ಆ್ಯಪ್ನಗರ

ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ; ಅಧಿಕಾರ ಹಸ್ತಾಂತರಕ್ಕೂ ಮುನ್ನ ಕಚೇರಿ ಪೂಜೆ ಮಾಡಿದ ನಲಪಾಡ್!

ದೇವರಿಗೆ ಕೃತಜ್ಞತೆ ಹೇಳುತ್ತೇನೆ. ನನಗೆ ತುಂಬಾ ಸಂತೋಷ ಆಗ್ತಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಮಾಡಬೇಕು. ಆಗ ಇನ್ನಷ್ಟು ಸಂತೋಷ ಆಗುತ್ತದೆ. ಯಾವುದೇ ರಾಜಕೀಯ ಮಾಡಬಾರದು. ಎಲ್ಲರ‌ನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಯುವಕರನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಪಕ್ಷಕ್ಕೆ ಒಳ್ಳೆಯ ಕೆಲಸವನ್ನ ನಲಪಾಡ್ ಮಾಡುತ್ತಾರೆ ಎಂದು ಶಾಸಕ ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದರು.

Written byಇರ್ಷಾದ್ ಉಪ್ಪಿನಂಗಡಿ | Vijaya Karnataka Web 31 Jan 2022, 2:03 pm
ಬೆಂಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಕ್ಕೂ ಮುನ್ನವೇ ಮುಹಮ್ಮದ್ ನಲಪಾಡ್ ಸೋಮವಾರ ಕಾಂಗ್ರೆಸ್ ಭವನದಲ್ಲಿ ಕಚೇರಿ ಪೂಜೆ ನೆರವೇರಿಸಿದ್ದಾರೆ.
Vijaya Karnataka Web mohammed nalapad performed kpcc office worship before the transfer of youth congress power
ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ; ಅಧಿಕಾರ ಹಸ್ತಾಂತರಕ್ಕೂ ಮುನ್ನ ಕಚೇರಿ ಪೂಜೆ ಮಾಡಿದ ನಲಪಾಡ್!


ಪೂಜೆ ಬಳಿಕ ಮಾತನಾಡಿದ ನಲಪಾಡ್ , ಮಂಗಳವಾರ ಅಮಾವಾಸ್ಯೆ ಇದೆ. ಹಾಗಾಗಿ ಇಂದೇ ಕಚೇರಿ ಪೂಜೆ ಮಾಡಿದ್ದೇವೆ. ಫೆಬ್ರವರಿ 10 ರಂದು ಅಧಿಕೃತವಾಗಿ ಅಧಿಕಾರ ಹಸ್ತಾಂತರವಿದೆ. ಕೆಪಿಸಿಸಿ ಕಚೇರಿಯಲ್ಲೇ ಮಾಡಿಕೊಳ್ತೇನೆ ಎಂದರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತಾಗಿ ಎಐಸಿಸಿಯಿಂದಲೂ ಅಧಿಕೃತ ಆದೇಶವಿದೆ. ರಕ್ಷಾ ರಾಮಯ್ಯ ಅನುಮತಿ ಮೇಲೆಯೇ ಪೂಜೆ ಮಾಡಿದ್ದೇನೆ. ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತೇನೆ ಎಂದು ತಿಳಿಸಿದರು.

ನಲಪಾಡ್ ಕಚೇರಿ ಪೂಜೆಯ ಬಳಿಕ ಶಾಸಕ ಎನ್.‌ಎ ಹ್ಯಾರಿಸ್ ಮಾತನಾಡಿ, ದೇವರಿಗೆ ಕೃತಜ್ಞತೆ ಹೇಳುತ್ತೇನೆ. ನನಗೆ ತುಂಬಾ ಸಂತೋಷ ಆಗ್ತಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಮಾಡಬೇಕು. ಆಗ ಇನ್ನಷ್ಟು ಸಂತೋಷ ಆಗುತ್ತದೆ. ಯಾವುದೇ ರಾಜಕೀಯ ಮಾಡಬಾರದು. ಎಲ್ಲರ‌ನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಯುವಕರನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಪಕ್ಷಕ್ಕೆ ಒಳ್ಳೆಯ ಕೆಲಸವನ್ನ ನಲಪಾಡ್ ಮಾಡುತ್ತಾರೆ ಎಂದು ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದರು.
ಅಹಿಂದ Vs ‘ಅಲಿಂಗ’; ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಸಿಎಂ ಇಬ್ರಾಹಿಂ ಸೂಪರ್ ಪ್ಲ್ಯಾನಿಂಗ್!
ಇದೇ ಸಂದರ್ಭದಲ್ಲಿ ಸಿಎಂ ಇಬ್ರಾಹಿಂ ರಾಜೀನಾಮೆ ವಿಚಾರವಾಗಿ, ನಾನು ಒಂದು ಜಾತಿ, ಸಮುದಾಯಕ್ಕೆ ಕೆಲಸ ಮಾಡಿಲ್ಲ. ಎಲ್ಲಾ ವರ್ಗಕ್ಕೂ ನಾನು ಕೆಲಸ ಮಾಡಿದ್ದೇನೆ. ಸ್ಥಾನಮಾನ ಬೇಕೆಂದು ಕೆಲಸ ಮಾಡಬಾರದು. ಅರ್ಹತೆ ಇದ್ದರೆ ಹೈಕಮಾಂಡ್ ಸ್ಥಾನಮಾನ ಕೊಡುತ್ತದೆ. ಇಬ್ರಾಹಿಂ ಕೇಳೋದ್ರಲ್ಲಿ ತಪ್ಪಿಲ್ಲ. ಆದ್ರೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು. ಅಲ್ಪಸಂಖ್ಯಾತರರಿಗೆ ಕಾಂಗ್ರೆಸ್ ಎಲ್ಲಾ ಕೊಟ್ಟಿದೆ. ಕೆಲವು ಬಾರಿ ಸ್ಥಾನಮಾನ ಸಿಗದೇ ಹೋಗಿರಬಹುದು. ಹಾಗಾಂತ ಪಕ್ಷದ ವಿರುದ್ಧ ಮಾತನಾಡಬಾರದು. ಇಬ್ರಾಹಿಂ ಸಿನಿಯರ್, ಅವ್ರು ನಮ್ಮ ನಾಯಕರು. ಆದ್ರೆ ಹೈಕಮಾಂಡ್ ನಿರ್ಧಾರಕ್ಕೆ ಅವ್ರು ಬದ್ದವಾಗಿರಬೇಕು ಎಂದು ಸಲಹೆ ನೀಡಿದರು.

ಇನ್ನು ನಮ್ಮ ‌ಪಕ್ಷ ನಮ್ಮನ್ನ ಗೌರವಯುತವಾಗಿ ನಡೆಸಿಕೊಂಡಿದೆ ಎಂದ ಹ್ಯಾರೀಸ್, ಬಿಜೆಪಿ ನಮಗೆ ಟಿಕೆಟ್ ‌ಕೊಡಲ್ಲ ಅಂತ ಹೇಳುತ್ತೆ, ನಾವು ಅವರಲ್ಲಿ ಕೇಳೋಕೆ ಆಗುತ್ತಾ? ಎಂದು ಪ್ರಶ್ನಿಸಿದರು. ಮನುಷ್ಯನ ಆಸೆಗೆ ಕೊನೆ ಇಲ್ಲ. ಆದ್ರೆ ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು. ಪಕ್ಷ ಬಿಡಬಾರದು.ಅವರು ಪಕ್ಷ ಬಿಡಲ್ಲವೆಂದು ನಾನು ಅಂದುಕೊಂಡಿದ್ದೇನೆ ಎಂದರು. ನಲಪಾಡ್‌ಗೆ ವಿಧಾನಸಭೆ, ಲೋಕಸಭೆಗೆ ಟಿಕೆಟ್ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ನಲಪಾಡ್ ಪಕ್ಷದ ನಿರ್ಧಾರಕ್ಕೆ ಯಾವತ್ತೂ ವಿರೋಧವಾಗಿ ನಡೆಯಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡಬೇಕು ಅಂತ ತೀರ್ಮಾನ ಮಾಡುತ್ತೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಖರ್ಗೆ ಸೇರಿ ಹಿರಿಯ ನಾಯಕರು ಇದ್ದಾರೆ. ಅವರೆಲ್ಲರೂ ಕುಳಿತು ಟಿಕೆಟ್ ತೀರ್ಮಾನ ಮಾಡ್ತಾರೆ‌. ನಾವು ಪಕ್ಷದ ತೀರ್ಮಾನ ಬದ್ದವಾಗಿ ಇರುತ್ತೇವೆ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಅತ್ಯಧಿಕ ಮತಗಳನ್ನು ಚುನಾವಣೆಯಲ್ಲಿ ನಲಪಾಡ್ ಗಳಿಸಿದರೂ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ನಲಪಾಡ್ ಕ್ರಿಮಿನಲ್ ಹಿನ್ನೆಲೆ ಇದಕ್ಕೆ ಕಾರಣವಾಗಿತ್ತು. ಬಳಿಕ ನಡೆದ ಒಪ್ಪಂದದಂತೆ ಇದೀಗ ಅಧಿಕಾರ ಹಸ್ತಾಂತರ ನಡೆಯುತ್ತಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ