ಆ್ಯಪ್ನಗರ

ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿರು ಪರಿಚಯ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಿಸಲಾಗಿದೆ.

Vijaya Karnataka Web 21 Aug 2019, 12:29 pm
ಬೆಂಗಳೂರು: ಪ್ರಖರ ಹಿಂದುತ್ವವಾದಿ ಎಂದು ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
Vijaya Karnataka Web nalin


ನಿರಂಜನ್ ಶೆಟ್ಟಿ ಮತ್ತು ಸುಶೀಲಾ ಶೆಟ್ಟಿ ದಂಪತಿಯ ಪುತ್ರ ನಳೀನ್‌ ಕುಮಾರ್‌ ಕಟೀಲ್‌ ಅವರು ಮೂರನೇ ಬಾರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿ 12 ವರ್ಷಗಳ ಕಾಲ ಸಂಘಟನೆಗಾಗಿ ದುಡಿದಿದ್ದು, ಪ್ರಖರ ಹಿಂದುತ್ವವಾದಿ ಎಂದು ಹೆಸರಾಗಿದ್ದಾರೆ.

ವಿವಿಧ ಯೋಜನೆಗಳ ಮೂಲಕ ಕೇಂದ್ರ ಸರಕಾರದಿಂದ ಅತೀ ಹೆಚ್ಚು ಅನುದಾನ ತಂದ ಸಂಸದ ಎಂಬ ಖ್ಯಾತಿ ನಳಿನ್ ಕುಮಾರ್ ಕಟೀಲ್ ಅವರದ್ದು.

ನಳಿನ್ ಕಟೀಲ್ ಕಾರ್ಯ

* ಕೇರಳ ರಾಜ್ಯ ಬಿಜೆಪಿಯ ಸಹ ಪ್ರಭಾರಿ

* 18ನೇ ವರ್ಷಕ್ಕೆ ಆರ್‌ಎಸ್‌ಎಸ್ ಪ್ರಚಾರಕ

* 5 ವರ್ಷಗಳ ಕಾಲ RSS ತಾಲೂಕು ಕಾರ್ಯವಾಹಕ

* 5 ವರ್ಷಗಳ ಕಾಲ ಧರ್ಮ ಜಗರನ್ ವಿಭಾಗದ ಸಂಚಾಲಕರಾಗಿ ಕಾರ್ಯನಿರ್ವಹಣೆ

* 2009ರಲ್ಲಿ 42000 ಮತಗಳಿಂದ ಗೆದ್ದು ಮೊದಲ ಬಾರಿಗೆ ಲೋಕಸಭೆ ಪ್ರವೇಶ

* 2014ರಲ್ಲಿ 1,43,709 ಮತಗಳ ಅಂತರದಲ್ಲಿ ಜಯಗಳಿಸಿ ಲೋಕಸಭೆಗೆ ಮರು ಆಯ್ಕೆ

* ಟೈಮ್ಸ್ ನಿಯತಕಾಲಿಕೆಯ ಸಮೀಕ್ಷೆ ಪ್ರಕಾರ, 16ನೇ ಲೋಕಸಭೆಯ ಅತ್ಯುತ್ತಮ ಸಂಸದರೆಂಬ ಖ್ಯಾತಿ

* 2019ರಲ್ಲಿ 2,74,621 ಮತಗಳಿಂದ ಗೆದ್ದು ಸತತ ಮೂರನೇ ಅವಧಿಗೆ ಸಂಸದ

* ಮೈಸೂರು ವಿವಿ ಸಮೀಕ್ಷೆ ಪ್ರಕಾರ, ಸಂಸದ ಆದರ್ಶ ಗ್ರಾಮ ಯೋಜನೆ ಅಡಿ ಗ್ರಾಮಗಳ ಅಭಿವೃದ್ಧಿ ಮಾಡಿದ ನಂಬರ್ 1 ಸಂಸದ ಎಂಬ ಹೆಗ್ಗಳಿಕೆ

* ಅಯೋಧ್ಯೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ