ಆ್ಯಪ್ನಗರ

ಪ್ರತ್ಯೇಕತೆ ಕೂಗಿಗೆ ಬಲ: ಶಂಕರ್ ಬಿದರಿ

ಈ ಹಿಂದಿನ ಎಲ್ಲಾ ಸರಕಾರಗಳು, ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿವೆ. ಈಗಿನ ಸರಕಾರ ಕೂಡ ಅನ್ಯಾಯ ಮಾಡಿದ್ದು, ಈ ಭಾಗದ ಜನರಿಗೆ ಸಿಗಬೇಕಾದ ಪಾಲು ನೀಡಬೇಕು ಎಂದು ನಿವೃತ್ತ ಡಿಜಿಪಿ ಶಂಕರ್‌ ಬಿದರಿ ಅವರು ಆಗ್ರಹಿಸಿದ್ದಾರೆ.

Vijaya Karnataka 11 Jul 2018, 9:20 am
ಬೆಂಗಳೂರು: ಈ ಹಿಂದಿನ ಎಲ್ಲಾ ಸರಕಾರಗಳು, ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿವೆ. ಈಗಿನ ಸರಕಾರ ಕೂಡ ಅನ್ಯಾಯ ಮಾಡಿದ್ದು, ಈ ಭಾಗದ ಜನರಿಗೆ ಸಿಗಬೇಕಾದ ಪಾಲು ನೀಡಬೇಕು ಎಂದು ನಿವೃತ್ತ ಡಿಜಿಪಿ ಶಂಕರ್‌ ಬಿದರಿ ಅವರು ಆಗ್ರಹಿಸಿದ್ದಾರೆ.
Vijaya Karnataka Web shankar bidari


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಿರುವುದು ಸ್ವಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೆ, ಈ ಭಾಗಕ್ಕೆ ನೀಡಿರುವ ಯೋಜನೆಗಳು ವೈಜ್ಞಾನಿಕವಾಗಿಲ್ಲ. ಈಗಾಗಲೇ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಚಳವಳಿಗಳು ನಡೆಯುತ್ತಿವೆ. ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಈ ಹೋರಾಟ ತೀವ್ರವಾಗುತ್ತದೆ,’’ ಎಂದು ಎಚ್ಚರಿಸಿದರು.

‘‘ಸರಕಾರದ ಕೆಲ ಇಲಾಖಾ ಕಚೇರಿಗಳನ್ನು ಬೆಂಗಳೂರಿನಿಂದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಜಿಲ್ಲೆಗಳಿಗೆ ಸ್ಥಳಾಂತರ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಬೇಕು. ಈ ಭಾಗದಿಂದ ಶಾಸನಸಭೆಗೆ 96 ಶಾಸಕರು ಆಯ್ಕೆಯಾಗಿದ್ದಾರೆ. ಆದರೆ, ಅವರಿಗೆ ಯಾವುದೇ ಪ್ರಾತಿನಿಧ್ಯ ನೀಡದೆ ಕಡೆಗಣಿಸಲಾಗಿದೆ,’’ಎಂದು ಬಿದರಿ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ