ಆ್ಯಪ್ನಗರ

ಕೇಸರಿ ಶಾಲಿನಲ್ಲಿ ಮಿಂಚುತ್ತಿರುವ ಎಂಟಿಬಿ ನಾಗರಾಜ್‌

ಬಿಜೆಪಿಯ ಹಲವು ನಾಯಕರು ಕೇಸರಿ ಶಾಲು ಧರಿಸಿರುವುದು ಸಾಮಾನ್ಯವಾಗಿತ್ತು. ಆದರೆ ಎಂಟಿಬಿ ನಾಗರಾಜ್‌ ಅವರು ಬಿಜೆಪಿ ಶಾಲು ಧರಿಸಿ ಮಿಂಚುತ್ತಿರುವುದನ್ನು ಕಂಡು ಬಿಜೆಪಿ ನಾಯಕರೇ ಅಚ್ಚರಿಪಟ್ಟರು.

Vijaya Karnataka Web 4 Aug 2021, 3:13 pm
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಬುಧವಾರ (ಆಗಸ್ಟ್‌ 4)ರಂದು ನಡೆಯಿತು.
Vijaya Karnataka Web ಎಂಟಿಬಿ ನಾಗರಾಜ್‌
ಎಂಟಿಬಿ ನಾಗರಾಜ್‌


ಈ ಸಮಾರಂಭದಲ್ಲಿ ಬಿಜೆಪಿಯ ಕಾರ್ಯಕರ್ತರಿಗಿಂತ ಹೆಚ್ಚಾಗಿ ಮಿಂಚಿದ್ದು ಕಾಂಗ್ರೆಸ್‌ ಪಕ್ಷದ ಮಾಜಿ ನಾಯಕ, ಬಿಜೆಪಿಗೆ ಸೇರ್ಪಡೆಯಾಗಿರುವ ಎಂಟಿಬಿ ನಾಗರಾಜ್‌.

ಎಂಟಿಬಿ ನಾಗರಾಜ್‌ ಅವರು ಕೇಸರಿ ಶಾಲು ಧರಿಸಿ ಇಡೀ ರಾಜಭವನದಲ್ಲಿ ಓಡಾಡಿಕೊಂಡಿದ್ದು ಕಂಡುಬಂತು.

ಬಿಜೆಪಿಯ ಹಲವು ನಾಯಕರು ಕೇಸರಿ ಶಾಲು ಧರಿಸಿರುವುದು ಸಾಮಾನ್ಯವಾಗಿತ್ತು. ಆದರೆ ಎಂಟಿಬಿ ನಾಗರಾಜ್‌ ಅವರು ಬಿಜೆಪಿ ಶಾಲು ಧರಿಸಿ ಮಿಂಚುತ್ತಿರುವುದನ್ನು ಕಂಡು ಬಿಜೆಪಿ ನಾಯಕರೇ ಅಚ್ಚರಿಪಟ್ಟರು.

ವಿಧಾನ ಪರಿಷತ್‌ ಸದಸ್ಯರಾಗಿರುವ ಎಂಟಿಬಿ ನಾಗರಾಜ್‌ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಎಂಟಿಬಿ ನಾಗರಾಜ್‌ ಅವರ ನೂರಾರು ಅಭಿಮಾನಿಗಳು ರಾಜಭವನದ ಮುಂಭಾಗದಲ್ಲಿ ನೆರೆದಿದ್ದರು ಅಲ್ಲದೇ, ದೊಡ್ಡ ಪರದೆಯ ಮೇಲೆ ಕಂಡ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಂಡು ಘೋಷಣೆಗಳನ್ನು ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ