karnataka Web 22 Jan 2020, 3:29 pm
ಬೆಂಗಳೂರು: ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಮಣಿ(MANI) ಅಪ್ಲಿಕೇಶನ್‌ನಲ್ಲಿ ಕನ್ನಡ ಭಾಷೆ ಇಲ್ಲದಿರುವ ವಿಚಾರವಾಗಿ ಸಾಮಾಜಿಕ ತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ದೃಷ್ಟಿದೋಷ ಹೊಂದಿರುವವರಿಗೆ ಬ್ಯಾಂಕ್‌ ನೋಟುಗಳನ್ನು ಗುರುತಿಸಲು ಸಹಾಯವಾಗಬಲ್ಲ ಮಣಿ ಆ್ಯಪ್‌ನಲ್ಲಿ ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಿವೆ. ಹಾಗಿದ್ದರೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಇತರ ಭಾಷೆಗಳಲ್ಲಿ ಏಕೆ ಇಲ್ಲ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.
Vijaya Karnataka Web MANI


ಕನ್ನಡ, ತಮಿಳು ಮತ್ತಿತರ ಭಾಷೆಗಳನ್ನು ಮಾತನಾಡುವವರು ಏನು ಮಾಡಬೇಕು? ಅವರೆಲ್ಲ ಭಾರತೀಯರಲ್ಲವೇ? ಈ ಆ್ಯಪ್‌ ಕನ್ನಡದಲ್ಲಿ ಏಕೆ ಇಲ್ಲ ಎಂದು ಕನ್ನಡ ಪರ ಹೋರಾಟಗಾರರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. 2016 ನವೆಂಬರ್‌ನಲ್ಲಿ ರೂ. 10, ರೂ. 20, ರೂ.50, ರೂ. 100, ರೂ. 200, ರೂ.500 ಮತ್ತು ರೂ. 2000 ನೋಟುಗಳನ್ನು ಗುರುತಿಸಲು ದೃಷ್ಟಿದೋಷ ಹೊಂದಿರುವವರಿಗೆ ಮಣಿ ಆ್ಯಪ್‌ ಸಹಾಯವಾಗಿದೆ.

ಮಣಿ ಆ್ಯಪ್‌ ಇನ್ಸ್‌ಟಾಲ್‌ ಮಾಡಿಕೊಂಡ ನಂತರ ಬ್ಯಾಂಕ್‌ ನೋಟುಗಳನ್ನು ಮೊಬೈಲ್‌ನ ಫ್ರಂಟ್‌ ಕ್ಯಾಮೆರಾದಿಂದ ಸೆರೆ ಹಿಡಿದರೆ ಎಷ್ಟು ರೂಪಾಯಿಯ ನೋಟು ಎಂಬುದನ್ನು ಆಡಿಯೋ ಮೂಲಕ ನಿಖರವಾಗಿ ಹೇಳುತ್ತದೆ.


MANI: ಅಂಧರಿಗೆ ನೋಟು ಗುರುತಿಸಲು ಆರ್‌ಬಿಐ ಆ್ಯಪ್‌ (ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ