ಆ್ಯಪ್ನಗರ

ಫಸಲ್‌ ಬಿಮಾ ಯೋಜನೆ ಹೆಸರಲ್ಲಿ ರೈತರನ್ನು ದೋಚಲಾಗುತ್ತಿದೆ: ಕಾಂಗ್ರೆಸ್ ಆರೋಪ

95% ರಷ್ಟು ವಿಮಾ ಪರಿಹಾರವನ್ನು ಕಂಪನಿಯಲ್ಲೇ ಉಳಿಸಿಕೊಂಡಿದೆ. ಕೇಂದ್ರ ಸರಕಾರವೇ ವಿಮಾ ಕಂಪನಿಗಳ ಕಾವಲಿಗೆ ನಿಂತಂತಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಆರೋಪ ಮಾಡಿದೆ.

Vijaya Karnataka Web 13 Jun 2019, 11:15 am
ಬೆಂಗಳೂರು: ಫಸಲ್‌ ಬಿಮಾ ಯೋಜನೆ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ರೈತರನ್ನು ದೋಚುತ್ತಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.
Vijaya Karnataka Web Agriculture


ಕೇಂದ್ರ ಸರಕಾರ ಫಸಲ್‌ ಬಿಮಾ ಯೋಜನೆಯ ಹೆಸರಲ್ಲಿ ರೈತರನ್ನು ದೋಚಿ ವಿಮಾ ಕಂಪನಿಗಳನ್ನು ಸಲಹುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

ದೇಶದ ಕೃಷಿಕರ ಆದಾಯದ ದುಪ್ಪಟ್ಟಿನ ಮಾತಿರಲಿ, ಕೇವಲ 5% ರಷ್ಟು ಮಾತ್ರವೇ ವಿಮೆ ಪರಿಹಾರ ಹಣ ನೀಡಿ ರೈತರಿಗೆ ಕೇಂದ್ರ ಸರಕಾರ ಮಹಾ ಮೋಸ ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಉಳಿದ 95% ರಷ್ಟು ವಿಮಾ ಪರಿಹಾರವನ್ನು ಕಂಪನಿಯಲ್ಲೇ ಉಳಿಸಿಕೊಂಡಿದೆ. ಕೇಂದ್ರ ಸರಕಾರವೇ ವಿಮಾ ಕಂಪನಿಗಳ ಕಾವಲಿಗೆ ನಿಂತಂತಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಆರೋಪ ಮಾಡಿದೆ.

ನೈಸರ್ಗಿಕ ವಿಕೋಪಗಳು , ಕೀಟಗಳು ಮತ್ತು ರೋಗಗಳ ಪರಿಣಾಮವಾಗಿ ಸೂಚನೆ ಬೆಳೆ ಯಾವುದೇ ವೈಫಲ್ಯ ಸಂದರ್ಭದಲ್ಲಿ ರೈತರಿಗೆ ವಿಮಾ ರಕ್ಷಣೆಯನ್ನು ಮತ್ತು ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ