ಆ್ಯಪ್ನಗರ

ವಾಜಪೇಯಿ ಅಸ್ತಂಗತ: ವಿಭಿನ್ನ ಪತ್ರಿಕೆಗಳ ಕವರೇಜ್ ಹೇಗಿದೆ?

ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ತಂಗತ ಸುದ್ದಿಯನ್ನು ಯಾವ ಯಾವ ಪತ್ರಿಕೆಗಳು ಹೇಗೆಲ್ಲಾ ಹೆಡ್ಡಿಂಗ್‌ಗಳನ್ನು ಕೊಟ್ಟಿವೆ ಎಂಬುದರ ಗುಚ್ಛವಿದು. ನಿಮ್ಮ ಮನಕ್ಕೆ ಮುಟ್ಟಿದ ಹೆಡ್‌ಲೈನ್‌ ಯಾವುದು ಎಂದು ಕಮೆಂಟ್‌ ಮಾಡಿ.

Vijaya Karnataka Web 17 Aug 2018, 2:31 pm

ಆಧುನಿಕ ಭಾರತದ ಭೀಷ್ಮ, ಅಜಾತಶತ್ರುವಿನ ಹೆಜ್ಜೆ ಗುರುತು...

ಬೆಂಗಳೂರು: ಗಣ್ಯರು ಸಾವಿನಪ್ಪಿದ ಸಂದರ್ಭ, ಮೇಜರ್‌ ಘಟನೆಗಳು ಸಂಭವಿಸಿದಾಗ ಪತ್ರಿಕೆಗಳಿಗೆ ಬಹುದೊಡ್ಡ ಚಾಲೆಂಜ್‌ ಎಂದರೆ ಹೆಡ್ಡಿಂಗ್‌.
Vijaya Karnataka Web Vajpayee headings

ತಾಜಾ ಸುದ್ದಿಯನ್ನು ವೆಬ್‌ತಾಣಗಳು, ನ್ಯೂಸ್‌ ಚಾನೆಲ್‌ಗಳು, ರೇಡಿಯೋ ವಾಹಿನಿಗಳು ಮತ್ತು ಸಾಮಾಜಿಕ ತಾಣಗಳು ಎಲ್ಲರಿಗೂ ತಲುಪಿಸಿ ಬಿಟ್ಟಿರುತ್ತವೆ. ಆದರೂ ಮರುದಿನ ಪತ್ರಿಕೆಗಳಲ್ಲಿ ಆ ಸುದ್ದಿ ಅಚ್ಚಾಗಬೇಕು. ಕಿವಿಗೆ ತಲುಪಿದ ಸುದ್ದಿಯನ್ನೇ ತನು-ಮನಕ್ಕೆ ಮುಟ್ಟುವಂತೆ ಪ್ರೆಸಂಟ್‌ ಮಾಡಬೇಕು. ಆ ಪುಟವನ್ನು ಎತ್ತಿಟ್ಟುಕೊಳ್ಳುವಂತೆ ಅಚ್ಚುಕಟ್ಟಾದ ಹೆಡ್ಡಿಂಗ್‌ ಕೊಡಬೇಕು. ಮತ್ತೆ ಮತ್ತೆ ಓದುವಂತ ಕಿಕ್ಕರ್‌ ಕೊಡಬೇಕು.

ಅಜಾತಶತ್ರು ಅಟಲ್‌ ಅಮರ

ಅಜಾತ ಶತ್ರು, ನವಭಾರತದ ಭೀಷ್ಮ, ಭಾರತಕ್ಕೆ ಪರಮಾಣು ಶಕ್ತಿ ತುಂಬಿದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಗುರುವಾರ ಸಂಜೆ ನಿಧನರಾದ ಸುದ್ದಿ ಅಪ್ಪಳಿಸಿದಂತೆ ವೆಬ್‌/ಚಾನೆಲ್‌ಗಳೆಲ್ಲವೂ ತಕ್ಷಣ ಸುದ್ದಿ ನೀಡುವತ್ತ ಹವಣಿಸಿದ್ದರೆ, ಪತ್ರಿಕಾ ಕಚೇರಿಗಳಲ್ಲಿ ಓದುಗರು ಬಹುಕಾಲ ಕಾಪಿಟ್ಟುಕೊಳ್ಳುವ ಕಾಪಿಗಳನ್ನು ಕಟ್ಟುವ ಕೆಲಸ ನಡೆದಿತ್ತು.

ಭಾವಪೂರ್ಣವಾಗಿ, ಶ್ರೇಷ್ಠ ನಾಯಕರನ್ನು ಕಳೆದುಕೊಂಡೆವು ಎಂಬ ವೇದನೆಯಾಗಿ, ಅವರ ಸ್ಥಾನ ತುಂಬುವವರು ಯಾರು ಎಂಬ ಶೂನ್ಯ ತರ್ಪಣರಾಗಿ, ಗೌರವಭಾವಗಳನ್ನು ಹೊರಹೊಮ್ಮಿಸುವ ತಲೆಬರಹ ನೀಡುವುದು ಪತ್ರಿಕೆಯ ಸಂಪಾದಕರಿಗೆ ದೊಡ್ಡ ಸವಾಲು. ಓದಗರಿಗೆ ಅದೊಂದು ದೊಡ್ಡ ಕುತೂಹಲ.


ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ತಂಗತ ಸುದ್ದಿಯನ್ನು ಯಾವ ಯಾವ ಪತ್ರಿಕೆಗಳು ಹೇಗೆಲ್ಲಾ ಹೆಡ್ಡಿಂಗ್‌ಗಳನ್ನು ಕೊಟ್ಟಿವೆ ಎಂಬುದರ ಗುಚ್ಛವಿದು. ನಿಮ್ಮ ಮನಕ್ಕೆ ಮುಟ್ಟಿದ ಹೆಡ್‌ಲೈನ್‌ ಯಾವುದು ಎಂದು ಕಮೆಂಟ್‌ ಮಾಡಿ.

ವಿಜಯ ಕರ್ನಾಟಕ

ಪ್ರಜಾವಾಣಿ

ವಿಜಯವಾಣಿ

ಕನ್ನಡ ಪ್ರಭ

ಉದಯವಾಣಿ

ವಿಶ್ವವಾಣಿ

ಸಂಯುಕ್ತ ಕರ್ನಾಟಕ

ಹೊಸ ದಿಗಂತ

ದಿ ಟೈಮ್ಸ್‌ ಆಫ್‌ ಇಂಡಿಯಾ

ದಿ ಇಂಡಿಯನ್‌ ಎಕ್ಸ್‌ಪ್ರೆಸ್‌

ದಿ ಟೆಲಿಗ್ರಾಫ್‌

ಹಿಂದೂಸ್ತಾನ್‌ ಟೈಮ್ಸ್‌

ಮಲಯಾಳಂ ಮನೋರಮ
ವಾಜಪೇಯಿ ಕಿ ರಾಷ್ಟ್ರತಿಂಡೆ ಅಂದ್ಯಾಂಜಲಿ (ವಾಜಪೇಯಿಗೆ ರಾಷ್ಟ್ರದ ಶ್ರದ್ಧಾಂಜಲಿ ಎಂದರ್ಥ).
ಕೇರಳದ ಜನತೆಗೆ ಭಾರಿ ಮಳೆ, ಪ್ರವಾಹ ಹೊಡತ ಭೀಕರವಾಗಿರುವ ಹಿನ್ನೆಲೆ ವಾಜಪೇಯಿ ಅವರ ಸಾವಿನ ಸುದ್ದಿ ಆ್ಯಂಕರ್‌ ಸ್ಟೋರಿಗೆ ಸೀಮಿತಿಗೊಳಿಸಿದ್ದಾರೆ.

ದಿನ ಮಲರ್‌ (ತಮಿಳ್‌)
ಮುನ್ನಾಳ್‌ ಪ್ರಧಮರ್‌ ವಾಜಪೇಯಿ ಕಾಲಮಾನಂ
(ಮಾಜಿ ಪ್ರಧಾನಿ ವಾಜಪೇಯಿ ಅಸ್ತಂಗತ ಎಂಬರ್ಥ)

ರಾಜಸ್ತಾನ್‌ ಪತ್ರಿಕಾ
ಅಟಲ್‌ - ಮೇ ಜೀ ಬರ್‌ ಜಿಯಾ ... ಲೌಟಕರ್‌ ಆವುಂಗಾ (ನಾನು ಮನಸ್ ತೃಪ್ತಿ ಬದುಕಿದೆ.. ಮತ್ತೆ ಮರಳಿ ಬರ್ತೆನೆ)

ಸಾಮ್ನಾ (ಮರಾಠಿ)
ವಾಜಪೇಯಿಂಚೆ ಮಹಾನಿರ್ವಾಣ (ವಾಜಪೇಯಿ ಮಹಾ ವಿಯೋಗ ಎಂದರ್ಥ)

ಕಣ್ಣುಮೂಸಿನ ಕರ್ಮಯೋಗಿ
(ಕಣ್ಣುಮುಚ್ಚಿದ ಕರ್ಮಯೋಗಿ ಎಂದರ್ಥ)

ಡಾನ್‌ (ಪಾಕಿಸ್ತಾನ ಪತ್ರಿಕೆ)
ವಾಜಪೇಯಿ, ಪಾರ್ಟಿಸನ್ ಆಫ್‌ ಪೀಸ್‌ ವಿತ್‌ ಪಾಕಿಸ್ತಾನ ಡೈಸ್‌
ಪಾಕಿಸ್ತಾನ ಜತೆಗಿನ ಶಾಂತಿಯ ಪ್ರತಿಪಾದಕ ವಾಜಪೇಯಿ ನಿಧನ ಎಂದು ಮುಖಪುಟದ ಸ್ಲಗ್‌ನಲ್ಲಿ ಪ್ರಕಟಿಸಿದ್ದು, ಒಳಗಿನ ಪುಟಗಳಲ್ಲಿ ವಿವರವಾಗಿ ಪ್ರಕಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ