ಆ್ಯಪ್ನಗರ

ಕಡ್ಡಾಯ ವರ್ಗಾವಣೆ ತಂದ ಹೊಸ ಸವಾಲು: ಸ್ವಯಂ ನಿವೃತ್ತಿಗೆ ಶಿಕ್ಷಕರ ಚಿಂತನೆ ?!

ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿರುವ ಕಡ್ಡಾಯ ವರ್ಗಾವಣೆ ನಿಯಮದಡಿ ಪ್ರಭುಲಿಂಗ ರಾಜ್‌ ಅವರು ಡಿ ವಲಯದ ಕುಗ್ರಾಮಕ್ಕೆ ವರ್ಗಾವಣೆಯಾಗಿದ್ದು, ಅಲ್ಲಿಕೆಲಸ ಮಾಡುವುದು ಅನಿವಾರ್ಯವಾಗಿದೆ. ಹತ್ತಾರು ವರ್ಷ ನಗರ ಇಲ್ಲವೇ ಪಟ್ಟಣ ಪ್ರದೇಶದ ಶಾಲೆಗಳಲ್ಲಿಕೆಲಸ ಮಾಡಿರುವ ಪ್ರಭುಲಿಂಗರಾಜ್‌ ಅವರಿಗೆ ಹೊಸ ಸವಾಲು ಎದುರಾಗಿದೆ.

Vijaya Karnataka 14 Sep 2019, 2:38 pm
ರಾಮನಗರ: ''ನನಗೆ ಬಿಪಿ, ಶುಗರ್‌ ಇದೆ. 57ರ ಈ ವಯಸ್ಸಿನಲ್ಲಿಕೆಜಿಎಫ್‌ ತಾಲೂಕು ಕೇಂದ್ರದಿಂದ 35 ಕಿ.ಮೀ. ದೂರದ ಕುಗ್ರಾಮದ ಶಾಲೆಗೆ ಹೋಗಿ ಕೆಲಸ ಮಾಡುವುದು ಹೇಗೆ ? ಅನಾರೋಗ್ಯದ ಜತೆಗೆ ಸಂಸಾರ ಬಿಟ್ಟು ದೂರ ಇರುವುದು ಹೇಗೆ? ಸ್ವಯಂ ನಿವೃತ್ತಿ ಆಲೋಚನೆ ಮಾಡುತ್ತಿದ್ದೇನೆ, !''
Vijaya Karnataka Web Teacher 2


- ಇದು ಕೆಜಿಎಫ್‌ನಿಂದ ವರ್ಗಾವಣೆಗೊಂಡು ರಾಮನಗರ ಜಿಲ್ಲೆಯ ಗ್ರಾಮಕ್ಕೆ ಬಂದಿರುವ ಶಿಕ್ಷಕ ಪ್ರಭುಲಿಂಗ ರಾಜ್‌ ಅವರ ಚಿಂತೆ. ಇದು ಇವರೊಬ್ಬರದ್ದಲ್ಲ, ರಾಜ್ಯದಲ್ಲಿನೂರಾರು ಹಿರಿಯ ಶಿಕ್ಷಕರು ಅನುಭವಿಸುತ್ತಿರುವ ಎದುರಿಸುತ್ತಿರುವ ಚಿಂತೆ ಇದು.

ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿರುವ ಕಡ್ಡಾಯ ವರ್ಗಾವಣೆ ನಿಯಮದಡಿ ಪ್ರಭುಲಿಂಗ ರಾಜ್‌ ಅವರು ಡಿ ವಲಯದ ಕುಗ್ರಾಮಕ್ಕೆ ವರ್ಗಾವಣೆಯಾಗಿದ್ದು, ಅಲ್ಲಿಕೆಲಸ ಮಾಡುವುದು ಅನಿವಾರ್ಯವಾಗಿದೆ. ಹತ್ತಾರು ವರ್ಷ ನಗರ ಇಲ್ಲವೇ ಪಟ್ಟಣ ಪ್ರದೇಶದ ಶಾಲೆಗಳಲ್ಲಿಕೆಲಸ ಮಾಡಿರುವ ಪ್ರಭುಲಿಂಗರಾಜ್‌ ಅವರಿಗೆ ಹೊಸ ಸವಾಲು ಎದುರಾಗಿದೆ.

''ಹೊಸದಾಗಿ ನೇಮಕವಾದವರು ಹಾಗೂ 50 ವರ್ಷ ಮೀರದವರನ್ನು ಗ್ರಾಮೀಣ ಪ್ರದೇಶಕ್ಕೆ ಕಡ್ಡಾಯ ವರ್ಗಾವಣೆ ಮಾಡುವುದು ಸರಿ. ಆದರೆ, ನಮ್ಮಂಥ ಹಿರಿಯ ಶಿಕ್ಷಕರು ಈ ವಯಸ್ಸಿನಲ್ಲಿಹಳ್ಳಿ ಶಾಲೆಗೆ ಹೋಗಬೇಕು ಎಂದರೆ ಹೇಗೆ ?,'' ಎಂಬ ಅವರ ಪ್ರಶ್ನೆಗೆ ಶಿಕ್ಷಣ ಇಲಾಖೆಯ ಆಯುಕ್ತರಾಗಲಿ, ಉಪ ನಿರ್ದೇಶಕರಾಗಲಿ ಉತ್ತರ ನೀಡಿಲ್ಲ. ಹಾಗಾಗಿ, ಅವರು ಸ್ವಯಂ ನಿವೃತ್ತಿಯ ಆಲೋಚನೆಗೆ ಇಳಿದಿದ್ದಾರೆ.

ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಶ್‌, ''ಕೆಲವು ಶಿಕ್ಷಕರು ಸ್ವಯಂ ನಿವೃತ್ತಿ ಬಯಸಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ. ವರ್ಗಾವಣೆಯಾಗಿರುವ ಊರಿಗೆ ಬಸ್ಸಿಲ್ಲ, ಬಾಡಿಗೆ ಮನೆ ಸಿಗುವುದಿಲ್ಲ. ನೀರಿಲ್ಲಎಂಬ ಸಣ್ಣಪುಟ್ಟ ಕಾರಣ ನೀಡುತ್ತಾ, ಬಿ ಇಲ್ಲವೇ ಸಿ ವಲಯದ ಶಾಲೆಗಳನ್ನು ಕೇಳುತ್ತಿದ್ದಾರೆ. ಈ ಸಂಗತಿಯನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸಲಾಗುವುದು,'' ಎಂದು ವಿವರಿಸಿದರು.

ಕುಂಟು ನೆಪ ಒಪ್ಪಲ್ಲ!

ಕಡ್ಡಾಯ ವರ್ಗಾವಣೆ ಬಿಸಿ ಹೆಚ್ಚಾಗಿ ತಟ್ಟಿರುವುದು ಅವಿವಾಹಿತ ಶಿಕ್ಷಕರಿಗೆ. ಕುಗ್ರಾಮಗಳ ಶಾಲೆಗೆ ಹೋದರೆ, ತಮ್ಮನ್ನು ಮದುವೆಯಾಗಲು ಯುವತಿಯರು ಒಪ್ಪುವುದಿಲ್ಲಎಂಬುದು ಅವರ ಚಿಂತೆ. ಆದರೆ ಈ ವಾದವನ್ನು ಅಧಿಕಾರಿಯೊಬ್ಬರು ನಿರಾಕರಿಸಿದರು. ''ಇದು ನೆಪವಷ್ಟೆ. ಸರಕಾರಿ ನೌಕರಿ ಎಂದರೆ ಸುಲಭವಾಗಿ ಮದುವೆಯಾಗಬಹುದು. ಇಲಾಖೆ ಇದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ