ಆ್ಯಪ್ನಗರ

ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ: ಐವರ ಬಂಧನ

ಕೊರೊನಾ ವೈರಸ್‌ ಸೋಂಕಿನ ಕುರಿತು ಜಾಗೃತಿ ಮೂಡಿಸಲು ತೆರಳಿದ್ದ ಆರೋಗ್ಯ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೆಣ್ಣೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka Web 3 Apr 2020, 1:37 pm
ಬೆಂಗಳೂರು: ಕೊರೊನಾ ವೈರಸ್‌ ಸೋಂಕಿನ ಕುರಿತು ಜಾಗೃತಿ ಮೂಡಿಸಲು ತೆರಳಿದ್ದ ಆರೋಗ್ಯ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೆಣ್ಣೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web attack on health workers


ಸುಹೇಲ್ ಬಾಷಾ, ಮೊಹಮ್ಮದ್ ಮುಸ್ತಾಫ್, ಸಗೀರ್ ಶರೀಫ್, ಸರ್ಫರಾದ್ ಹಡ್ಪಾ ಹಾಗೂ ಅನ್ಸಾರ್ ಜಬ್ಬಾರ್ ಬಂಧಿತ ಆರೋಪಿಗಳು.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ನರ್ಸ್, ಆಶಾಕಾರ್ಯಕರ್ತೆಯರು ನೆಗಡಿ, ಕೆಮ್ಮು, ಜ್ವರ ಕುರಿತು ಜನರಿಂದ ಮಾಹಿತಿ ಸಂಗ್ರಹಿಸಲು ಬುಧವಾರ ಸಾದಿಕ್ ಲೇಔಟ್ ಗೆ ತೆರಳಿದಾಗ ತಮ್ಮ ಮೇಲೆ ಹಲ್ಲೆ ಮಾಡಿ, ನಂತರ ತಮ್ಮ ಬಳಿ ಇದ್ದ ವರದಿಯನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಲ್ಲದೇ,ತಮ್ಮ ಮೊಬೈಲ್ ಫೋನ್ ಕಸಿದುಕೊಂಡು ಯಾರನ್ನು ಕರೆಯುತ್ತೀರಾ ಕರೆಯಿರಿ ಎಂದು ಆವಾಜ್ ಹಾಕಿದ್ದಾರೆ. ಅಲ್ಲದೇ, ತಮಗೆ ಯಾವುದೇ ಮಾಹಿತಿ,‌ ಮೊಬೈಲ್ ಸಂಖ್ಯೆ ನೀಡದಂತೆ ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡಿದ್ದಾರೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ಆರೋಪಿಸಿದರು.

ಪ್ರಧಾನಿ ಮೋದಿಯನ್ನು 'ಪ್ರಧಾನ್‌ ಶೋಮ್ಯಾನ್‌' ಎಂದ ಸಂಸದ ಶಶಿ ತರೂರ್!

ಆಶಾ ಕಾರ್ಯಕರ್ತೆ ಪುಷ್ಪವೇಣಿ ಮತ್ತು ಇನ್ನಿತರ ಆರು ಮಂದಿ ಸಾದಿಕ್‌ನಗರದಲ್ಲಿಕರ್ತವ್ಯ ನಿರ್ವಹಿಸುತ್ತಿದ್ದರು. ಆ ಪ್ರದೇಶದಲ್ಲಿಕೋವಿಡ್‌-19 ಸೋಂಕಿನ ರೋಗಿ ಇದ್ದ ಕಾರಣ ತಪಾಸಣೆ ನಡೆಸಲಾಗುತ್ತಿತ್ತು. ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದ ಆರೋಗ್ಯ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸುವ ರೀತಿಯಲ್ಲಿಮಸೀದಿಯ ಮೈಕ್‌ನಲ್ಲಿಘೋಷಣೆ ಮಾಡಲಾಗಿದೆ. ಹೇಳದೇ, ಕೇಳದೆ ಯಾರೋ ಸರಕಾರಿ ನೌಕರರು ಬಂದಿದ್ದಾರೆ. ಅವರಿಗೆ ಕೆಲಸ ಮಾಡಲು ಅವಕಾಶ ನೀಡಬೇಡಿ. ಕೂಡಲೇ ಅವರನ್ನು ಕಳುಹಿಸಿ ಎಂದು ಮೈಕ್‌ನಲ್ಲಿಪ್ರಚೋದನಾಕಾರಿ ಘೋಷಣೆ ಮಾಡಿದ್ದಾರೆ,'' ಎಂದು ಅಶ್ವ್ವತ್ಥನಾರಾಯಣ ಅವರು ಘಟನೆಯನ್ನು ವಿವರಿಸಿದರು.

ಮೋದಿ ವಿಡಿಯೋ ಸಂದೇಶ: ಏ.5 ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಲು ಕರೆ!

ಆಗಿದ್ದೇನು?
ಥಣಿಸಂದ್ರ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಲ್ಲಿ ಕೋವಿಡ್‌- 19 ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಇಡೀ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ, ಸೋಂಕಿತರ ಸಂಪರ್ಕಕ್ಕೆ ಬಂದವರ ಮತ್ತು ಅನಾರೋಗ್ಯಕ್ಕೀಡಾದವರ ತಪಾಸಣೆ ನಡೆಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ನೌಕರರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದರು. ಬುಧವಾರ ಮಧ್ಯಾಹ್ನ ಸಾದಿಕ್‌ ಲೇಔಟ್‌ಗೆ ತೆರಳಿದ್ದ ವೇಳೆ ವ್ಯಕ್ತಿಯೊಬ್ಬ ಬಂದು ಪ್ರಶ್ನೆ ಮಾಡಿದ್ದಾನೆ. ಮಾಹಿತಿ ಕಲೆ ಹಾಕಲು ಸರಕಾರದ ಆದೇಶವಿದೆ ಎಂದು ಹೇಳಿದಾಗ, ಮೈಕ್‌ನಲ್ಲೇ ಸಾರ್ವಜನಿಕರಿಗೆ ಘೋಷಣೆ ಮಾಡಿ ತಿಳಿಸುತ್ತೇನೆ ಎಂದು ಹೇಳಿ, ಪ್ರಾರ್ಥನಾ ಮಂದಿರದ ಮೈಕ್‌ನಲ್ಲಿ ಘೋಷಣೆ ಮಾಡಲಾಗಿದೆ. ಕೂಡಲೇ ನೂರಾರು ಜನ ಸ್ಥಳಕ್ಕೆ ಧಾವಿಸಿ ಆರೋಗ್ಯ ಇಲಾಖೆ ನೌಕರರನ್ನು ಗುಂಪುಗೂಡಿ ದಿಗ್ಬಂಧನ ವಿಧಿಸಿದ್ದಾರೆ. 'ಇಲ್ಲಿಗೆ ಬರಲು ನಿಮಗೆ ಯಾರು ಹೇಳಿದ್ದು' ಎಂದು ಗಲಾಟೆ ಮಾಡಿ, ದೌರ್ಜನ್ಯ ನಡೆಸಿ ದಾಖಲೆ ಪತ್ರಗಳನ್ನು ಕಸಿದುಕೊಂಡಿದ್ದಾರೆ. ಮೊಬೈಲ್‌ ಫೋನ್‌ ಕಿತ್ತುಕೊಂಡು ಬೆದರಿಕೆ ಹಾಕಿದ್ದಾರೆ. ಇದರಿಂದ ಆಘಾತಗೊಂಡ ನೌಕರರು ಸ್ಥಳದಿಂದ ಹೊರಟು ಹೋಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ