ಆ್ಯಪ್ನಗರ

ಮಧುಪಂಡಿತ್‌ ದಾಸಗೆ ನ್ಯಾಷನಲ್‌ ಲಿವಿಂಗ್‌ ಲೆಜೆಂಡ್‌ ಅವಾರ್ಡ್‌

ಅಕ್ಷಯಪಾತ್ರ ಫೌಂಡೇಷನ್‌ ಅಧ್ಯಕ್ಷ ಮಧುಪಂಡಿತ್‌ ದಾಸ ಅವರು ಚೊಚ್ಚಲ ನ್ಯಾಷನಲ್‌ ಲಿವಿಂಗ್‌ ಲೆಜೆಂಡ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ...

Vijaya Karnataka 22 Nov 2018, 5:00 am
ಬೆಂಗಳೂರು: ಅಕ್ಷಯಪಾತ್ರ ಫೌಂಡೇಷನ್‌ ಅಧ್ಯಕ್ಷ ಮಧುಪಂಡಿತ್‌ ದಾಸ ಅವರು ಚೊಚ್ಚಲ ನ್ಯಾಷನಲ್‌ ಲಿವಿಂಗ್‌ ಲೆಜೆಂಡ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Vijaya Karnataka Web 2111-2-2-KSG_13


ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಒಡಿಶಾದ ಆರೋಗ್ಯ, ಕಾನೂನು ಮತ್ತು ವಾರ್ತಾ ಸಚಿವ ಪ್ರತಾಪ್‌ ಜೇನಾ ಅವರು, ಮಧುಪಂಡಿತ್‌ ದಾಸ ಅವರ ಪರವಾಗಿ ಅಕ್ಷಯಪಾತ್ರ ಫೌಂಡೇಷನ್‌ ಉಪಾಧ್ಯಕ್ಷ ಚಂಚಲಪತಿದಾಸ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಒಡಿಶಾ ಡೈರಿ ಫೌಂಡೇಷನ್‌ ಅಧ್ಯಕ್ಷ ರಶ್ಮಿ ರಂಜನ್‌ ಪರಿದಾ, ಲಿವಿಂಗ್‌ ಲೆಜೆಂಡ್‌ ಅವಾರ್ಡ್ಸ್ ಸಂಚಾಲಕ ದೇಬಸಿಸ್‌ ಸಮಂತರಾಯ್‌ ಉಪಸ್ಥಿತರಿದ್ದರು.

ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಉದ್ದೇಶದಿಂದ ಶಾಲಾ ಮಕ್ಕಳ ಹಸಿವು ನಿವಾರಣೆಯಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಫೌಂಡೇಷನ್‌ ಕಾರ‍್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯನ್ನು ಈ ವರ್ಷದಿಂದ ಆರಂಭಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ