ಆ್ಯಪ್ನಗರ

ಸಿದ್ದು-ನನ್ನ ನಡುವೆ ವೈರತ್ವವಿಲ್ಲ: ಪರಮೇಶ್ವರ

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ವೈರತ್ವವಿಲ್ಲಎಂದು ಮಾಜಿ ಡಿಸಿಎಂ ಜಿಪರಮೇಶ್ವರ ಹೇಳಿದ್ದಾರೆ

Vijaya Karnataka 20 Sep 2019, 5:00 am
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ವೈರತ್ವವಿಲ್ಲಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ ಹೇಳಿದ್ದಾರೆ.
Vijaya Karnataka Web no deffrence between siddu and me says parmeshwar
ಸಿದ್ದು-ನನ್ನ ನಡುವೆ ವೈರತ್ವವಿಲ್ಲ: ಪರಮೇಶ್ವರ


ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ''ಡಿ.ಕೆ.ಶಿವಕುಮಾರ್‌ ಆರೋಗ್ಯ ವಿಚಾರಿಸಲು ದಿಲ್ಲಿಗೆ ಹೋಗಿದ್ದೆ. ಇದೇ ಸಂದರ್ಭದಲ್ಲಿಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ರಾಜ್ಯದಲ್ಲಿಪಕ್ಷ ಬಲಪಡಿಸುವ ಬಗ್ಗೆ ಅವರು ಮಾತನಾಡಿದ್ದಾರೆ. ದಿಲ್ಲಿಗೆ ಹೋದಾಗ ಸೋನಿಯಾ ಸೇರಿದಂತೆ ನಮ್ಮ ಮುಖಂಡರನ್ನು ಭೇಟಿಯಾಗುವುದು ಸಂಪ್ರದಾಯ. ಇದರ ಹೊರತಾಗಿ ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಬಗ್ಗೆ ಗೊಂದಲ ಉಂಟು ಮಾಡುವುದು ಸರಿಯಲ್ಲ. ದಿಲ್ಲಿಯಲ್ಲಿಇದ್ದದ್ದರಿಂದ ಸಿಎಲ್‌ಪಿ ಸಭೆಗೆ ಬರಲು ಸಾಧ್ಯವಾಗಿರಲಿಲ್ಲ,'' ಎಂದರು.

''ಕಳೆದೊಂದು ವರ್ಷದಿಂದಲೂ ಸೋನಿಯಾರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ವೇಳೆ ಡಿಕೆಶಿ ಆರೋಗ್ಯದ ಬಗ್ಗೆಯೂ ಅವರಿಗೆ ಮಾಹಿತಿ ನೀಡಿದ್ದೇನೆ. ಡಿಸೆಂಬರ್‌ನಲ್ಲಿಮಧ್ಯಂತರ ಚುನಾವಣೆ ನಡೆಯುವ ಸುದ್ದಿ ಕೇಳಿ ಬರುತ್ತಿದೆ. ಈ ಕುರಿತೂ ಸೋನಿಯಾ ಅವರೊಂದಿಗೆ ಸಮಾಲೋಚಿಸಲಾಗಿದೆ. ರಾಜ್ಯದಲ್ಲಿಪಕ್ಷವನ್ನು ಬಲಪಡಿಸಲು ಸೋನಿಯಾ ಸಲಹೆ ನೀಡಿದ್ದಾರೆ. ಅದನ್ನು ಬಿಟ್ಟು ಬೇರೆ ಯಾವ ಚರ್ಚೆಯೂ ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸುವ ಪ್ರಸಂಗವೇ ಬರುವುದಿಲ್ಲ. ಪ್ರತಿಪಕ್ಷದ ನಾಯಕರ ಸ್ಥಾನದ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತದೆ,'' ಎಂದು ತಿಳಿಸಿದರು.

ಸಾಮೂಹಿಕ ನಾಯಕತ್ವ

''ಸಿದ್ದರಾಮಯ್ಯ ಮತ್ತು ನನ್ನ ನಡುವೆ ವೈರತ್ಯ ಇರುವಂತೆ ಬಿಂಬಿಸಿದ್ದರಲ್ಲಿಯಾರದೋ ಕೈವಾಡ ಇರುವಂತಿದೆ. ನಾನು ಮೂಲತಃ ಕಾಂಗ್ರಸಿಗ. ಕೊನೆವರೆಗೂ ಇಲ್ಲಿಯೇ ಇರುತ್ತೇನೆ. ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಪಕ್ಷದ ಸಿದ್ಧಾಂತ ಒಪ್ಪಿದವರಾಗಿದ್ದಾರೆ. ಹೊರಗಿಂದ ಬಂದವರು, ಮೂಲ ಕಾಂಗ್ರೆಸಿಗರು ಎಂಬ ವ್ಯತ್ಯಾಸವೂ ಇಲ್ಲ. ನಾವೆಲ್ಲಸೇರಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ. ಒಬ್ಬರೇ ಪಕ್ಷವನ್ನು ಬೆಳೆಸುತ್ತೇವೆ ಎನ್ನುವುದು ತಪ್ಪು. ಯಾರನ್ನೂ ದೂರವಿಟ್ಟು ಪಕ್ಷ ಕಟ್ಟುವುದೂ ಸಾಧ್ಯವಿಲ್ಲ. 2013ರಲ್ಲೂಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗಿದ್ದೆವು. ಸಾಮೂಹಿಕ ನಾಯಕತ್ವದಿಂದ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯ,'' ಎಂದು ಸ್ಪಷ್ಟವಾಗಿ ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ