ಆ್ಯಪ್ನಗರ

ರಾಜ್ಯದಲ್ಲಿ ಮುಂಗಾರು ದುರ್ಬಲ, ಕರಾವಳಿಗೆ ಮಾತ್ರ ಯೆಲ್ಲೋ ಅಲರ್ಟ್‌

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಂಡಮಾರುತ ಹಾಗೂ ಮುಂಗಾರು ಪರಿಣಾಮದಿಂದ ಈಗಾಗಲೇ ಮಳೆಯಾಗುತ್ತಿದೆ. ಉಳಿದೆಡೆ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಸುರಿಯಲಿದೆ.

Vijaya Karnataka 5 Jun 2020, 7:57 pm

ಬೆಂಗಳೂರು: ನೈಋುತ್ಯ ಮುಂಗಾರು ಕಾರವಾರ ಸೇರಿದಂತೆ ಕರಾವಳಿ ಹಾಗೂ ಹಾಸನ ಜಿಲ್ಲೆಯನ್ನು ಆವರಿಸುವ ಮೂಲಕ ರಾಜ್ಯಕ್ಕೆ ಆಗಮನವಾಗಿದೆ. ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ರಾಜ್ಯವನ್ನು ಆವರಿಸಲಿದೆ.
Vijaya Karnataka Web Rain Karnataka


ಈ ಬಾರಿ ವಾಡಿಕೆಯಂತೆಯೇ ಜೂ.1ರಂದು ಕೇರಳಕ್ಕೆ ಮುಂಗಾರು ಆಗಮಿಸಿದ್ದು, ನಂತರ ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಬಂದಿದೆ.
"ಕಾರವಾರಕ್ಕೆ ಬರುವ ಮೂಲಕ ಕರಾವಳಿಯ ಸಂಪೂರ್ಣ ಭಾಗವನ್ನು ಮುಂಗಾರು ಆವರಿಸಿದೆ. ಜತೆಗೆ ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯನ್ನೂ ಆವರಿಸಿದೆ," ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದ ಭಾಗಗಳನ್ನು ಮುಂಗಾರು ಕ್ರಮೇಣ ಆವರಿಸಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಂಡಮಾರುತ ಹಾಗೂ ಮುಂಗಾರು ಪರಿಣಾಮದಿಂದ ಈಗಾಗಲೇ ಮಳೆಯಾಗುತ್ತಿದೆ. ಉಳಿದೆಡೆ ಮುಂದಿನ ದಿನಗಳಲ್ಲಿ ಮಳೆ ಸುರಿಯಬೇಕಾಗಿದೆ.

ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬ; ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌

ಮುನ್ಸೂಚನೆಕರಾವಳಿಗೆ ಮಾತ್ರ ಜೂ.6ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಿಗೆ ಸದ್ಯಕ್ಕೆ ಭಾರಿ ಮಳೆಯ ಮುನ್ಸೂಚನೆ ಇಲ್ಲ. ಮುಂಗಾರು ಮತ್ತಷ್ಟು ಆವರಿಸಿ ಪ್ರಬಲವಾಗಲು ಕೆಲ ದಿನಗಳು ಬೇಕಿದ್ದು, ನಂತರ ಮಳೆ ಸುರಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ