ಆ್ಯಪ್ನಗರ

ಜೂ.5ರ ಮೊದಲೇ ರಾಜ್ಯಕ್ಕೆ ಮುಂಗಾರು: ಹವಾಮಾನ ಇಲಾಖೆ

ಪ್ರಸ್ತುತ ವಾತಾವರಣ ಹಾಗೂ ಮಳೆ ಮಾರುತಗಳ ಚಲನೆಯನ್ನು ಗಮನಿಸಿದರೆ ನಿಗದಿತ ದಿನಾಂಕಕ್ಕೂ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶವಾಗುವುದು ನಿಚ್ಚಳವಾಗಿದೆ.

TIMESOFINDIA.COM 26 May 2018, 3:31 pm
ಬೆಂಗಳೂರು: ಪ್ರಸ್ತುತ ವಾತಾವರಣ ಹಾಗೂ ಮಳೆ ಮಾರುತಗಳ ಚಲನೆಯನ್ನು ಗಮನಿಸಿದರೆ ನಿಗದಿತ ದಿನಾಂಕಕ್ಕೂ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶವಾಗುವುದು ನಿಚ್ಚಳವಾಗಿದೆ.
Vijaya Karnataka Web mansoon


ಮೇ 29ರ ವೇಳೆ ಕೇರಳಕ್ಕೆ ಮಾನ್ಸೂನ್‌ ಪ್ರವೇಶವಾಗಲಿದ್ದು, ಜೂ.3 ಅಥವಾ 4ರಂದು ರಾಜ್ಯಕ್ಕೆ ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ನೀಡಿದೆ. ಈ ಹಿಂದಿನ ಮಾಹಿತಿಯಲ್ಲಿ ಜೂನ್‌ ಮೊದಲ ಮೂರ್ನಾಲ್ಕು ದಿನದಲ್ಲಿ ಕೇರಳಕ್ಕೆ ಆಗಮಿಸಿ, ಜೂ.5ರ ಬಳಿಕ ರಾಜ್ಯಕ್ಕೆ ಮುಂಗಾರು ಆಗಮಿಸುವುದಾಗಿ ತಿಳಿದು ಬಂದಿತ್ತು. ಕಳೆದ ಮೂರ್ನಾಲ್ಕು ದಿನದಿಂದ ಮಾರುತಗಳ ಚಲನೆಯ ಆಧಾರದಲ್ಲಿ ನಿಗದಿತ ದಿನಕ್ಕಿಂತ ಒಂದು ಅಥವಾ 2 ದಿನಗಳ ಮೊದಲೇ ಮಾನ್ಸೂನ್‌ ರಾಜ್ಯಕ್ಕೆ ಬರಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಧಿಕಾರಿ ಸಿಎಸ್‌ ಪಾಟೀಲ್ ತಿಳಿಸಿದ್ದಾರೆ.

ದಕ್ಷಿಣ ಅಂಡಾಮಾನ್, ಬಂಗಾಳ ಕೊಲ್ಲಿಯ ದಕ್ಷಿಣ ಭಾಗ ಹಾಗೂ ನಿಕೋಬಾರ್‌ ದ್ವೀಪಗಳಲ್ಲಿ ಮಾನ್ಸೂನ್‌ ಮಾರುತಗಳು ನಿಗದಿತ ದಿನಕ್ಕಿಂತ ಮುನ್ನವೇ ಪ್ರವೇಶಿಸಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ