ಆ್ಯಪ್ನಗರ

ಮೋಹನ್‌ ನಾಯಕ್‌ ಜಾಮೀನು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಾಡಿಗೆ ಮನೆ ಕೊಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮೋಹನ್‌ ನಾಯಕ್‌ ಜಾಮೀನು ಅರ್ಜಿ ಕುರಿತಂತೆ ಹೈಕೋರ್ಟ್‌ ಗುರುವಾರ ವಿಚಾರಣೆಯನ್ನು ಪೂರ್ಣಗೊಳಿಸಿತು.

Vijaya Karnataka 25 Jan 2019, 5:00 am
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಾಡಿಗೆ ಮನೆ ಕೊಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮೋಹನ್‌ ನಾಯಕ್‌ ಜಾಮೀನು ಅರ್ಜಿ ಕುರಿತಂತೆ ಹೈಕೋರ್ಟ್‌ ಗುರುವಾರ ವಿಚಾರಣೆಯನ್ನು ಪೂರ್ಣಗೊಳಿಸಿತು.
Vijaya Karnataka Web mohan nayak bail
ಮೋಹನ್‌ ನಾಯಕ್‌ ಜಾಮೀನು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌


ದಕ್ಷಿಣ ಕನ್ನಡದ ಸಂಪಾಜೆಯ ಮೋಹನ್‌ ನಾಯಕ್‌ ಸಲ್ಲಿಸಿರುವ ಅರ್ಜಿ ಕುರಿತು ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ ಅವರಿದ್ದ ಏಕಸದಸ್ಯಪೀಠ, ತೀರ್ಪು ಕಾಯ್ದಿರಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರುಣ್‌ ಶ್ಯಾಮ್‌ ''ಅರ್ಜಿದಾರರು ಆರೋಪಿಗಳಿಗೆ ತಂಗಲು ಅವಕಾಶ ಮಾಡಿಕೊಟ್ಟಿದ್ದ ಹಾಗೂ ಸಿಮ್‌ ನೀಡಿದ್ದ ಎಂದು ಆರೋಪಿಸಲಾಗಿದೆ. ಆದರೆ ದೂರು, ಎಫ್‌ಐಆರ್‌ ಹಾಗೂ ಮೊದಲ ಆರೋಪ ಪಟ್ಟಿಯಲ್ಲಿ ಅವರ ಹೆಸರೇ ಇರಲಿಲ್ಲ. ಎರಡನೇ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ. ಅವರಿಗೂ ಈ ಕೇಸಿಗೂ ಸಂಬಂಧವಿಲ್ಲ''ಎಂದರು.

ಅಲ್ಲದೆ, ''ನಾಯಕ್‌ ವಿರುದ್ಧ ಕೋಕಾ ಹೇರಲು ನಿಯಮದಲ್ಲಿ ಅವಕಾಶವಿಲ್ಲ. ಏಕೆಂದರೆ ಕೋಕಾ ಹೇರಬೇಕಾದರೆ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಇರಬೇಕು. ಕನಿಷ್ಠ ಎರಡು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರಬೇಕು. ಆದರೆ ಇದ್ಯಾವುದೂ ಇಲ್ಲ. ಆದ್ದರಿಂದ ಜಾಮೀನು ನೀಡಬೇಕು'' ಎಂದು ಅವರು ಕೋರಿದರು.

ಪ್ರಮುಖ ಆರೋಪಿ ಅಮೋಲ್‌ ಕಾಳೆ ಸೂಚನೆಯ ಮೇರೆಗೆ ಮೋಹನ್‌, ಆಕ್ಯುಪಂಚರ್‌ ಕ್ಲಿನಿಕ್‌ ನಡೆಸುವ ಸೋಗಿನಲ್ಲಿ ಮೈಸೂರು ರಸ್ತೆಯ ಕುಂಬಳಗೋಡು ಬಳಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ. ಅದೇ ಮನೆಯಲ್ಲಿ ಗೌರಿ ಹಂತಕರ ತಂಡ ಸಭೆ ಸೇರಿ ಹತ್ಯೆ ಪಿತೂರಿ ನಡೆಸುತ್ತಿತ್ತು ಹಾಗೂ ಹತ್ಯೆಗೆ ಬಳಕೆ ಮಾಡಿದ್ದ ಬೈಕ್‌ ನಿಲುಗಡೆ ಮಾಡಲಾಗಿತ್ತು ಎಂಬ ಆರೋಪದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) 2018ರ ಜು.18ರಂದು ಮೋಹನ್‌ ನಾಯಕ್‌ನನ್ನು ಬಂಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ