ಆ್ಯಪ್ನಗರ

ನೂತನ ಸಚಿವರ ಖಾತೆ ಬದಲಾವಣೆ, ಅಸಮಾಧಾನ ತಣಿಸಲು ಬಿಎಸ್‌ವೈ ಯತ್ನ

ಸೋಮವಾರವಷ್ಟೇ ನೂತನ ಸಚಿವರಿಗೆ ಖಾತೆಗಳನ್ನು ಹಂಚಲಾಗಿತ್ತು. ಕೆಲವು ಸಚಿವರು ತಮಗೆ ಸಿಕ್ಕಿದ ಖಾತೆಗಳ ಬಗ್ಗೆ ನಿರಾಶೆಗೊಂಡು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ನೂತನ ಸಚಿವರ ಅಸಮಾಧಾನ ತಣಿಸುವ ಪ್ರಯತ್ನವಾಗಿ ಮುಖ್ಯಮಂತ್ರಿಗಳು ಖಾತೆ ಬದಲಾವಣೆಗೆ ಕೈ ಹಾಕಿದ್ದಾರೆ.

Vijaya Karnataka 11 Feb 2020, 4:28 pm

ಬೆಂಗಳೂರು: ನೂತನ ಸಚಿವರಿಗೆ ಹಂಚಿಕೆಯಾಗಿದ್ದ ಖಾತೆಗಳಲ್ಲಿ ಕೆಲವನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮಂಗಳವಾರ ಬದಲಾಯಿಸಿದ್ದಾರೆ.
Vijaya Karnataka Web Yediyurappa


ಸೋಮವಾರವಷ್ಟೇ ನೂತನ ಸಚಿವರಿಗೆ ಖಾತೆಗಳನ್ನು ಹಂಚಲಾಗಿತ್ತು. ಕೆಲವು ಸಚಿವರು ತಮಗೆ ಸಿಕ್ಕಿದ ಖಾತೆಗಳ ಬಗ್ಗೆ ನಿರಾಶೆಗೊಂಡು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ನೂತನ ಸಚಿವರ ಅಸಮಾಧಾನ ತಣಿಸುವ ಪ್ರಯತ್ನವಾಗಿ ಮುಖ್ಯಮಂತ್ರಿಗಳು ಖಾತೆ ಬದಲಾವಣೆಗೆ ಕೈ ಹಾಕಿದ್ದಾರೆ.

ಅರಣ್ಯ ಖಾತೆ ಒಲ್ಲದ ಬಿ.ಸಿ. ಪಾಟೀಲ್‌, ಎಂಎಸ್‌ಐಎಲ್‌ ಅಧ್ಯಕ್ಷಗಿರಿ ತಿರಸ್ಕರಿಸಿದ ಕುಮಠಳ್ಳಿ

ಬಿ ಸಿ ಪಾಟೀಲ್‌ ಗೆ ಅರಣ್ಯ ಖಾತೆ ಬದಲಿಗೆ ಕೃಷಿ ಖಾತೆ ನೀಡಲಾಗಿದೆ. ಕೃಷಿ ಖಾತೆಯನ್ನು ನಿನ್ನೆಯಷ್ಟೇ ಹೆಚ್ಚುವರಿಯಾಗಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರಿಗೆ ನೀಡಲಾಗಿತ್ತು. ಇದೀಗ ಪಾಟೀಲ್‌ಗೆ ಹಂಚಿಕೆಯಾಗಿದ್ದ ಅರಣ್ಯ ಖಾತೆಯನ್ನು ಆನಂದ್‌ ಸಿಂಗ್‌ ಅವರಿಗೆ ನೀಡಲಾಗಿದೆ. ಇದರ ಜೊತೆಗೆ ಅವರಿಗೆ ಪರಿಸರ ಮತ್ತು ಜೀವ ವಿಜ್ಞಾನ ಖಾತೆ ನೀಡಲಾಗಿದೆ.

ಆನಂದ್‌ ಸಿಂಗ್‌ ಬಳಿಯಲ್ಲಿದ್ದ ಆಹಾರ ಮತ್ತು ನಾಗರಿಕ ಪೂರೈಕೆಯನ್ನು ಗೋಪಾಲಯ್ಯ ಅವರಿಗೆ ನೀಡಿದ್ದಾರೆ. ಇದರ ಜೊತೆಗೆ ಗೋಪಾಲಯ್ಯ ಅವರಿಗೆ ಗ್ರಾಹಕ ವ್ಯವಹಾರ ಖಾತೆ ನೀಡಲಾಗಿದೆ.

ಗೋಪಾಲಯ್ಯ ಅವರ ಬಳಿ ಇದ್ದ ಸಣ್ಣ ಕೈಗಾರಿಕೆ ಖಾತೆಯನ್ನು ಮುಖ್ಯಮಂತ್ರಿಯವರು ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದಾರೆ. ಪ್ರಭುಚವ್ಹಾಣ್‌ ಅವರಿಗೆ ಪಶು ಸಂಗೋಪನೆ ಜೊತೆ ಅಲ್ಪಸಂಖ್ಯಾತ ಕಲ್ಯಾಣ ಖಾತೆ ನೀಡಲಾಗಿತ್ತು. ಇದೀಗ ಅವರಿಗೆ ಹಜ್‌ ಮತ್ತು ವಕ್ಫ್‌ ಖಾತೆಯನ್ನು ನೀಡಿ ಅಲ್ಪಸಂಖ್ಯಾತ ಕಲ್ಯಾಣ ಖಾತೆಯನ್ನು ಶ್ರೀಮಂತ ಪಾಟೀಲ್‌ ಅವರಿಗೆ ನೀಡಲಾಗಿದೆ. ಜವಳಿ ಮತ್ತು ಕೈಮಗ್ಗ ಖಾತೆ ಜೊತೆ ಅವರಿಗೆ ಈ ಖಾತೆಯೂ ಇರಲಿದೆ.

ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್ , ಯಾರ್ಯಾರಿಗೆ ಯಾವ ಖಾತೆ ? ಇಲ್ಲಿದೆ ಡಿಟೇಲ್ಸ್

ಶಿವರಾಮ್‌ ಹೆಬ್ಬಾರ್‌ ಅವರಿಗೆ ಕಾರ್ಮಿಕ ಖಾತೆ ನೀಡಲಾಗಿತ್ತು. ಇದೀಗ ಅವರಿಗೆ ಸಿಟಿ ರವಿ ಬಳಿಯಲ್ಲಿದ್ದ ಸಕ್ಕರೆ ಖಾತೆಯನ್ನು ಹೆಚ್ಚುವರಿಯಾಗಿ ಮುಖ್ಯಮಂತ್ರಿಗಳು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ