ಆ್ಯಪ್ನಗರ

ನಕಲಿ ಫೇಸ್‌ಬುಕ್‌ ಖಾತೆ ವಿರುದ್ಧ ಸಂಸದೆ ಸುಮಲತಾ ದೂರು

ನಕಲಿ ಫೇಸ್‌ಬುಕ್‌ ಪೇಜ್‌ ತೆರೆದು ನನ್ನ ನಿಲುವಿಗೆ ವಿರುದ್ಧವಾದ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿ ಅವಹೇಳನ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ...

Vijaya Karnataka Web 7 Sep 2019, 5:00 am
ಬೆಂಗಳೂರು: ನಕಲಿ ಫೇಸ್‌ಬುಕ್‌ ಪೇಜ್‌ ತೆರೆದು ನನ್ನ ನಿಲುವಿಗೆ ವಿರುದ್ಧವಾದ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿ ಅವಹೇಳನ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಂಡ್ಯ ಸಂಸದೆ ಸುಮಲತಾ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.
Vijaya Karnataka Web sumlatha


ಶುಕ್ರವಾರ ಬೆಳಗ್ಗೆ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾರೆ. ಚುನಾವಣೆ ವೇಳೆಯಲ್ಲೂ ಈ ರೀತಿ ಪೋಸ್ಟ್‌ ಗಳನ್ನು ಹಾಕಲಾಗುತ್ತಿತ್ತು. ಹಲವು ಬಾರಿ ಎಚ್ಚರಿಕೆ ನೀಡಿದರೂ ಕೃತ್ಯ ಮುಂದುವರಿದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸುಮಲತಾ,''ನಕಲಿ ಪೋಸ್ಟ್‌ ಮಾಡುವ ಪರಿಪಾಠ ನಡೆದಿದೆ. ಕೆಲವೊಂದು ನಕಲಿ ಫೇಸ್‌ಬುಕ್‌ ಪೇಜ್‌ಗಳು ಬಂದ್‌ ಆದವು. ಆದರೆ ಒಂದು ನಕಲಿ ಪೇಜ್‌ನಲ್ಲಿ ನನ್ನ ರಾಜಕೀಯ ನಿಲುವುಗಳಿಗೆ ವಿರುದ್ಧವಾದ ಪೋಸ್ಟ್‌ಗಳನ್ನು ನನ್ನ ಹೆಸರಿನಲ್ಲಿ ನಕಲಿ ಮಾಡಲಾಗುತ್ತಿದೆ. ನನ್ನನ್ನು ತೇಜೋವಧೆ ಮಾಡುವ ಕುಕೃತ್ಯ ಇದರಲ್ಲಿದೆ. ಇದು ಕೆಲ ದಿನಗಳ ಕಾಲ ಇರಲಿದೆ ಎಂದು ನಿರ್ಲಕ್ಷ್ಯ ವಹಿಸಿದ್ದೆ. ಆದರೆ ಇನ್ನೂ ನಿರ್ಲಕ್ಷ್ಯ ವಹಿಸುವುದು ಸಾಧ್ಯವಿಲ್ಲ. ಸೈಬರ್‌ ಠಾಣೆಗೆ ದೂರು ನೀಡಿದ್ದೇನೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ