ಆ್ಯಪ್ನಗರ

ಹೊಸ ವಾಹನ ಮಾಲೀಕರಿಗೆ ಇನ್ನು ರಸ್ತೆ ಸುರಕ್ಷತಾ ಸೆಸ್‌ ಹೊರೆ

ದ್ವಿಚಕ್ರ/ ತ್ರಿಚಕ್ರ ವಾಹನಗಳಿಗೆ 500 ರೂ, ಇತರೆ ವಾಹನಗಳಿಂದ 1000 ರೂ...

Vijaya Karnataka Web 12 Mar 2019, 5:00 am
ಬೆಂಗಳೂರು: ಹೊಸದಾಗಿ ವಾಹನಗಳನ್ನು ಖರೀದಿಸುವ ಮಾಲೀಕರು ರಸ್ತೆ ಸುರಕ್ಷತಾ ಉಪಕರ (ಸೆಸ್‌)ವನ್ನೂ ತೆರಬೇಕಾಗುತ್ತದೆ. ದ್ವಿಚಕ್ರ/ ತ್ರಿಚಕ್ರ ವಾಹನಗಳಿಗೆ 500 ರೂ. ಹಾಗೂ ಇತರೆ ವಾಹನಗಳಿಗೆ 1000 ರೂ. ಸೆಸ್‌ ಪಾವತಿಸಬೇಕಾಗುತ್ತದೆ.
Vijaya Karnataka Web new


ಈ ಸಂಬಂಧ ಸಾರಿಗೆ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ 2017 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ 45)ರ ಅಧಿನಿಯಮದ ಪ್ರಕರಣ-13ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ವಹಣೆಗಾಗಿ ನಿಧಿ ಸಂಗ್ರಹಿಸುವ ಸಲುವಾಗಿ ವಾಹನಗಳ ನೋಂದಣಿ ಸಮಯದಲ್ಲಿ ಉಪಕರ (ಸೆಸ್‌) ವಿಧಿಸಲು ಹಾಗೂ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮಗಳು-1989 ನಿಯಮ 81ರಡಿ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 4ರಲ್ಲಿ ವಾಹನಗಳ ವರ್ಗಗಳ ಆಧಾರದಲ್ಲಿ ನೋಂದಣಿ ಶುಲ್ಕಗಳ ದರದೊಂದಿಗೆ ರಸ್ತೆ ಸುರಕ್ಷತಾ ಸೆಸ್‌ ಕೂಡ ಸಂಗ್ರಹಿಸಲು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ಹೊರಡಿಸಿರುವ ಅಧಿಸೂಚನೆಯಲ್ಲಿ ಸೂಚಿಸಿದ್ದಾರೆ.

ಪ್ರತಿ ದಿನ ರಾಜ್ಯದಲ್ಲಿ 3,500 ಹೊಸ ವಾಹನಗಳು ರಸ್ತೆಗಿಳಿದರೆ, ಅದರಲ್ಲಿ ರಾಜಧಾನಿ ಬೆಂಗಳೂರಿನಲ್ಲೇ ಸುಮಾರು 2,000 ವಾಹನಗಳು ನೋಂದಣಿಯಾಗುತ್ತಿವೆ. ಒಂದು ವೇಳೆ ಈ ಸಂಖ್ಯೆಗಿಂತ ಕಡಿಮೆ ಸಂಖ್ಯೆಯ ವಾಹನಗಳು ನೋಂದಣಿಯಾದರೂ ಪ್ರತಿ ದಿನ ಸುಮಾರು 15 ಲಕ್ಷ ರೂ. ಸೆಸ್‌ ಸಂಗ್ರಹವಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ