ಆ್ಯಪ್ನಗರ

ಎನ್‌ಐಆರ್‌ಎಫ್‌ ರಾಯಂಕಿಂಗ್‌ ವಿರುದ್ಧ ನ್ಯಾಯಾಲಯಕ್ಕೆ

ಅಂಕಿ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳದೆ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ರಾರ‍ಯಂಕಿಂಗ್‌ ...

Vijaya Karnataka 13 Apr 2019, 5:00 am
ಬೆಂಗಳೂರು: ಅಂಕಿ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳದೆ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ರಾರ‍ಯಂಕಿಂಗ್‌ ಫ್ರೇಮ್‌ವರ್ಕ್‌(ಎನ್‌ಐಆರ್‌ಎಫ್‌) ನಲ್ಲಿ ಪಿಇಎಸ್‌ ವಿಶ್ವವಿದ್ಯಾಲಯಕ್ಕೆ 149 ನೇ ಸ್ಥಾನ ನೀಡಲಾಗಿದೆ. ಈ ತಪ್ಪನ್ನು ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಿವಿ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ ತಿಳಿಸಿದ್ದಾರೆ.
Vijaya Karnataka Web univercity  loco


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''2019 ನೇ ಸಾಲಿನ ರಾರ‍ಯಂಕಿಂಗ್‌ನಲ್ಲಿ ವಿವಿಗೆ 149 ನೇ ಸ್ಥಾನ ದೊರೆತಿದೆ. 2016 ರಲ್ಲಿ 98, 2017 ರಲ್ಲಿ 94 ಹಾಗೂ 2018 ರಲ್ಲಿ 99 ನೇ ರಾರ‍ಯಂಕ್‌ ದೊರೆತಿತ್ತು. ಪ್ರತಿ ವರ್ಷ ವಿವಿ 100 ರೊಳಗೆ ಸ್ಥಾನ ಪಡೆಯುತ್ತಿತ್ತು. 2019 ನೇ ಸಾಲಿನಲ್ಲಿ ಪರಿಶೀಲನೆ ನಡೆಸುವಾಗ ವಿವಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಿ ವಿವಿಗೆ ಸರಿಯಾದ ಸ್ಥಾನ ನೀಡಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ,'' ಎಂದು ತಿಳಿಸಿದರು.

''ರಾರ‍ಯಂಕಿಂಗ್‌ ಪಟ್ಟಿ ಬಿಡುಗಡೆಯಾದಾಗಲೇ ಈ ತಪ್ಪಿನ ಕುರಿತು ಎನ್‌ಐಆರ್‌ಎಫ್‌ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ತಪ್ಪನ್ನು ಸರಿಪಡಿಸಿ ಪರಿಷ್ಕರಿಸಿದ ಪಟ್ಟಿ ಬಿಡುಗಡೆ ಮಾಡಬೇಕೆಂದೂ ಕೋರಲಾಗಿದೆ. ಅಧಿಕಾರಿಗಳ ಜತೆಗೆ ದೂರವಾಣಿಯಲ್ಲೂ ಚರ್ಚೆ ನಡೆಸಲಾಗಿದೆ. ಆದರೆ ಇದನ್ನು ಕಡೆಗಣಿಸಿ ಒಂದು ವಾರದ ಬಳಿಕ ದಾಖಲೆ ಸಮೇತ ಕಚೇರಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಕಡಿಮೆ ರಾರ‍ಯಂಕ್‌ ಬಂದಿರುವುದರಿಂದ ವಿದ್ಯಾರ್ಥಿಗಳ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬಂದಿದೆ,'' ಎಂದರು.

ವಿವಿ ಪ್ರಾಂಶುಪಾಲ ಪ್ರೊ.ಶ್ರೀಧರ್‌, ಕುಲಸಚಿವ ಕೃಷ್ಣಮೂರ್ತಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ