ಆ್ಯಪ್ನಗರ

ವಿಶಾಲಾಕ್ಷಿ ದೇವಿ ನಿಧನ:ರಾಜಮನೆತನದಲ್ಲಿ ಒಂದೇ ದಿನ ಎರಡು ಸಾವು

ವಿಶಾಲಾಕ್ಷಿ ದೇವಿ ಅವರು ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಸೋಂಕಿನ ಬಾಧೆಯಿಂದ ಬಳಲುತ್ತಿದ್ದ ಅವರು, ಬಹುಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ 4.10ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಖಾಸಗಿ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.

Vijaya Karnataka Web 19 Oct 2018, 9:53 pm
ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ರಾಜಮನೆತನದ ವಿಶಾಲಾಕ್ಷಿ ದೇವಿ(56) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು.
Vijaya Karnataka Web queen died 2.

ಜಯಚಾಮರಾಜೇಂದ್ರಒಡೆಯರ್‌- ತ್ರಿಪುರ ಸುಂದರಿ ಅಮ್ಮಣ್ಣಿ ಅವರ 6ನೇ ಮಗಳಾದ ವಿಶಾಲಾಕ್ಷಿದೇವಿ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಪ್ರೀತಿಯ ತಂಗಿಯಾಗಿದ್ದರು. ಇವರಿಗೆ ಪತಿ ಗಜೇಂದ್ರ ಸಿಂಗ್‌ ಹಾಗೂ ಪುತ್ರ ರುದ್ರಪ್ರತಾಪ ಸಿಂಗ್‌, ಪುತ್ರಿ ಶ್ರುತಿ ಕುಮಾರಿ ಇದ್ದಾರೆ.

ವಿಶಾಲಾಕ್ಷಿ ದೇವಿ ಅವರು ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಸೋಂಕಿನ ಬಾಧೆಯಿಂದ ಬಳಲುತ್ತಿದ್ದ ಅವರು, ಬಹುಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ 4.10ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಖಾಸಗಿ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.

ವಿಶಾಲಾಕ್ಷಿ ದೇವಿ ಅವರಿಗೆ ಪ್ರಾಣಿಗಳನ್ನು ಕಂಡರೆ ವಿಶೇಷ ಪ್ರೀತಿ ಇತ್ತು, ಅವರೇ ಚಿರತೆ ಮರಿಯನ್ನು ಸಾಕಿದ್ದರು. ನಂತರ ಅದು ಬೆಳೆದ ಮೇಲೆ ಕಾಡಿನಲ್ಲಿ ಬಿಟ್ಟುಬಂದಿದ್ದರೆನ್ನಲಾಗಿದೆ.

ಶುಕ್ರವಾರ ಬೆಳಿಗ್ಗೆಯಷ್ಟೇ ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ನಿಧನರಾಗಿದ್ದರು. ಸಂಜೆ ವೇಳೆಗೆ ವಿಶಾಲಾಕ್ಷಿ ದೇವಿ ಅವರ ನಿಧನದಿಂದಾಗಿ ಒಂದೇ ದಿನ ರಾಜಕುಟುಂಬದಲ್ಲಿ ಇಬ್ಬರು ಸಾವಿಗೀಡಾದಂತಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ